ಸಲ್ಲೇಖನ ವ್ರತ ಕೈಗೊಂಡು ಲೋಕೈಕ್ಯರಾದ ವೃದ್ಧೆ

ರಾಜಸ್ಥಾನ, ಸೆಪ್ಟೆಂಬರ್, 05 : ಜೈನರ ಪ್ರಮುಖ ಸಲ್ಲೇಖನ ವ್ರತದ ಪಾಲನೆ ಮೇಲೆ ರಾಜಸ್ಥಾನ ಸರ್ಕಾರ ನಿಷೇಧ ಹೇರಿತ್ತು. ಇದನ್ನು ವಿರೋಧಿಸಿ ದೇಶದೆಲ್ಲೆಡೆ ಜೈನರು ಪ್ರತಿಭಟನೆ ಕೈಗೊಂಡಿದ್ದರು.

ಸುಮಾರು 50 ದಿನಗಳಿಂದ ಜೈನರ ಪವಿತ್ರ ಆಚರಣೆಯಾದ ಸಲ್ಲೇಖನ ವ್ರತ ಪಾಲಿನೆ ಮಾಡುತ್ತಿದ್ದ ಬದ್ನಿ ದೇವಿ ಡಾಗಾ ಸುಮಾರು ಬೆಳಿಗ್ಗೆ 8 ರ ಸುಮಾರಿನಲ್ಲಿ ಸೆಪ್ಟೆಂಬರ್ 5 ರ ಶನಿವಾರದಂದು ಮೃತರಾಗಿದ್ದಾರೆ.[ಸಲ್ಲೇಖನ : ಶ್ರವಣಬೆಳಗೊಳದಲ್ಲಿ ಜೈನ ಸ್ವಾಮಿಗಳ ಸಮಾವೇಶ]

Rajasthan: Jain woman dies after 50 days of Santhara fasting

ಜೈನರು ಮತ್ತು ರಾಜಸ್ಥಾನ ಸರ್ಕಾರದ ನಡುವೆ ಈ ವಿಷಯದಲ್ಲಿ ಹಗ್ಗಾ ಜಗ್ಗಾಟಗಳು ನಡೆಯುತ್ತಿರುವಾಗಲೇ ಸಲ್ಲೇಖನ ವ್ರತ ಕೈಗೊಂಡ 83 ವರ್ಷದ ವೃದ್ಧೆ ಲೋಕೈಕ್ಯರಾಗಿದ್ದಾರೆ.

ರಾಜಸ್ಥಾನ ಹೈಕೋರ್ಟ್ ಸಲ್ಲೇಖನ ವ್ರತ ಆತ್ಮಹತ್ಯೆಗೆ ಸಮಾನವಾದುದು. ಇದನ್ನು ಯಾರೇ ಪಾಲಿಸಿದ್ದಲ್ಲಿ ಅವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ಆದೇಶ ಹೊರಡಿಸಿತ್ತು.

ನಿಖಿಲ್ ಸೋನಿ ನೀಡಿದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಧೀಶ ಸುನೀಲ್ ಅಂಬ್ವಾವಿ ಖಂಡಪೀಠವು ಭಾರತೀಯ ದಂಡ ಸಂಹಿತೆ 306( ಆತ್ಮಹತ್ಯೆಗೆ ಪ್ರೇರಣೆ), 309 (ಆತ್ಮಹತ್ಯೆಗೆ ಯತ್ನ) ಅನುಸಾರ ಶಿಕ್ಷಾರ್ಹವಾಗಿದೆ ಎಂದು ಘೋಷಿಸಿತ್ತು.

ಈ ರಾಜಸ್ಥಾನ ಹೈಕೋರ್ಟ್ ಹೇರಿದ ನಿಷೇಧ ಕುರಿತಾಗಿ ಕರ್ನಾಟಕ, ಜೈಪುರ ಇನ್ನು ನಾನಾ ಕಡೆಗಳಿಂದ ಸಲ್ಲೇಖನ ವ್ರತದ ಮೇಲೆ ಹೇರಿದ ನಿಷೇಧ ತೆರವುಗೊಳಿಸಬೇಕೆಂದು ಲಕ್ಷಾಂತರ ಜೈನ ಧರ್ಮಿಯರು ಹೋರಾಟಕ್ಕಿಳಿದ ಪರಿಣಾಮ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+