Ratan Tata Passed Away: ಓಕೆ ಟಾಟಾ ಬೈ ಬೈ..ರತನ್ ಟಾಟಾ ಬಗ್ಗೆ ಪೇಟಿಯಂ ಸಿಇಒ ಟ್ವೀಟ್; ಭಾರೀ ವೈರಲ್
Ratan Tata Passed Away: ವಿಶ್ವ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದ ಪ್ರಸಿದ್ಧ ಉದ್ಯಮಿ ರತನ್ ಟಾಟಾ (86) ಅವರ ನಿಧನದಿಂದ ಭಾರತದ ಉದ್ಯಮ ಕ್ಷೇತ್ರ ಮಂಕಾಗಿದೆ. ಇನ್ನು ಅವರ ನಿಧನಕ್ಕೆ ಇಡೀ ಭಾರತ ಅಲ್ಲದೆ, ವಿಶ್ವವೇ ಅವರ ಸಾಧನೆಗಳನ್ನು ನೆನೆಯುತ್ತಾ ಸಂತಾಪ ಸೂಚಿಸಿದ್ದಾರೆ. ಇಂತಹದ್ದರ ನಡುವೆ ಪೇಟಿಯಂ ಸಿಇಓ ರತನ್ ಬಗ್ಗೆ ಮಾಡಿದ ಟ್ವಿಟರ್ ಪೋಸ್ಟ್‌ವೊಂದು ನೆಟ್ಟಿಗರನ್ನು ಕೆರಳಿಸುವಂತೆ ಮಾಡಿದೆ.
ಇನ್ನು 86ನೇ ವಯಸ್ಸಿನಲ್ಲಿ ನಿಧನರಾದ ದಂತಕಥೆ ರತನ್ ಟಾಟಾ ಅವರಿಗೆ ಭಾರತೀಯ ಟೆಕ್ ಸಿಇಒಗಳು ಮತ್ತು ಸಂಸ್ಥಾಪಕರು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ. ಭಾರತೀಯ ಉದ್ಯಮಕ್ಕೆ ಅಪಾರ ಕೊಡುಗೆಗಳನ್ನು ನೀಡಿರುವ ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರ ಅಗಲಿದ್ದು, ಇದರಿಂದ ಉದ್ಯಮ ಕ್ಷೇತ್ರ ಮಂಕಗಿದೆ ಅಂತಲೂ ಹೇಳಿದ್ದಾರೆ.

ರತನ್ ಟಾಟಾ ಅವರು ಶ್ರೀಮಂತರ ಪಟ್ಟಿಯಲ್ಲಿ ಇಲ್ಲದಿರಬಹುದು. ಆದರೆ ಅವರು ಬಡಜನರಿಗಾಗಿ ಮಾಡಿರುವ ಸಹಾಯ, ನೀಡಿರುವ ಉದ್ಯೋಗಗಳು ಎಂದಿಗೂ ಅಜರಾಮರ. ಅವರು ಶೇಕಡ 66 ಶೇರನ್ನು ಬಡವರಿಗಾಗಿಯೇ ಮೀಸಲಿರಿಸುತ್ತಿದ್ದರು. ಆದ್ದರಿಂದ ಶ್ರೀಮಂತರ ಪಟ್ಟಿಯಲ್ಲಿ ಇಲ್ಲ. ಹೀಗೆ ನೋಡೊದರೆ, ಅವರೇ ಅತೀ ದೊಡ್ಡ ಶ್ರೀಮಂತರು ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ಬರೀ ಹಣ ಇಟ್ಟುಕೊಂಡವನು ಮಾತ್ರ ಶ್ರೀಮಂತನಲ್ಲ, ಅದನ್ನೂ ಹೇಗೆ ಬಳಸುತ್ತಾರೋ ಅದರ ಮೇಲೇ ಶ್ರೀಮಂತಿಕೆ ನಿರ್ಧಾರವಾಗುತ್ತದೆ ಎನ್ನುವುದನ್ನು ಗಮನಿಸಲೇಬೇಕಾಗುತ್ತದೆ.
ಓಲಾ ಸಿಇಒ ಭವಿಶ್ ಅಗರ್ವಾಲ್, ಪೀಪಲ್ ಗ್ರೂಪ್ ಸಿಇಒ ಅನುಪಮ್ ಮಿತ್ತಲ್, ಶಿಯೋಮಿ ಮಾಜಿ ಸಿಇಒ ಮನು ಕುಮಾರ್ ಜೈನ್, ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಮತ್ತು ಭಾರತ್ಪೇ ಮಾಜಿ ಸಿಇಒ ಅಶ್ನೀರ್ ಗ್ರೋವರ್ ಸೇರಿದಂತೆ ಟೆಕ್ ಕ್ಷೇತದ ಅನೇಕ ಉದ್ಯಮಿಗಳು ಟಾಟಾ ಮಾಡಿರುವ ಕೆಲಸಗಳ ಬಗ್ಗೆ ಮೆಚ್ಚುಗೆಯ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ಇದರ ನಡುವೆಯೇ ಪೇಟಿಎಂ ಸಿಇಒ ವಿಜಯ್ ಶೇಖರ್ ಮಾಡಿರುವ ಒಂದೇ ಒಂದೇ ಟ್ವಿಟರ್ ಪೋಸ್ಟ್ ಇದೀಗ ನೆಟ್ಟಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.
ವಿಜಯ್ ಶೇಖರ್ ಶರ್ಮಾಗೆ ತರಾಟೆ: ಇದೀಗ ಮೊದಲಿಗೆ ರತನ್ ಟಾಟಾ ಅವರ ಸಾಧನೆಗಳನ್ನು ನೆನೆಯುತ್ತಾ ಸಂತಾಪವನ್ನು ಸೂಚಿಸಿದ್ದಾರೆ. ಆದರೆ, ಟ್ವಿಟರ್ ಪೇಜ್‌ನ ಕೊನೆಗೆ ಬರೆದುಕೊಂಡಿರುವ ಪೋಸ್ಟ್‌ವೊಂದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಎಚ್ಚೆತ್ತುಕೊಂಡು ಅದನ್ನು ಡಿಲೀಟ್ ಮಾಡಿದ್ದಾರೆ. ಅದರೆ, ಅದರ ಸ್ಕ್ರೀನ್ ಶಾಟ್ ಲಭ್ಯವಿದ್ದು, ಇದನ್ನಿಟ್ಟುಕೊಂಡೇ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ಶರ್ಮಾ ಅವರು ರತನ್ ಬಗ್ಗೆ ಮಾಡಿರುವ ಪೋಸ್ಟ್‌ನ ಸ್ಕ್ರೀನ್ ಶಾಟ್ ಫೋಟೋವನ್ನು ಶಿವಂ ಸೌರವ್ ಝಾ ಎನ್ನುವವರು ತಮ್ಮ ಟ್ವೀಟ್‌ನಲ್ಲಿ ಹಂಚಿಕೋಂಡಿದ್ದಾರೆ. ಅದರಲ್ಲಿ ಮೊದಲಿಗೆ ವಿಜಯ್ ಶೇಖರ್ ಶರ್ಮಾ ಅವರು "ರತನ್ ಟಾಟಾ ಟವರು ಪ್ರತಿ ಪೀಳಿಗೆಗೆ ಸ್ಫೂರ್ತಿ ನೀಡುವ ದಂತಕಥೆ. ಮುಂದಿನ ಪೀಳಿಗೆಯ ಉದ್ಯಮಿಗಳು ಭಾರತದ ಅತ್ಯಂತ ವಿನಮ್ರ ಉದ್ಯಮಿಯೊಂದಿಗೆ ಸಂವಹನ ನಡೆಸುವುದನ್ನ ತಪ್ಪಿಸಿಕೊಳ್ಳುತ್ತಾರೆ. ನಮಸ್ಕಾರಗಳು, ಓಕೆ ಟಾಟಾ ಬೈ ಬೈ" ಎಂದು ಬರೆದಿದ್ದಾರೆ. ಬಳಿಕ ಇದನ್ನು ಡಿಲೀಟ್ ಮಾಡಿದ್ದಾರೆ.
wtf is the last line pic.twitter.com/dOrIeMQH7c
— Shivam Sourav Jha (@ShivamSouravJha) October 10, 2024
ಇದೀಗ "ಓಕೆ ಟಾಟಾ ಬೈ ಬೈ" ಎಂಬ ಕೊನೆಯ ಸಾಲು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಟ್ವೀಟ್ ಬಳಕೆದಾರರು ವಿಜಯ್ ಶೇಖರ್ ಶರ್ಮಾ ಅವರ ಈ ಟ್ವೀಟ್ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ಈ ಪೋಸ್ಟ್‌ಗೆ "ಇಂಟರ್ನ್ ಸೆ ಲಿಖ್ವಾಯಾ ಹೋಗಾ" ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದು, ಇದು ಕಳಪೆಯಾಗಿ ರಚಿಸಲ್ಪಟ್ಟಿರಬಹುದು ಎಂದು ಸೂಚಿಸುತ್ತದೆ ಎಂದು ಹೇಳಿದರೆ, ಮತ್ತೊಬ್ಬರು ಇದು ಸೂಕ್ತವಲ್ಲ ಎಂದು ಹೇಳುವ ಮೂಲಕ ಕಿಡಿಕಾರಿದ್ದಾರೆ.












Click it and Unblock the Notifications