ಹನಿಪ್ರೀತ್ 'ಬೇಗೆ'ಯಲ್ಲಿ ಪತ್ನಿಯನ್ನೇ ಮರೆತ ರಾಮ್ ರಹೀಂ!
ಬಾಬಾ ರಾಮ್ ರಹೀಂ ಅವರನ್ನು ಜೈಲಿನಲ್ಲಿ ಭೇಟಿ ಮಾಡಬಹುದಾದ ವ್ಯಕ್ತಿಗಳ ಪಟ್ಟಿಯಲ್ಲಿ ಅವರ ಪತ್ನಿಯ ಹೆಸರಿಲ್ಲ. ದತ್ತುಪುತ್ರಿ ಹನಿಪ್ರೀತ್ ಸಿಂಗ್ ಸೇರಿದಂತೆ ಹಲವಾರು ಮಂದಿ ಹೆಸರಿದ್ದರೂ, ಪತ್ನಿ ಹೆಸರು ಮಾತ್ರ ಉಲ್ಲೇಖಿಸಿಲ್ಲ.
ರೋಹ್ಟಕ್, ಸೆಪ್ಟೆಂಬರ್ 5: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಪಂಗಡದ ಧರ್ಮಗುರು ರಾಮ್ ರಹೀಂ ಬಾಬಾ, ತನ್ನನ್ನು ಜೈಲಿನಲ್ಲಿ ಆಗಾಗ ಬಂದು ಭೇಟಿ ಮಾಡಬಹುದಾದ ವ್ಯಕ್ತಿಗಳ ಪಟ್ಟಿಯೊಂದನ್ನು ತಾನಿರುವ ಸುನಾರಿಯಾ ಜೈಲಿನ ಅಧಿಕಾರಿಗಳಿಗೆ ನೀಡಿದ್ದಾನೆ.
ಅದರಲ್ಲಿಆತನ ದತ್ತುಪುತ್ರಿ ಹನಿಪ್ರೀತ್ ಸಿಂಗ್ ಸೇರಿದಂತೆ ಹಲವಾರು ವ್ಯಕ್ತಿಗಳ ಹೆಸರುಗಳಿದ್ದರೂ, ಆತನ ಪತ್ನಿ ಹರ್ಜೀತ್ ಕೌರ್ ಹೆಸರನ್ನೇ ಆತ ನಮೂದಿಸಿಲ್ಲದಿರುವುದು ಕುತೂಹಲ ಕೆರಳಿಸಿದೆ.

ಇದು ಪ್ರಮಾದವಶಾತ್ ಆದ ಘಟನೆಯೇನಲ್ಲ. ಆ ಪಟ್ಟಿಯ ಪ್ರಕಾರ, ಆತನಿಗೆ ತನ್ನ ಪತ್ನಿಯನ್ನು ಭೇಟಿ ಮಾಡುವ ಮನಸ್ಸೇ ಇಲ್ಲ. ಇನ್ನು ಈ ಪಟ್ಟಿಯಲ್ಲಿ ಇರುವ ವ್ಯಕ್ತಿಗಳ ಹೆಸರುಗಳಲ್ಲಿ ಅಗ್ರಗಣ್ಯವಾಗಿ ಆತನ ದತ್ತುಪುತ್ರಿ ಎನಿಸಿರುವ ಹನಿಪ್ರೀತ್ ಸಿಂಗ್ ಅವರ ಹೆಸರಿದೆ. ಆನಂತರ, ಆತನ ತಾಯಿ ನಸೀಬ್ ಕೌರ್ ಹೆಸರಿದೆ.
ಆನಂತರ, ಮಗ ಜಸ್ಮೀತ್ ಇನ್ಸಾನ್, ಸೊಸೆ ಹುಸನ್ ಪ್ರೀತ್ ಇನ್ಸಾನ್, ಮಗಳು ಅಮರ್ ಪ್ರೀತ್ ಹಾಗೂ ಮತ್ತೊಬ್ಬ ಮಗಳು ಚರಣ್ ಪ್ರೀತ್, ಅಳಿಯಂದಿರಾದ ಶಾನ್ ಎ ಮೀತ್ ಹಾಗೂ ರುಹ್ ಎ ಮೀತ್, ಡೇರಾ ಸಂಸ್ಥೆಯ ಮುಖ್ಯಸ್ಥ ವಿಪಾಸನಾ ಮತ್ತು ಬಾಬಾನ ಹಳೆಯ ಹಾಗೂ ವಿಧೇಯ ಅನುಯಾಯಿ ದಾನ್ ಸಿಂಗ್ ಹೆಸರುಗಳಿವೆ. ಇಲ್ಲೆಲ್ಲೂ ತಮ್ಮ ಪತ್ನಿಯ ಹೆಸರನ್ನು ರಹೀಂ ಉಲ್ಲೇಖಿಸಿಲ್ಲದಿರುವುದು ಕುತೂಹಲ ಕೆರಳಿಸಿದೆ.
ಏತನ್ಮಧ್ಯೆ, ಹನಿಪ್ರೀತ್ ಸಿಂಗ್ ಳನ್ನು ಬಂಧಿಸಲು ಇತ್ತೀಚೆಗಷ್ಟೇ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದ ಹರ್ಯಾಣ ಪೊಲೀಸರಿಗೆ ಆಕೆ ನೇಪಾಳ ಗಡಿ ಭಾಗದಿಂದ ನುಸುಳಿಕೊಂಡು ದೇಶದಿಂದ ಪರಾರಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಮಾಹಿತಿಯನ್ನಿಟ್ಟುಕೊಂಡು ಅವರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications