ದೂರು ಹಿಂಪಡೆಯದ ಅತ್ಯಾಚಾರ ಸಂತ್ರಸ್ತೆಗೆ ಬಹಿಷ್ಕಾರದ ಶಿಕ್ಷೆ!
ಚಿತ್ತೋರಗಢ, ಮೇ 11: ಆರೋಪಿಯ ವಿರುದ್ಧ ದೂರನ್ನು ವಾಪಸ್ ಪಡೆಯಲು ಒಪ್ಪದ ಅತ್ಯಅಚಾರ ಸಂತ್ರಸ್ತೆ ಮತ್ತು ಆಕೆಯ ಕುಟುಂಬವನ್ನು ಊರಿನಿಂದ ಬಹಿಷ್ಕರಿಸಿದ ಘಟನೆ ರಾಜಸ್ಥಾನದ ಚಿತ್ತೋರಗಢದಲ್ಲಿ ನಡೆದಿದೆ.
ಈ ನಿರ್ಧಾರವನ್ನು ಇಲ್ಲಿನ ಪಂಚಾಯಿತಿಯೇ ನೀಡಿದ್ದು, ಈ ಕುಟುಂಬಕ್ಕೆ ಯಾರೂ ಆಹಾರ, ಧಾನ್ಯ ಸಹಾಯ ಮಾಡುವಂತಿಲ್ಲ, ಇವರ ಬಳಿ ಯಾರೂ ಮಾತನಾಡುವಂತಿಲ್ಲ, ಅಲ್ಲದೆ ಕುಟುಂಬಸ್ಥರು 11,000 ರೂ ದಂಡ ತೆರಬೇಕು ಎಂದು ಪಂಚಾಯಿತಿ ಹೇಳಿದೆ.

ಯುವತಿಯೊಬ್ಬಳಿಗೆ ಮತ್ತು ಬರುವ ಔಷಧ ನೀಡಿದ್ದ ಕಾಮುಕನೊಬ್ಬ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಅದನ್ನು ವಿಡಿಯೋ ಸಹ ಮಾಡಿದ್ದ. ನಂತರ ಯುವತಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಈ ಸಂಬಂಧ ಸಂತ್ರಸ್ತೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ಪ್ರಗತಿಯಲ್ಲಿರುವಾಗಲೇ ದೂರನ್ನು ಹಿಂಪಡೆಯಬೇಕೆಂದು ಒತ್ತಡ ಹೇರಲಾಗಿತ್ತು. ಅದಕ್ಕೆ ಸಂತ್ರಸ್ತೆ ಮತ್ತು ಕುಟುಂಬ ಒಪ್ಪದ ಹಿನ್ನೆಲೆಯಲ್ಲಿ ಬಹುಷ್ಕಾರ ಹಾಕಲಾಗಿದೆ.












Click it and Unblock the Notifications