ಫಾಸ್ಟ್ಯಾಗ್‌ಗೆ ಹಣ ಹಾಕಲು ಇನ್ನಷ್ಟು ಅವಕಾಶ ನೀಡಿದ ಆರ್‌ಬಿಐ
ನವದೆಹಲಿ, ಡಿಸೆಂಬರ್ 31: ಫಾಸ್ಟ್ಯಾಗ್ ಬಳಕೆದಾರರು ತಮ್ಮ ಖಾತೆಗೆ ಹಣ ವರ್ಗಾಯಿಸಲು ಆರ್‌ಬಿಐ ಇನ್ನಷ್ಟು ಅವಕಾಶಗಳನ್ನು ನೀಡಿದೆ.
ಆರ್‌ಬಿಐನಿಂದ ಮಾನ್ಯತೆ ಪಡೆದಿರುವ ನಾನ್ ಬ್ಯಾಂಕಿಂಗ್ ಸಂಸ್ಥೆಗಳು ಪ್ರಿಪೇಯ್ಡ್ ವ್ಯಾಲೆಟ್‌ಗಳು ಹಾಗೂ ಯುಪಿಐ ಖಾತೆಗಳನ್ನು ನೇರವಾಗಿ ಫಾಸ್ಟ್ಯಾಗ್‌ನೊಂದಿಗೆ ಜೋಡಣೆ ಮಾಬಹುದು ಎಂದು ಆರ್‌ಬಿಐ ತಿಳಿಸಿದೆ.
ಇದಲ್ಲದೆ ಫಾಸ್ಟ್ಯಾಗ್ ಬಳಕೆದಾರರು ಈ ಖಾತೆಯನ್ನು ಪಾರ್ಕಿಂಗ್ ಹಣ ಪಾವತಿ ಇಂಧನ ಭರ್ತಿ ಹಾಗೂ ಇತರೆ ವಾಹನ ಸ್ನೇಹಿ ಉಪಯೋಗಗಳಿಗೆ ಬಳಸಲೂ ಕೂಡ ಅವಕಾಶ ನೀಡಲು ನಿರ್ಧರಿಸಿದೆ.

ಇದರಿಂದ ಫಾಸ್ಟ್ಯಾಗ್ ಇನ್ನಷ್ಟು ಬಳಕೆಸ್ನೇಹಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಿಸೆಂಬರ್ 15ರಿಂದಲೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಫಾಸ್ಟ್ಯಾಗ್‌ನ್ನು ಕಡ್ಡಾಯಗೊಳಿಸಿದೆ.
ಇಲ್ಲದಿದ್ದರೆ ಟೋಲ್‌ಗಳಲ್ಲಿ ವಾಹನ ಬಳಕೆದಾರರು ದುಪ್ಪಟ್ಟು ಶುಲ್ಕವನ್ನು ಭರಿಸಬೇಕಿದೆ. ಆದರೆ ಫಾಸ್ಟ್ಯಾಗ್‌ಖಾತೆಗೆ ಹಣ ವರ್ಗಾವಣೆ ಸಂಬಂಧ ಆರ್‌ಬಿಐ ಇನ್ನಷ್ಟು ಮನವಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆ ಡಿಸೆಂಬರ್ 1ರಿಂದಲೇ ಫಾಸ್ಟ್ಯಾಗ್‌ನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಇದನ್ನು ಡಿಸೆಂಬರ್ 15ರವರೆಗೆ ವಿಸ್ತರಿಸಲಾಗಿತ್ತು.












Click it and Unblock the Notifications