ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಫಾಲ್ಗುಣಿ ನಾಯರ್ ಮೊದಲಿಗರು!

ನವದೆಹಲಿ, ಸೆಪ್ಟೆಂಬರ್ 21: ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022ರ ಪ್ರಕಾರ, ನೈಕಾ (Nykaa) ಸಂಸ್ಥಾಪಕ ಫಾಲ್ಗುಣಿ ನಾಯರ್ ಬುಧವಾರ ಕಿರಣ್ ಮಜುಂದಾರ್-ಶಾ ಅವರನ್ನು ಹಿಂದಿಕ್ಕಿ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.

ಹುರುನ್ ಇಂಡಿಯಾ ಬಿಡುಗಡೆಗೊಳಿಸಿರುವ ದೇಶದ ಶ್ರೀಮಂತ ಮಹಿಳೆಯರ ಪಟ್ಟಿಯ ಪ್ರಕಾರ, 59 ವರ್ಷದ ಉದ್ಯಮಿ ಬಯೋಕಾನ್‌ನ ಕಿರಣ್ ಮಜುಂದಾರ್ ಶಾ ಅನ್ನು ಫಾಲ್ಗುಣಿ ನಾಯರ್ ಹಿಂದಿಕ್ಕಿದ್ದಾರೆ ಎಂದು ವರದಿಯಾಗಿದೆ.

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ Nykaa ಯಶಸ್ವಿ ಪಟ್ಟಿಯೊಂದಿಗೆ, ಫಾಲ್ಗುಣಿ ನಾಯರ್ ಅವರು 'ಬಯೋಟೆಕ್ ಕ್ವೀನ್' ಕಿರಣ್ ಮಜುಂದಾರ್-ಶಾ ಅವರನ್ನು ಹಿಂದಿಕ್ಕಿ IIFL ವೆಲ್ತ್ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2022ರಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ.

Richest Woman In India: Falguni Nayar Surpasses Kiran Mazumdar-Shaw To Become top in list

ಶೇ.50ರಷ್ಟು ಷೇರುಗಳನ್ನು ಹೊಂದಿರುವ ನಾಯರ್:

ನೈಕಾ ಷೇರುಗಳ ಅರ್ಧದಷ್ಟು ಮಾಲೀಕತ್ವವನ್ನು ಹೊಂದಿರುವ ಫಾಲ್ಗುಣಿ ನಾಯರ್, 6.5 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಏಕೆಂದರೆ ಅವರ ಕಂಪನಿಯ ಷೇರುಗಳು ದಿನದ ವಹಿವಾಟು ಪ್ರಾರಂಭಿಸಿದಾಗ ಶೇ.89 ಪ್ರತಿಶತಕ್ಕೆ ಏರಿಕೆ ಕಂಡಿದೆ. ಇದಲ್ಲದೆ, ನಾಯರ್ ದೇಶದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದು, ರೇಖಾ ಜುಂಜುನ್ವಾಲಾ ರೇರ್ ಎಂಟರ್‌ಪ್ರೈಸಸ್ ನಂತರದ ಸ್ಥಾನದಲ್ಲಿದ್ದಾರೆ.

ಫಾಲ್ಗುಣಿ ನಾಯರ್ ಮತ್ತು ಅವರ ಕುಟುಂಬದ ನಿವ್ವಳ ಸಂಪತ್ತು ವರ್ಷದಲ್ಲಿ 30,000 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಅವರ ಸಂಚಿತ ಸಂಪತ್ತು ಕೂಡ ಶೇ.345 ಪ್ರತಿಶತದಷ್ಟು ಹೆಚ್ಚಾಗಿದ್ದು, ಸುಮಾರು 38,700 ಕೋಟಿ ರೂಪಾಯಿ ಆಗಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ.

ಸಂಪತ್ತು ಸೇರ್ಪಡೆಗೆ ಸಂಬಂಧಿಸಿದಂತೆ, ನಾಯರ್ ಟಾಪ್-10 ಗೇನರ್‌ಗಳಲ್ಲಿ ಐದನೇ ಸ್ಥಾನದಲ್ಲಿದ್ದು, ಈ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಏಕೈಕ ಮಹಿಳೆ ಎನಿಸಿಕೊಂಡಿದ್ದಾರೆ. ಕುತೂಹಲ ಎಂದರೆ ಗೌತಮ್ ಅದಾನಿ, ಮುಖೇಶ್ ಅಂಬಾನಿ ಮತ್ತು ಸೈರಸ್ ಎಸ್ ಪೂನಾವಾಲಾ ಅವರ ಪಟ್ಟಿಯಲ್ಲೇ ನಾಯರ್ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ 2012 ರಲ್ಲಿ ಫಾಲ್ಗುಣಿ ನಾಯರ್ ನೈಕಾ ಕಲ್ಪನೆಯೊಂದಿಗೆ ಬಂದಿದ್ದು, ಇದು ಆನ್‌ಲೈನ್‌ನಲ್ಲಿ ದೇಶದ ಮಹಿಳೆಯರು ಮತ್ತು ಪುರುಷರಿಗೆ ಸೌಂದರ್ಯ ಉತ್ಪನ್ನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಈ ವರ್ಷದ ಆರಂಭದಲ್ಲಿ Nykaa ಸಂಸ್ಥಾಪಕ ಫಾಲ್ಗುಣಿ ನಾಯರ್ ಅವರನ್ನು 2021ರ ವರ್ಷದ ಆರ್ಥಿಕ ವರ್ಷದ ಉದ್ಯಮಿ ಎಂದು ಹೆಸರಿಸಲಾಯಿತು. ಈಗ 9 ಜೂನ್ 2022 ರಂದು ಆರ್ಥಿಕ ವರ್ಷದ ವಿಶ್ವ ವಾಣಿಜ್ಯೋದ್ಯಮಿ ಪ್ರಶಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಸಲಹಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ 2021ರಲ್ಲಿ ಯುನಿಕಾರ್ನ್ ಷೇರುಗಳು ಭಾರತೀಯ ಷೇರುಗಳಲ್ಲಿ ಕನಸಿನ ಚೊಚ್ಚಲ ಪ್ರವೇಶ ಮಾಡಿದ ಕಾರಣ ಫಾಲ್ಗುಣಿ ನಾಯರ್ ಎಲೈಟ್ ಬಿಲಿಯನೇರ್ ಕ್ಲಬ್‌ಗೆ ಪ್ರವೇಶಿಸಿದ್ದರು.

ಕಳೆದ 2012ರಲ್ಲಿ ಸೌಂದರ್ಯ ಉತ್ಪನ್ನ ಮಾರಾಟ:

2012ರಲ್ಲಿ ಸೌಂದರ್ಯ ಉತ್ಪನ್ನಗಳನ್ನು ಮಾರಾಟ ಮಾಡಲು ಡಿಜಿಟಲ್ ಮಾರ್ಗವನ್ನು ಉದ್ಯಮಿ ಫಾಲ್ಗುಣಿ ನಾಯರ್ ಆಯ್ಕೆ ಮಾಡಿಕೊಂಡರು. ಆ ಮೂಲಕ ಲಾಭದಾಯಕ ಸ್ಟಾರ್ಟ್ ಅಪ್ ಆಗಿ ನೈಕಾ ಕೆಲಸವನ್ನು ಶುರು ಮಾಡಿತು. ಕಳೆದ ಎರಡು ವರ್ಷಗಳಲ್ಲಿ, ಅವರು ಸೌಂದರ್ಯದಿಂದ ಫ್ಯಾಷನ್ ಮತ್ತು ಜೀವನಶೈಲಿಗೆ ವೈವಿಧ್ಯಗೊಳಿಸಿದ್ದು, 2,600ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳು ಮತ್ತು 100ಕ್ಕೂ ಹೆಚ್ಚು ಆಫ್‌ಲೈನ್ ಸ್ಟೋರ್‌ಗಳನ್ನು ಹೊಂದಿದ್ದಾರೆ. ಈ ಕಂಪನಿಯು ಇತ್ತೀಚೆಗೆ ಬ್ಲಾಕ್ಬಸ್ಟರ್ IPO ಮೂಲಕ ವಿಸ್ತರಣೆಗಾಗಿ ಹೊಸ ಬಂಡವಾಳವನ್ನು ಸಂಗ್ರಹಿಸಿದೆ. ಫಾಲ್ಗುಣಿ ಅವರು 2019 ರಲ್ಲಿ ಸ್ಟಾರ್ಟ್-ಅಪ್ ವಿಭಾಗದಲ್ಲಿ EY ವರ್ಷದ ಉದ್ಯಮಿ ಪ್ರಶಸ್ತಿಯನ್ನು ಪಡೆದಿದ್ದಾರೆ, "ಎಂದು ಹೇಳಿಕೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+