ಭಾರತೀಯ ರೈಲ್ವೆಯ ಭವಿಷ್ಯದ ದೃಷ್ಟಿ; ಹಲವು ಯೋಜನೆಗಳಿಗೆ ವೇಗ
ಬೆಂಗಳೂರು, ಜೂನ್ 29; ಭವಿಷ್ಯದ ದಿನಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಹಲವು ಯೋಜನೆಗಳಿಗೆ ವೇಗವನ್ನು ನೀಡಿದೆ. 115000 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಯೋಜನೆಗಳು ಪೂರ್ಣಗೊಳ್ಳುವ ಹಾದಿಯಲ್ಲಿವೆ.
ಕೋವಿಡ್ ಲಾಕ್‌ಡೌನ್ ನಡುವೆಯೂ ಹಳಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಅತ್ಯಗತ್ಯವಾಗಿರುವ ಯೋಜನೆಗಳನ್ನು ಪೂರ್ಣಗೊಳಿಸಲು ರೈಲ್ವೆಯು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಒಂದು ವರ್ಷದಲ್ಲಿ 11,588 ಕೋಟಿ ರೂ. ವೆಚ್ಚದ, ಒಟ್ಟು 1,044 ಕಿ.ಮೀ. ಉದ್ದದ 29 ಅತ್ಯಂತ ನಿರ್ಣಾಯಕ ಯೋಜನೆಗಳನ್ನು ಆರಂಭ ಮಾಡಲಾಗಿದೆ.
ಭಾರತೀಯ ರೈಲ್ವೆಯು ಒಟ್ಟು 39663 ಕೋಟಿ ರೂ. ವೆಚ್ಚದ 3750 ಕಿ.ಮೀ ಉದ್ದದ ಒಟ್ಟು 58 ಅತ್ಯಂತ ನಿರ್ಣಾಯಕ ಯೋಜನೆಗಳನ್ನು ಗುರುತಿಸಿದೆ. ಈ ಒಟ್ಟು 58 ಅತ್ಯಂತ ನಿರ್ಣಾಯಕ ಯೋಜನೆಗಳಲ್ಲಿ 27 ಯೋಜನೆಗಳು 2021ರ ಡಿಸೆಂಬರ್ ಒಳಗಾಗಿ ಪೂರ್ಣಗೊಳ್ಳಲಿದೆ.

ಈ ಯೋಜನೆಗಳ ಮೇಲಿನ ಹೂಡಿಕೆಯಿಂದಾಗಿ ಅತ್ಯಧಿಕ ಸಂಚಾರ ದಟ್ಟಣೆ ಇರುವ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಹಾಗೂ ಸರಕು ಸಾಗಣೆ ರೈಲುಗಳನ್ನು ಓಡಿಸಲು ಸಹಕಾರಿಯಾಗಿದೆ.
ನಿರ್ಣಾಯಕ ಯೋಜನೆಗಳು: 39663 ಕೋಟಿ ರೂ. ವೆಚ್ಚದ ಒಟ್ಟು 3750 ಕಿ.ಮೀ ಉದ್ದದ 58 ಅತ್ಯಂತ ನಿರ್ಣಾಯಕ ಯೋಜನೆಗಳನ್ನು ಗುರುತಿಸಲಾಗಿದೆ. ಈ ಅತ್ಯಂತ ನಿರ್ಣಾಯಕ ಯೋಜನೆಗಳು ಬಹು-ಹಳಿ ಅಂದರೆ ಹೆಚ್ಚಿನ ಸಂಚಾರ ದಟ್ಟಣೆ ಇರುವ ಮಾರ್ಗಗಳಲ್ಲಿ ಜೋಡಿಹಳಿ/ 3ನೇ ಲೈನ್/ 4ನೇ ಹಳಿ ಅಳವಡಿಸುವ ಯೋಜನೆಗಳಾಗಿವೆ.
ಈ ಯೋಜನೆಗಳು ಪೂರ್ಣಗೊಂಡ ನಂತರ ರೈಲ್ವೆಯು ಈ ಅಧಿಕ ದಟ್ಟಣೆಯ/ ಗರಿಷ್ಠ ಮಿತಿ ತಲುಪಿದ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆ ರೈಲುಗಳನ್ನು ಮತ್ತಷ್ಟು ವೇಗವಾಗಿ ಹಾಗೂ ಸುರಕ್ಷತೆಯೊಂದಿಗೆ ಓಡಿಸಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ, 11,588 ಕೋಟಿ ರೂ. ವೆಚ್ಚದ ಒಟ್ಟು 1,044 ಕಿ.ಮೀ ಉದ್ದದ 29 ಯೋಜನೆಗಳನ್ನು ಕಾರ್ಯಾರಂಭ ಮಾಡಲಾಗಿದೆ.
ಯೋಜನೆಗಳ ವಿವರ
* ಅಸ್ಸಾಂ ರಾಜ್ಯದ ʻನ್ಯೂ ಬೊಂಗೈಗಾಂವ್-ಗುವಾಹಟಿʼ ವಿಭಾಗದಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ʻನರನಾರಾಯಣ ಸೇತುʼವಿನ ಮೇಲೆ ಎರಡನೇ ಸಾಲಿನ ಹಳಿಯ ಆರಂಭ.
* ಪಶ್ಚಿಮ ಬಂಗಾಳದಲ್ಲಿ 2021ರ ಮೇ ತಿಂಗಳಲ್ಲಿ ಭಾರತೀಯ ರೈಲ್ವೆಯು ಕೋವಿಡ್-19 ಸಾಂಕ್ರಾಮಿಕ ಮತ್ತು ರಾಜ್ಯ ಚುನಾವಣೆಯ ಹೊರತಾಗಿಯೂ ಎರಡು ಡಬ್ಲಿಂಗ್ ಯೋಜನೆಗಳ ಭಾಗವನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ.
* ಮಹಾರಾಷ್ಟ್ರದಲ್ಲಿ 2021ರ ಜೂನ್‌ನಲ್ಲಿ ಭಾರತೀಯ ರೈಲ್ವೆಯು ಮಹಾರಾಷ್ಟ್ರದಲ್ಲಿ ಭೂಸಾವಲ್-ಜಲಗಾಂವ್ ನಡುವೆ 3ನೇ ಹಳಿಯನ್ನು ಸಂಚಾರ ಮುಕ್ತಗೊಳಿಸಿದೆ. ಈ ಅತ್ಯಂತ ನಿರ್ಣಾಯಕ ಯೋಜನೆಯು ಈ ವಿಭಾಗದ ಅಡಚಣೆಯನ್ನು ನಿವಾರಿಸಿದೆ.












Click it and Unblock the Notifications