ಸಾಲಗಾರರ ಪಟ್ಟಿ ಪ್ರಕಟಿಸಲು ರಿಸರ್ವ್ ಬ್ಯಾಂಕ್ ನಕಾರ
1934ರ ರಿಸರ್ವ್ ಬ್ಯಾಂಕ್ ನ ಅಧಿನಿಯಮಗಳು ಹಾಗೂ ದೇಶದ ಆರ್ಥಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಸುಸ್ತಿದಾರರ ಪಟ್ಟಿ ಪ್ರಕಟಿಸದಿರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧಾರ.
ನವದೆಹಲಿ, ಮೇ 23: ಭಾರತದ ಬ್ಯಾಂಕುಗಳಲ್ಲಿ ಸಾಲ ಮಾಡಿ, ಸಾಲ ತೀರಿಸದೇ ಮೋಸ ಎಸಗಿರುವ ವ್ಯಕ್ತಿಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿರಾಕರಿಸಿದೆ.
2015ರಲ್ಲಿ ಈ ಬಗ್ಗೆ ಆದೇಶ ನೀಡಿದ್ದ ಸುಪ್ರಂ ಕೋರ್ಟ್, ಉದ್ದೇಶ ಪೂರ್ವಕ ಸುಸ್ತಿದಾರರ ಮಾಹಿತಿಗಳನ್ನು ಪ್ರಕಟಿಸುವಂತೆ ಸೂಚಿಸಿತ್ತು. ಆದರೆ, ಈ ಆದೇಶಕ್ಕೆ ಆರ್ ಬಿಐ ಸ್ಪಷ್ಟ ನಕಾರ ಸೂಚಿಸಿದೆ.

ತನ್ನ ನಡೆಯನ್ನು ಸಮರ್ಥಿಸಿಕೊಂಡಿರುವ ಆರ್ ಬಿಐ, ರಾಷ್ಟ್ರದ ಆರ್ಥಿಕ ಸುರಕ್ಷತೆಗಳನ್ನು ಗಮನದಲ್ಲಿಟ್ಟುಕೊಂಡು ಪಟ್ಟಿ ಪ್ರಕಟಿಸುವುದರಿಂದ ತಾನು ಹಿಂದೆ ಸರಿದಿರುವುದಾಗಿ ಹೇಳಿದೆ. ಅಲ್ಲದೆ, 1934ರ ರಿಸರ್ವ್ ಬ್ಯಾಂಕ್ ನಿಯಮಗಳು, ಉದ್ದೇಶ ಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆ ಮಾಡುವುದನ್ನು ನಿರ್ಬಂಧಿಸುತ್ತವಾದ್ದರಿಂದ ಇಂಥ ಪಟ್ಟಿಗಳನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.












Click it and Unblock the Notifications