ರಾಜಸ್ಥಾನ ವಿಧಾನಸಭಾ ಚುನಾವಣೆ 2023: ಈ ಬಾರಿ ಅಧಿಕಾರ ಹಿಡಿಯುವ ಪಕ್ಷ ಯಾವುದು
ಜೈಪುರ, ನವೆಂಬರ್ 10: ರಾಜಸ್ಥಾನ ವಿಧಾನಸಭೆ ಚುನಾವಣೆ ಇದೇ ನವೆಂಬರ್ 23ರಂದು ನಡೆಯಲಿದೆ. 200 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಈ ಬಾರಿ ಮತದಾರ ಯಾರಿಗೆ ಬೆಂಬಲ ಸೂಚಿಸುತ್ತಾನೆ ಎಂದು ಕಾದು ನೋಡಬೇಕಿದೆ.
ದಶಕಗಳಿಂದಲೂ ರಾಜಸ್ಥಾನದಲ್ಲಿ ಆಡಳಿತರೂಢ ಪಕ್ಷ ಮತ್ತೆ ಎರಡನೇ ಭಾರಿ ಅಧಿಕಾರ ಹಿಡಿದ ಉದಾಹರಣೆ ಇಲ್ಲ. ಈ ನಿಟ್ಟಿನಲ್ಲಿ ರಾಜಸ್ಥಾನ ವಿಧಾನಸಭೆಯ ಚುನಾವಣ ಪೂರ್ವ ಸಮೀಕ್ಷೆಗಳು ಬರತೊಡಗಿವೆ. ರಾಜಸ್ಥಾನದಲ್ಲಿ ಈ ಬಾರಿ ಜನಾಭಿಪ್ರಾಯ ಹೇಗಿದೆ ಎಂದು ಜನ್ಮತ್ ಪೋಲ್ ಸಮೀಕ್ಷೆ ನಡೆಸಿದೆ. ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಹಾಗೂ ಬಿಜೆಪಿಗೆ ನೇರ ಹಣಾಹಣಿ ಇದೆ.

ಜನ್ಮತ್ ಪೋಲ್ ನಡೆಸಿದ ಸಮೀಕ್ಷೆ ಈ ಪ್ರಕಾರ 200 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 121 ರಿಂದ 124 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ತಿಳಿಸಿದೆ. ಅಲ್ಲದೆ ಆಡಳಿತರೂಢ ಕಾಂಗ್ರೆಸ್ 64ರಿಂದ 66 ಸ್ಥಾನಗಳಲ್ಲಿ ಗೆಲವು ಸಾಧಿಸುತ್ತದೆ. ಆರ್‌ಎಲ್‌ಪಿ 2ರಿಂದ 3 ಹಾಗೂ ಇತರರು 12ರಿಂದ 13 ಸ್ಥಾನಗಳಲ್ಲಿ ಗೆಲ್ಲುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
ಸದ್ಯ ಈ ಬಾರಿ ಬಿಜೆಪಿ ಕಾಂಗ್ರೆಸ್ ಎರಡು ಪಕ್ಷಗಳಿಗೂ ನೇರ ಹಣಾಹಣಿ ಏರ್ಪಟ್ಟಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪರ ಜನರು ಹೆಚ್ಚು ಬೆಂಬಲ ವ್ಯಕ್ತಪಡಿಸಿದ್ದರೂ ಕಾಂಗ್ರೆಸ್ ಪಕ್ಷದ ಪರವಾಗಿ ಅಷ್ಟಾಗಿ ಜನರ ಒಲವು ಇಲ್ಲವಾಗಿದೆ. ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇ ಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಭರ್ಜರಿ 7 ಗ್ಯಾರಂಟಿಗಳನ್ನು ನೀಡಿದೆ.
ಇದಕ್ಕೆ ಪ್ರತಿ ತಂತ್ರ ಹೂಡಿರುವ ಬಿಜೆಪಿ ಯಥಾಸ್ಥಿತಿ ಹಿಂದುತ್ವದ ಕಾರ್ಡನ್ನು ಪ್ಲೇ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ವರ್ಚಸ್ಸು ರಾಜ್ಯದಲ್ಲಿದ್ದು, ಕೊನೆಗೂ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಘೋಷಿಸಿದ ಟಿಕೆಟ್ ಪೈಕಿ ಜಾತಿ ಸಮೀಕರಣ ಎದ್ದುಕಾಣುತ್ತಿದೆ. ಕಾಂಗ್ರೆಸ್‌ನಲ್ಲಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ಒಳಜಗಳ ಕಾಂಗ್ರೆಸ್‌ಗೆ ಒಂದು ವೇಳೆ ಮುಳುವಾದರೂ ಅಚ್ಚರಿ ಇಲ್ಲ.
ರಾಜಸ್ಥಾನದಲ್ಲಿ ಕಳೆದ 2 ದಶಕಗಳಿಂದಲೂ ಒಂದು ಭಾರಿ ಅಧಿಕಾರ ಪಡೆದ ಪಕ್ಷ ಮತ್ತೆ ಅಧಿಕಾರ ಹಿಡಿದ ಉದಾಹರಣೆ ಇಲ್ಲ. ಹಾಗಾಗಿ ಈ ಬಾರಿ ಕಾಂಗ್ರೆಸ್‌ಗೆ ಮತ್ತೆ ರಾಜಸ್ಥಾನದ ಮತದಾರ ಬೆಂಬಲ ಸೂಚಿಸುತ್ತಾನ ನೋಡಬೇಕಿದೆ. ಕಾಂಗ್ರೆಸ್ ರಾಜಸ್ಥಾನ ಮಾತ್ರವಲ್ಲದೇ 5 ರಾಜ್ಯಗಳನ್ನು ಗೆಲ್ಲಲು ಗ್ಯಾರಂಟಿಗಳು ಮಾತ್ರವಲ್ಲದೆ ಜಾತಿಗಣತಿಯ ವಿಚಾರವನ್ನೂ ಚರ್ಚೆಗೆ ಬಿಟ್ಟಿದೆ.
ಈ ಮೂಲಕ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ನಿಯಂತ್ರಣದ ಬೇಲಿಯನ್ನು ಹಾಕಲು ತೊಡಗಿದೆ. ಹೋದಲೆಲ್ಲಾ ರಾಹುಲ್ ಗಾಂಧಿ ಅದಾನಿ ವಿಚಾರಗಳನ್ನು ಪ್ರಶ್ನಿಸುತ್ತಿದ್ದಾರೆ, ಅಲ್ಲದೆ ಅವರು ಭಾರತ್ ಜೋಡೋ ಯಾತ್ರೆ ಹಾಗೂ ಶ್ರಮಿಕ ವರ್ಗದವರೊಂದಿಗಿನ ಸಂವಾದಗಳು ಜನರು ಕಾಂಗ್ರೆಸ್ ಕಡೆ ಮುಖ ಮಾಡುವಂತೆ ಮಾಡುತ್ತಿದೆ.
ಆದರೆ ಬಿಜೆಪಿ ಪ್ರತಿ ಬೂತ್ ಮಟ್ಟದಲ್ಲಿ ಜನರ ಓಲೈಕೆಯನ್ನು ಮುಂದುವರೆಸಿದೆ. ಜಾತಿ ಚಾಲಿತ ರಾಜಕೀಯಕ್ಕೆ ಹೆಸರುವಾಸಿಯಾದ ರಾಜ್ಯದಲ್ಲಿ ಮೇಲ್ವರ್ಗದ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಬಿಜೆಪಿಯು 60 ಒಬಿಸಿ (ಇತರ ಹಿಂದುಳಿದ ವರ್ಗಗಳು) ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಅವರು ಈ ಚುನಾವಣೆಯಲ್ಲಿ ಪಕ್ಷದ ಒಟ್ಟು ನಾಮನಿರ್ದೇಶಿತರಲ್ಲಿ ಶೇಕಡಾ 30 ರಷ್ಟಿದ್ದಾರೆ. ರಾಜಸ್ಥಾನದಲ್ಲಿ ಹೆಚ್ಚು ಪ್ರಬಲವಾಗಿರುವ ಒಬಿಸಿ ಗುಂಪಿನ ಜಾಟ್ ಸಮುದಾಯದ ಬಿಜೆಪಿ ನಾಯಕರು 31 ಟಿಕೆಟ್‌ಗಳನ್ನು ಪಡೆದಿದ್ದರೆ, ಇತರ ತುಲನಾತ್ಮಕವಾಗಿ ಸಣ್ಣ ಒಬಿಸಿ ಗುಂಪುಗಳಾದ ಯಾದವ್, ಕುಮಾವತ್, ಬಿಷ್ಣೋಯ್, ಸೈನಿ, ಪಟೇಲ್, ನಗರ, ರಾವಣ ರಜಪೂತ್ ಮತ್ತು ಧಕಡ್ 29 ಟಿಕೆಟ್‌ಗಳನ್ನು ಪಡೆದಿದ್ದಾರೆ.
ರಾಜ್ಯದಲ್ಲಿ ಎಂಬಿಸಿ (ಅತ್ಯಂತ ಹಿಂದುಳಿದ ವರ್ಗಗಳು) ವಿಭಾಗದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಗುಜ್ಜರ್ ಸಮುದಾಯಕ್ಕೆ ಬಿಜೆಪಿ 10 ಟಿಕೆಟ್‌ಗಳನ್ನು ನೀಡಿದೆ. ಇದನ್ನು ಅದರ ಒಬಿಸಿ ಅಭ್ಯರ್ಥಿಗಳಿಗೆ ಸೇರಿಸಿದಾಗ, ಪಕ್ಷದ ಹಿಂದುಳಿದ ವರ್ಗದ ಅಭ್ಯರ್ಥಿಗಳ ಒಟ್ಟಾರೆ ಸಂಖ್ಯೆಯು ಅದರ ಒಟ್ಟು ಅಭ್ಯರ್ಥಿಗಳ 70 ಅಥವಾ 35 ಪ್ರತಿಶತಕ್ಕೆ ಏರುತ್ತದೆ.











Click it and Unblock the Notifications