ರೈಲು ಪ್ರಯಾಣದ ವೇಳೆ ಡಿಜಿ ಲಾಕರ್‌ ದಾಖಲೆ ತೋರಿಸಿ

ಬೆಂಗಳೂರು, ಜುಲೈ 06 : ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿ ರೈಲಿನಲ್ಲಿ ಪ್ರಯಾಣ ಮಾಡುವ ಜನರು ಇನ್ನು ಮುಂದೆ ಗುರುತಿನ ಚೀಟಿಗಳನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಡಿಜಿ ಲಾಕರ್‌ನಲ್ಲಿರುವ ಗುರುತಿನ ಪತ್ರವನ್ನು ತೋರಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ.

ಭಾರತ ಸರ್ಕಾರದ ಡಿಜಿ ಲಾಕರ್‌ಗೆ ಮೂಲಕ ಪ್ರಯಾಣಿಕರು ಗುರುತಿನ ಪತ್ರವನ್ನು ತೋರಿಸಬಹುದಾಗಿದೆ. ಡಿಜಿ ಲಾಕರ್‌ನಲ್ಲಿರುವ ಆಧಾರ್, ಡ್ರೈವಿಂಗ್ ಲೈಸೆನ್ಸ್ ಚೀಟಿಗಳನ್ನು ತೋರಿಸಿದರೆ ಅದನ್ನು ಪರಿಗಣಿಸುವಂತೆ ರೈಲ್ವೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಡಿಜಿ ಲಾಕರ್ ಸೌಲಭ್ಯ ಉಪಯೋಗಿಸುವವರು ತಮ್ಮ ಮೊಬೈಲ್‌ ಸಂಖ್ಯೆಯನ್ನು ಡಿಜಿ ಲಾಕರ್‌ ಜೊತೆ ಜೋಡಿಸಿರುತ್ತಾರೆ. ಅಲ್ಲಿ ಅವರು ನೀಡುವ ಗುರುಚಿನ ಚೀಟಿಗಳನ್ನು ಪ್ರಯಾಣದ ಸಂದರ್ಭದಲ್ಲಿ ತೋರಿಸಬಹುದಾಗಿದೆ.

Railways to accept digital Aadhaar, driving licence from DigiLocker

ಆಧಾರ್, ಡ್ರೈವಿಂಗ್ ಲೈಸೆನ್ಸ್ ಈ ಎರಡು ದಾಖಲೆಗಳನ್ನು ಮಾತ್ರ ತೋರಿಸಬಹುದಾಗಿದೆ. ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಯೋಜನೆಯಡಿ ಡಿಜಿ ಲಾಕರ್‌ನಲ್ಲಿ ಆಧಾರ್, ಡ್ರೈವಿಂಗ್ ಲೈಸೆನ್ಸ್‌ ಸ್ಟೋರ್ ಮಾಡಿಕೊಳ್ಳಲು ಅವಕಾಶವಿದೆ.

ರೈಲ್ವೆ ಇಲಾಖೆಯ ಈ ನಿರ್ಧಾರದಿಂದಾಗಿ ರೈಲ್ವೆಯಲ್ಲಿ ಪ್ರಯಾಣಿಕರು ಸಂಚಾರ ನಡೆಸುವಾಗ ಗುರುತಿನ ಚೀಟಿ ತೆಗೆದುಕೊಂಡು ಹೋಗುವುದು ತಪ್ಪಲಿದೆ. ಆದರೆ, ಪ್ರಯಾಣಿಕರೇ ಈ ದಾಖಲೆಗಳನ್ನು ಅಪ್‌ಲೋಡ್ ಮಾಡಿದ್ದು, ಅಪ್‌ಲೋಡ್ ಸೆಕ್ಷನ್‌ನಲ್ಲಿ ಅವುಗಳು ಇದ್ದರೆ ಅದನ್ನು ಪರಿಗಣಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+