Rainfall forecast: ತಮಿಳುನಾಡಲ್ಲಿ ವ್ಯಾಪಕ ಮಳೆ- 8 ಜಿಲ್ಲೆಗಳ ಶಾಲಾ-ಕಾಲೇಜಿಗೆ ರಜೆ, ಬೆಂಗಳೂರಲ್ಲೂ ಮೋಡ ಕವಿದ ವಾತಾವರಣ

ಚೆನ್ನೈ, ನವೆಂಬರ್‌ 14: ಚೆನ್ನೈನಿಂದ ನಾಗಪಟ್ಟಣಂವರೆಗಿನ ಕರಾವಳಿ ಪ್ರದೇಶಗಳಲ್ಲಿ ಇಂದು ರಾತ್ರಿಯಿಂದ ನಾಳೆ (ನವೆಂಬರ್ 15) ವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಚೆನ್ನೈ ಪ್ರಾದೇಶಿಕ ಹವಾಮಾನ ಕೇಂದ್ರವು (ಆರ್‌ಎಂಸಿ) ಮುನ್ಸೂಚನೆ ನೀಡಿದೆ.

ತಮಿಳುನಾಡಿನ ಕರಾವಳಿಯಲ್ಲಿ ರಾತ್ರಿಯಿಡೀ ವ್ಯಾಪಕ ಮಳೆ ಸುರಿದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪ್ರಭಾವದ ಪರಿಣಾಮದಿಂದಾಗಿ ಇಂದು ಸಹ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.

rainfall-forecast

ಮುಂದಿನ 48 ಗಂಟೆಗಳ ಕಾಲ ತಮಿಳುನಾಡಿನಲ್ಲಿ ಮಳೆ

ವಿಶೇಷವಾಗಿ ಕಡಲೂರು, ಮೈಲಾಡುತುರೈ, ನಾಗಪಟ್ಟಣಂ, ತಂಜಾವೂರು, ತಿರುವರೂರು, ಪುದುಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಮತ್ತು ಕಾರೈಕಲ್‌ನ ಒಂದೆರಡು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಅದೇ ರೀತಿ ತಿರುವಳ್ಳೂರು, ಚೆನ್ನೈ, ರಾಣಿಪೇಟ್, ತಿರುವಣ್ಣಾಮಲೈ, ಕಲ್ಲಕುರಿಚಿ, ತಿರುಪತ್ತೂರು, ವೆಲ್ಲೂರು, ಅರಿಯಲೂರ್, ಪೆರಂಬಲೂರು, ಪುದುಕೊಟ್ಟೈ, ತಿರುಚಿರಾಪಳ್ಳಿ, ತಂಜಾವೂರು, ತಿರುವಾರೂರ್, ನಾಗಪಟ್ಟಣಂ, ಮೈಲಾಡುತುರೈ ಮತ್ತು ಕಾರೈಕಲ್ ಜಿಲ್ಲೆಗಳಲ್ಲಿ ಬುಧವಾರ ಭಾರೀ ಮಳೆಯಾಗಲಿದೆ ಎಂದು ಚೆನ್ನೈ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅಲ್ಲದೆ ಭಾರೀ ಮಳೆಯ ಮುನ್ಸೂಚನೆಯಿಂದಾಗಿ ಪುದುಚೇರಿ ಮತ್ತು ಕಾರೈಕಲ್ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

rainfall-forecast

ಅಣ್ಣಾಮಲೈ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಿಕೆ

ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಿಗದಿಪಡಿಸಿದ್ದ ಎಲ್ಲಾ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಕಡಲೂರು ಮತ್ತು ಮೈಲಾಡುತುರೈ ಜಿಲ್ಲೆಗಳ ಆಡಳಿತದ ಪ್ರಕಟಣೆ ತಿಳಿಸಿದೆ. ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಘೋಷಿಸಿದಂತೆ ಮರುನಿಗದಿಪಡಿಸಿದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿದುಬಂದಿದೆ.

ತಮಿಳುನಾಡಿನ ಕರಾವಳಿಯಲ್ಲಿ ಭಾರೀ ಮಳೆ

ಹವಾಮಾನ ಇಲಾಖೆಯ ಪ್ರಕಾರ, 'ಮಹಾಬಲಿಪುರಂ ಮತ್ತು ಡೆಲ್ಟಾ ಪ್ರದೇಶದ ನಡುವಿನ ಕರಾವಳಿ ತಮಿಳುನಾಡಿನಲ್ಲಿ ವ್ಯಾಪಕ ಮಳೆಯಾಗಲಿದೆ. ತಮಿಳುನಾಡಿನ ಒಳಭಾಗವು ಸ್ವಲ್ಪಮಟ್ಟಿಗೆ ಸಾಧಾರಣ ಮಳೆಯನ್ನು ನೋಡಬಹುದು' ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

'ಮುಂದಿನ ಕೆಲವು ಗಂಟೆಗಳಲ್ಲಿ ಮಳೆಯಾಗುವಾ ಸಾಧ್ಯತೆ ಇದೆ. ಚೆನ್ನೈ ಮತ್ತು ಕಡಲೂರು ನಡುವಿನ ಕೆಲವು ಸ್ಥಳಗಳಲ್ಲಿ ನವೆಂಬರ್ 16 ರವರೆಗೆ ಭಾರೀ ಮಳೆಯಾಗುವ ಸುರಿಯಬಹುದು' ಎಂದು ಹವಾಮಾನ ಇಲಾಖೆ ತಿಳಿಸಿದೆ.

rainfall-forecast

ಚೆನ್ನೈನಲ್ಲಿ ಸಾಧಾರಣ ಮಳೆ

ಪ್ರಾದೇಶಿಕ ಹವಾಮಾನ ಕೇಂದ್ರವು ನೀಡಿದ ಮಾಹಿತಿ ಪ್ರಕಾರ, ಮಂಗಳವಾರ ಚೆಂಗಲ್ಪಟ್ಟು, ಕಾಂಚೀಪುರಂ, ಕಡಲೂರು ಮತ್ತು ವಿಲ್ಲುಪುರಂ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ತೀವ್ರತೆಯ (20.4 ಸೆಂ.ಮೀ. ವರೆಗೆ) ಮಳೆಯಾಗುವ ಮುನ್ಸೂಚನೆ ನೀಡಿದೆ. ಚೆನ್ನೈನಲ್ಲಿ ಮಂಗಳವಾರ ಮತ್ತು ಬುಧವಾರದಂದು ಸಾಧಾರಣದಿಂದ ಕೂಡಿದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ರಾತ್ರಿಯಿಂದ ಚೆನ್ನೈ ಮತ್ತು ಅದರ ಉಪನಗರಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಬ್ಲಾಗರ್ ಕೆ ಶ್ರೀಕಾಂತ್ ಮುನ್ಸೂಚನೆ ನೀಡಿದ್ದಾರೆ.

'ಇಂದು ರಾತ್ರಿ/ನಾಳೆ ಬೆಳಿಗ್ಗೆ ಚೆನ್ನೈ ಮತ್ತು ಉಪನಗರಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ' ಎಂದು ಶ್ರೀಕಾಂತ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+