ಬೀಫ್ ತಿಂದು ಅಣಕವಾಡಿದ ರಾಜದೀಪ್:ಶೇಮ್ ಲೆಸ್ ಫೆಲೋ ಅಂದ ಟ್ವಿಟ್ಟಿಗರು

Posted By:
Subscribe to Oneindia Kannada
   ಬೀಫ್ ತಿಂದು ಅಣಕವಾಡಿದ ರಾಜದೀಪ್:ಶೇಮ್ ಲೆಸ್ ಫೆಲೋ ಅಂದ ಟ್ವಿಟ್ಟಿಗರು| Oneindia Kannada

   ಬಿಜೆಪಿ, ನರೇಂದ್ರ ಮೋದಿ ಮತ್ತು ಬಲಪಂಥೀಯರ ವಿರುದ್ದ ತಮ್ಮನ್ನು ಗುರುತಿಸಿಕೊಂಡಿರುವ ಪತ್ರಕರ್ತ ಮತ್ತು ಇಂಡಿಯಾ ಟುಡೇ ಕನ್ಸಲ್ಟೆಂಟ್ ಎಡಿಟರ್ ರಾಜದೀಪ್ ಸರ್ದೇಸಾಯಿ, ದನದ ಮಾಂಸದ ವಿಚಾರದಲ್ಲಿ ಮತ್ತೆ ಟ್ವಿಟ್ಟಿಗರಿಂದ ಉಗಿಸಿಕೊಂಡಿದ್ದಾರೆ.

   ಯಾರಿಗೆ ಹೇಗೆ ಮರ್ಯಾದೆ ಕೊಡಬೇಕು ಅನ್ನುವುದನ್ನು ಮೊದಲು ಕಲಿಯಿರಿ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಕಿವಿಹಿಂಡಿಸಿಕೊಂಡಿದ್ದ ರಾಜದೀಪ್, ಕೊಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೀಫ್ ತಿಂದ ಬಗ್ಗೆ ಹೇಳಿದ್ದಾರೆ.

   ಡೆಮಾಕ್ರಾಸಿಸ್ XI ರಾಜ್ ದೀಪ್ ಪುಸ್ತಕ ಟ್ರೆಂಡಿಂಗ್!

   ಊಟದ ತಟ್ಟೆ ಅವರವರ ವಿಚಾರಕ್ಕೆ ಬಿಟ್ಟಿದ್ದಾಗಿದ್ದರೂ, ಬೀಫ್ ತಿಂದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ, "Guess I remain an anti national" ಎಂದು ತನ್ನ ಟ್ವೀಟ್ ನಲ್ಲಿ ಕಿಚಾಯಿಸಿ, ಟ್ವಿಟ್ಟಿಗರಿಂದ 'ಶೇಮ್ ಲೆಸ್ ಫೆಲೋ' ಎಂದು ರಾಜದೀಪ್ ಉಗಿಸಿಕೊಂಡಿದ್ದಾರೆ.

   ಶಶಿಧರನ್ ಪಜೂರ್ ಎನ್ನುವ ವ್ಯಕ್ತಿ, ಕೊಲ್ಕತ್ತಾದಲ್ಲಿ ನಡೆದ ಇಂಡಿಯಾ ಟುಡೇ ಕನ್ಕ್ಲೇವ್ ಕಾರ್ಯಕ್ರಮದಲ್ಲಿ, ದನದ ಮಾಂಸ ತಿಂದಿದ್ದನ್ನು ಮುಕ್ತವಾಗಿ ಹೇಳಿಕೊಂಡಿದ್ದಕ್ಕಾಗಿ ಮತ್ತು ಜಡ್ಜ್ ಲೋಯಾ ಅವರ ಸಂಶಯಾಸ್ಪದ ಸಾವಿನ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಕ್ಕೂ, ರಾಜದೀಪ್ ಅವರನ್ನು ಅಭಿನಂದಿಸಿದ್ದರು.

   ರಾಜ್ ದೀಪ್ ಸರ್ದೇಸಾಯಿ ಟ್ವಿಟ್ಟರ್ ಬಿಟ್ರರಂತೆ, ಹೌದೆ? ಯಾಕೆ?

   ಈ ಟ್ವೀಟಿಗಗೆ ತಕ್ಷಣ ಪ್ರತಿಕ್ರಿಯಿಸಿದ ರಾಜದೀಪ್, 'ನಾನು ದೇಶದ್ರೋಹಿಯಾಗಿ ಮುಂದುವರಿದಿದ್ದೇನೆಂದು ಅಂದುಕೊಂಡಿದ್ದೇನೆ' ಎಂದು ರಿಟ್ವೀಟ್ ಮಾಡಿದ್ದಾರೆ. ದನದ ಮಾಂಸ ತಿನ್ನುವವರು ದೇಶದ್ರೋಹಿಗಳು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡರೊಬ್ಬರು ನೀಡಿದ್ದ ಹೇಳಿಕೆಗೆ, ರಾಜದೀಪ್ ಅವರ ರಿಟ್ವೀಟ್ ಅಣಕವಾಡುವಂತಿತ್ತು. ಟ್ವಿಟ್ಟಿಗರ ಖಾರವಾದ ರಿಪ್ಲೈ..

   ದನದ ಮಾಂಸ ತಿಂದಿದ್ದನ್ನು ಮುಕ್ತವಾಗಿ ಹೇಳಿಕೊಂಡ ರಾಜದೀಪ್

   ದನದ ಮಾಂಸ ತಿಂದಿದ್ದನ್ನು ಮುಕ್ತವಾಗಿ ಹೇಳಿಕೊಂಡ ರಾಜದೀಪ್

   ಕೊಲ್ಕತ್ತಾದಲ್ಲಿ ನಡೆದ ಇಂಡಿಯಾ ಟುಡೇ ಕನ್ಕ್ಲೇವ್ ಕಾರ್ಯಕ್ರಮದಲ್ಲಿ , ದನದ ಮಾಂಸ ತಿಂದಿದ್ದನ್ನು ಮುಕ್ತವಾಗಿ ಹೇಳಿಕೊಂಡಿದ್ದಕ್ಕಾಗಿ ಮತ್ತು ಜಡ್ಜ್ ಲೋಯಾ ಅವರ ಸಂಶಯಾಸ್ಪದ ಸಾವಿನ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಕ್ಕೂ, ರಾಜದೀಪ್ ಅವರನ್ನು ಅಭಿನಂದಿಸಿದ್ದ ಟ್ವೀಟ್ ಮತ್ತು ಅದಕ್ಕೆ ಅದರ ರಿಪ್ಲೈ.

   ನಿಮಗೆ ನಾಚಿಕೆ ಆಗೋದಿಲ್ವಾ ಅನ್ನುವ ಟ್ವೀಟ್

   ನಿಮಗೆ ನಾಚಿಕೆ ಆಗೋದಿಲ್ವಾ ಅನ್ನುವ ಟ್ವೀಟ್

   ನಿಮ್ಮ ಟ್ವೀಟಿಗೆ ಬಂದ ಒಟ್ಟಾರೆ ರಿಪ್ಲೈ ಒಮ್ಮೆ ನೋಡಿ. ನಿಮಗೆ ನಾಚಿಕೆ ಆಗೋದಿಲ್ವಾ? ಭ್ರಷ್ಟ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮತ್ತು ಮುಸ್ಲಿಮರನ್ನು ಓಲೈಸಲು ರಾಜದೀಪ್ ಏನು ಬೇಕಾದರೂ ಮಾಡುತ್ತಾರೆ ಎನ್ನುವ ಖಾರವಾದ ಟ್ವೀಟ್.

   ರಂಜಾನ್ ವೇಳೆ ಸಮೋಸ ತಿನ್ನುವ ಧೈರ್ಯ ತೋರುವಿರಾ

   ರಂಜಾನ್ ವೇಳೆ ಸಮೋಸ ತಿನ್ನುವ ಧೈರ್ಯ ತೋರುವಿರಾ

   ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ರಂಜಾನ್ ವೇಳೆ ಸಮೋಸ ತಿನ್ನುವ ಧೈರ್ಯ ತೋರುವಿರಾ? ನೀವು ಏನು ಬೇಕಾದರೂ ತಿನ್ನಿ. ವಡಾ ಪಾವ್ ತಿನ್ನುವುದನ್ನೂ ಹೇಳುತ್ತಿರಾ - ಹೀಗೆ ಬಂದಿರುವ ಟ್ವೀಟುಗಳು.

   ಬೀಫ್ ತಿಂದ ಮಾತ್ರಕ್ಕೆ ನೀವು ರಾಷ್ಟ್ರವಿರೋಧಿಯಾಗುವುದಿಲ್ಲ

   ಬೀಫ್ ತಿಂದ ಮಾತ್ರಕ್ಕೆ ನೀವು ರಾಷ್ಟ್ರವಿರೋಧಿಯಾಗುವುದಿಲ್ಲ

   ಬೀಫ್ ತಿಂದ ಮಾತ್ರಕ್ಕೆ ನೀವು ರಾಷ್ಟ್ರವಿರೋಧಿಯಾಗುವುದಿಲ್ಲ, ಹಿಂದೂಗಳ ಭಾವನೆಯನ್ನು ನೀವು ಅಣಕವಾಡುತ್ತಿದ್ದೀರಲ್ಲಾ. ನಿಮ್ಮ ಮೇಲಿದ್ದ ಎಲ್ಲಾ ಗೌರವವು ಹೋಯಿತು

   ಕತ್ತೆ ಬದಲಾಗಲು ಸಾಧ್ಯವಿಲ್ಲ

   ಕತ್ತೆ ಬದಲಾಗಲು ಸಾಧ್ಯವಿಲ್ಲ

   ಇಂದು ಬೀಫ್ ತಿನ್ನುವುದು, ಮರುದಿನ ಅಹಿಂಸೆಯ ಬಗ್ಗೆ ಮಾತನಾಡುವುದು. ಕತ್ತೆ ಬದಲಾಗಲು ಸಾಧ್ಯವಿಲ್ಲ - ಹೀಗೆ ರಾಜದೀಪ್ ಟ್ವೀಟಿಗೆ ಬಂದ ರಿಪ್ಲೈಗಳು.

   ಮೂರ್ಖನಿಗೆ ಯಾಕೆ ಪಬ್ಲಿಸಿಟಿ?

   ಮೂರ್ಖನಿಗೆ ಯಾಕೆ ಪಬ್ಲಿಸಿಟಿ?

   ಇಂತಹಾ ಮೂರ್ಖನಿಗೆ ಪಬ್ಲಿಸಿಟಿ ಕೊಡಬಾರದು..ಜನ ಏನೇ ಹೇಳಲಿ ನೀವು ನಿಜವಾಗಿಯೂ ರಾಷ್ಟ್ರೀಯವಾದಿಯಾ?

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Journalist and consultant editor of India Today Rajdeep Sardesai ate beef and mocked. In one of the tweet reply Rajdeep said, " Guess I remain an anti national". Twitterite based at Rajdeep.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ