100 ರೂ. ಸ್ಟಾಂಪ್ ಪೇಪರ್ ಮೇಲೆ ತಲಾಖ್ ಸಂದೇಶ!
ಥಾಣೆ, ಜನವರಿ 30: ತ್ರಿವಳಿ ತಲಾಖ್ ನಿಷೇಧಿಸುವ ಕುರಿತ ಮಸೂದೆ ಮಂಡನೆಗೆ ರಾಜ್ಯಸಭೆಯಲ್ಲಿ ಚರ್ಚೆ ನಡೆಯುತ್ತಿರುವ ಈ ಹೊತ್ತಲ್ಲಿ, ಮಹಿಳೆಯೊಬ್ಬರಿಗೆ ಆಕೆಯ ಪತಿ 100 ರೂ. ಸ್ಟಾಂಪ್ ಪೇಪರ್ ಮೇಲೆ ತಲಾಖ್ (ವಿಚ್ಛೇದನ) ಸಂದೇಶ ಕಳಿಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಸೋಮವಾರದಂದು ನೂರು ರೂ. ಸ್ಟಾಂಫ್ ಪೇಪರ್ ನಲ್ಲಿ ತಲಾಖ್ ಸಂದೇಶ ಸ್ವೀಕರಿಸುತ್ತಿದ್ದಂತೆಯೇ ನನಗೆ ದಿಗ್ಭ್ರಮೆಯಾಯಿತು ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ಶಬ್ನಮ್. ಪತಿ ತನಗೆ ನಿರಂತರವಾಗಿ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದ. ಆದರೆ ನಮ್ಮ ತವರು ಮನೆಯಲ್ಲಿ ಬಡತನವಿದ್ದಿದ್ದರಿಂದ ನನಗೆ ಹಣ ನೀಡಲು ಸಾಧ್ಯವಾಗಿರಲಿಲ್ಲ. ನಾನು ತವರು ಮನೆಗೆ ಹೋಗಿದ್ದ ಸಮಯದಲ್ಲಿ ನನಗೆ ವಿಚ್ಛೇದನ ಪತ್ರ ಸಿಕ್ಕಿದೆ. ನನಗೆ ಈ ಬಗ್ಗೆ ಏನೊಂದೂ ಗೊತ್ತಿಲ್ಲ ಎಂದು ಆಕೆ ಹೇಳಿಕೊಂಡಿದ್ದಾರೆ.
'ನನಗೆ ನ್ಯಾಯ ಬೇಕು. ಹೀಗೆ ಪತ್ನಿಯರಿಗೆ ಏಕಾ ಏಕಿ ತಲಾಖ್ ಹೇಳುವ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಶಬ್ನಮ್ ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದ ಹಾಪುರ ಎಂಬಲ್ಲಿ ನಿನ್ನೆ ತಾನೇ ಇಂಥದೇ ಘಟನೆ ನಡೆದಿತ್ತು. ತನ್ನ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯನ್ನೇ ಊರಿನ ಪಂಚಾಯಿತಿಯ ಆದೇಶದಂತೆ ಮದುವೆಯಾಗಿದ್ದ ಯುವತಿ, ಆತನಿಂದ ಮದುವೆಯಾಗಿ ಒಂದು ವರ್ಷಕ್ಕೆ ಮೊದಲೇ ತಲಾಖ್ ಹೇಳಿಸಿಕೊಂಡಿದ್ದಾಳೆ!












Click it and Unblock the Notifications