ಅತ್ಯಾಚಾರವಾಗಿದೆಯೆಂದು ಬೊಂಬೆಯ ಮೂಲಕ ವಿವಿರಿಸಿದ ಮೂಕ ಬಾಲಕಿ

ಧಾರ್ (ಮಧ್ಯಪ್ರದೇಶ), ಜೂನ್ 29: ಕಾಮುಕನೊಬ್ಬ 12 ವರ್ಷದ ಅಪ್ರಾಪ್ತ ಮೂಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಹೇಯ ಘಟನೆ ಮಧ್ಯಪ್ರದೇಶದ ಧಾರ್ ಪ್ರದೇಶದಲ್ಲಿ ನಡೆದಿದೆ.

ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿಕೊಳ್ಳುವುದಕ್ಕೆ ಆ ಬಾಲಕಿಗೆ ಮಾತು ಬಾರದ ಕಾರಣ, ಬಾಲಕಿಗೆ ಏನಾಗಿದೆ ಎಂಬುದನ್ನು ತಿಳಿಯಲು ಆಕೆಯ ಪೋಷಕರು ಹರಸಾಹಸ ಪಟ್ಟಿದ್ದಾರೆ. ಆದರೆ ಬಾಲಕಿಗೆ ಏನಂದು ವಿವರಿಸುವುದು ಎಂಬುದು ತಿಳಿದಿಲ್ಲ.

rape on speech impaired girl in Madhya Pradesh

ನಂತರ ಆನಂದ್ ಮೂಕ ಬಧಿರ್ ಎಂಬ ಸಂಸ್ಥೆಯ ಮುಖ್ಯಸ್ಥೆ ಮೋನಿಕಾ ಪುರೋಹಿತ್ ಅವರ ಸಹಾಯವನ್ನು ಪಾಲಕರು ಕೇಳಿದ್ದಾರೆ. ಆಕೆಗೆ ಸಮಾಧಾನ ಮಾಡಿದ ಮೋನಿಕಾ, ಎರಡು ಬೊಂಬೆಯನ್ನು ನೀಡಿ ಆ ಘಟನೆಯನ್ನು ಬೊಂಬೆಯ ಮೂಲಕ ವಿವರಿಸುವಂತೆ ಕೇಳಿದ್ದಾರೆ. ತನ್ನ ಮೇಲೆ ಅತ್ಯಾಚಾರವಾಗಿದೆ ಎಂಬುದನ್ನು ಎರಡು ಬೊಂಬೆಯ ಮೂಲಕ ಮೂಕ ಬಾಲಕಿ ವಿವರಿಸಿದ್ದಾಳೆ.

ಬಾಲಕಿಯ ಪಾಲಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಬಾಲಕಿ ನೀಡಿದ ವಿವರಣೆಯ ಅನ್ವಯ ಅಪರಾಧಿಯನ್ನು ಪತ್ತೆ ಮಾಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+