ಮೋದಿಜೀ, ಈ ನಾಟಕಕ್ಕೆ ಎಷ್ಟು ಹಣ ತಗಲಿರಬಹುದು? ಪಾಕ್ ಸಚಿವನ ಪ್ರಶ್ನೆ

Recommended Video

      ಪಾಕಿಸ್ತಾನದ ಮಂತ್ರಿ ಮೋದಿಯನ್ನು ಅಣುಕಿಸಿದ್ದೇಕೆ ? | Oneindia Kannada

      ನವದೆಹಲಿ, ಆ 24: ಫ್ರಾನ್ಸ್ ನಲ್ಲಿ ಪ್ರಧಾನಿ ಮೋದಿಗೆ ಸಿಗುತ್ತಿರುವ ಅಭೂತಪೂರ್ವ ಸ್ಪಂದನೆಯಿಂದ ಕಸಿವಿಸಿಗೊಳಗಾಗಿರುವ ಪಾಕಿಸ್ತಾನ, ಹತಾಶೆಯ ಹೇಳಿಕೆಯನ್ನು ನೀಡುತ್ತಿದೆ.

      ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವ ಫಾವದ್ ಹುಸೇನ್ ಪಿಎಂ ಮೋದಿಯವರ ವಿಡಿಯೋ ಟ್ವೀಟ್ ಒಂದನ್ನು ರಿಟ್ವೀಟ್ ಮಾಡಿ, ಅದಕ್ಕೆ " ಈ ನಾಟಕಕ್ಕೆ ಎಷ್ಟು ದುಡ್ಡು ಖರ್ಚಾಗಿದೆ" ಎನ್ನುವ ವಿವಾದಕಾರಿ ಒಕ್ಕಣೆಯನ್ನು ಬರೆದಿದ್ದಾರೆ.

      ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ, ವಿಶ್ವದ ಇತರ ರಾಷ್ಟ್ರಗಳ ಮುಸ್ಲಿಮರು ತಿರುಗಿಬೀಳುತ್ತಾರೆ ಎಂದು ಪಾಕಿಸ್ತಾನ, ಭಾರತಕ್ಕೆ ಎಚ್ಚರಿಕೆ ನೀಡಿತ್ತು.

      A Roaring Welcome To Indian PM Modi In France, Jealous Pak Minister Funny Tweet

      ಆದರೆ, ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಆಗಿದ್ದೇ ಬೇರೆ. ವಿಮಾನ ನಿಲ್ದಾಣದಲ್ಲೇ ವೊಹ್ರಾ ಮುಸ್ಲಿಮರು, ತ್ರಿವರ್ಣ ಧ್ವಜದೊಂದಿಗೆ, 'ಭಾರತ್ ಮಾತಾ ಕೀ ಜೈ' ಎನ್ನುವ ಘೋಷಣೆಯನ್ನು ಮೊಳಗಿಸುತ್ತಾ, ಅದ್ದೂರಿಯಾಗಿ ಮೋದಿಯನ್ನು ಸ್ವಾಗತಿಸಿದ್ದರು.

      ಪಾಕ್ ಸಚಿವನ ವ್ಯಂಗ್ಯ ಟ್ವೀಟ್ ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಭಾರತದ ಮೇಲಿನ ನಿಮ್ಮ ಹೊಟ್ಟೆಕಿಚ್ಚು ಇದರಿಂದ ಸಾಬೀತಾಗಿದೆ. ನೀವೊಬ್ಬ ಬಿಕಾರಿ, ಭಾರತ ವಿಶ್ವದ ಐದನೇ ಶಕ್ತಿಶಾಲಿ ರಾಷ್ಟ್ರ, ನಿನಗೇನು ಗೊತ್ತು, ಭಾರತದ ಶಕ್ತಿ.. ಹೀಗೆ ಹತ್ತು ಹಲವಾರು ಕಾಮೆಂಟುಗಳು ಈ ಟ್ವೀಟಿಗೆ ಬಂದಿವೆ.

      ಆರ್ಟಿಕಲ್ 370 ರದ್ದತಿಯ ವಿಚಾರದಲ್ಲಿ ಫ್ರಾನ್ಸ್ ಮತ್ತು ಅರಬ್ ಸಂಂಯುಕ್ತ ಸಂಸ್ಥಾನ (ಯುಎಇ), ಈಗಾಗಲೇ ಭಾರತಕ್ಕೆ ಬೆಂಬಲ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+