ರಾಷ್ಟ್ರಪತಿ ಪದಗ್ರಹಣ ಕಾರ್ಯಕ್ರಮಕ್ಕೆ ಅಭ್ಯಾಸ ಆರಂಭ
ನವದೆಹಲಿ, ಜುಲೈ 17: ನೂತನ ರಾಷ್ಟ್ರಪತಿ ಪದಗ್ರಹಣ ಕಾರ್ಯಕ್ರಮಕ್ಕೆ ಪೂರ್ವಾಭ್ಯಾಸ ಇಂದಿನಿಂದ ಆರಂಭವಾಗಿದೆ.
ದೆಹಲಿಯ ವಿಜಯ್ ಚೌಕ್ ನಲ್ಲಿ ಅಭ್ಯಾಸ ಆರಂಭವಾಗಿದೆ. "ಜುಲೈ 23ರ ಸಂಜೆ ರಾಷ್ಟ್ರಪತಿಗಳಿಗೆ ವಿದಾಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಸಂಸದರು ತಾವು ಸಹಿ ಹಾಕಿದ ಕಾಫಿಟೇಬಲ್ ಬುಕ್ ನ್ನು ರಾಷ್ಟ್ರಪತಿಗಳಿಗೆ ನೀಡಲಿದ್ದಾರೆ," ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.

ಜುಲೈ 24ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವಧಿ ಅಂತ್ಯವಾಗಲಿದ್ದು ನೂತನ ರಾಷ್ಟ್ರಪತಿಗಳ ಪದಗ್ರಹಣ ಜುಲೈ 25ರಂದು ನಡೆಯಲಿದೆ. ಇದಕ್ಕಾಗಿ ಪೂರ್ವಾಭ್ಯಾಸ ಆರಂಭಿಸಲಾಗಿದೆ.












Click it and Unblock the Notifications