Rajasthan Exit poll 2023: ಪೋಲ್ ಸ್ಟ್ರಾಟ್ ಚುನಾವಣೋತ್ತರ ಸಮೀಕ್ಷೆ ವಿವರ

ಜೈಪುರ, ನವೆಂಬರ್‌ 30: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದ್ದು, ಇಂದು ಬರುವ ಎಕ್ಸಿಟ್‌ ಪೋಲ್‌ ಫಲಿತಾಂಶಗಳತ್ತ ದೇಶದ ಜನರ ಗಮನವಿದೆ. ಈ ಎಕ್ಸಿಟ್‌ ಪೋಲ್‌ ಫಲಿತಾಂಶಗಳು ನಿಖರವಲ್ಲದಿದ್ದರೂ ಅಂದಾಜನ್ನು ನೀಡುತ್ತವೆ. ಈ ನಿಟ್ಟಿನಲ್ಲಿ ಪೋಲ್ ಸ್ಟ್ರಾಟ್ ಎಕ್ಸಿಟ್‌ ಪೋಲ್‌ ವಿವರಗಳು ಬಹಿರಂಗವಾಗಿದೆ.

ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ನವೆಂಬರ್ 25 ರಂದು ಒಂದೇ ಹಂತದಲ್ಲಿ ಮತದಾನವನ್ನು ನಡೆಸಲಾಗಿದೆ. ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪೈಕಿ 199 ಅಭ್ಯರ್ಥಿಗಳನ್ನು ಆಯ್ಕೆ ಮಾಡಲು 5 ಕೋಟಿಗೂ ಹೆಚ್ಚು ಅರ್ಹ ಮತದಾರರು ತಮ್ಮ ಮತಗಳನ್ನು ಹಾಕಿದ್ದಾರೆ.

rajasthan exit poll 2023: polstrat Exit poll results,details

ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನಾರ್ ಅವರ ನಿಧನದಿಂದಾಗಿ ಒಂದು ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೆ, ಪ್ರತಿಪಕ್ಷ ಬಿಜೆಪಿ ಗ್ರ್ಯಾಂಡ್ ಓಲ್ಡ್ ಪಕ್ಷವನ್ನು ಉರುಳಿಸುವ ನಿರೀಕ್ಷೆಯಲ್ಲಿದೆ.

ಈಗ ರಾಜಸ್ಥಾನ ವಿಧಾನಸಭಾ ಚುನಾವಣೆ ಪೋಲ್ ಸ್ಟ್ರಾಟ್ ಎಕ್ಸಿಟ್‌ ಪೋಲ್‌ ವಿವರಗಳು ಹೊರಬಿದ್ದವೆ. ಆಡಳಿತರೂಢ ಕಾಂಗ್ರೆಸ್‌ 90ರಿಂದ 100 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ತಿಳಿಸಿದೆ. ಬಿಜೆಪಿಯು 100ರಿಂದ 110 ಸ್ಥಾನಗಳಲ್ಲಿ ಗೆಲುವು ಪಡೆಯಲಿದ್ದು, ಇತರರು 14 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಪೋಲ್ ಸ್ಟ್ರಾಟ್ ಚುನಾವಣೋತ್ತರ ಸಮೀಕ್ಷೆ ವಿವರಗಳ ಪ್ರಕಾರ ಈ ಬಾರಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳಲಿದ್ದು, ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಹೇಳಿದೆ.

ಇದು ಶೇಕಡವಾರು ಮತ ಹಂಚಿಕೆ ಪ್ರಕಾರ ನೋಡುವುದಾದರೆ ರಾಜಸ್ಥಾನದಲ್ಲಿ ಬಿಜೆಪಿ ಶೇಕಡ 48.8ರಷ್ಟು ಮತ ಪಡೆಯಲಿದೆ ಎಂದು ಹೇಳಿದೆ. ಇದಲ್ಲದೆ ಕಾಂಗ್ರೆಸ್‌ ಶೇಕಡ 39.9ರಷ್ಟುರಷ್ಟು ಮತ ಹಂಚಿಕೆಯಾಗಲಿದೆ. ಇದರೊಂದಿಗೆ ಇತರರು ಶೇಕಡ 13ರಿಂದ 17ರಷ್ಟು ಮತ ಹಂಚಿಕೆಯಾಗಲಿದೆ ಎಂದು ಹೇಳಿದೆ. ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ. ಆದರೆ ಬಿಜೆಪಿ ಗೆಲ್ಲುವ ವಿಶ್ವಾಸವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+