Vande Bharat; ಸಾಮಾನ್ಯ ಜನರಿಗಾಗಿ ಬರಲಿದೆ ಕಡಿಮೆ ದರದ ರೈಲು?

ನವದೆಹಲಿ, ಜುಲೈ 18; ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್‌ಗೆ ಭಾರೀ ಬೇಡಿಕೆ ಇದೆ. ಆದರೆ ಈ ರೈಲು ಸಾಮಾನ್ಯ ಜನರಿಗಲ್ಲ ಎಂಬ ಆರೋಪ ಇದೆ. ಇದಕ್ಕೆ ಕಾರಣ ಅದರ ಪ್ರಯಾಣ ದರ ಹೆಚ್ಚು. ಆದ್ದರಿಂದ ಜನ ಸಾಮಾನ್ಯರಿಗಾಗಿಯೇ ರೈಲ್ವೆ ವಂದೇ ಸಾಧಾರಣ್ ಎಂಬ ಮಾದರಿ ರೈಲನ್ನು ಪರಿಚಯಿಸಲು ಚಿಂತನೆ ನಡೆಸಿದೆ.

ಭಾರತೀಯ ರೈಲ್ವೆ 'ವಂದೇ ಸಾಧಾರಣ್' ಎಂಬ ಯೋಜನೆಯಡಿ ಹವಾನಿಯಂತ್ರಣ ರಹಿತ ಕೋಚ್‌ ತಯಾರಿಗೆ ಮುಂದಾಗಿದೆ. ಸೆಕೆಂಡ್ ಕ್ಲಾಸ್ 3 ಟೈರ್ ಸ್ಲೀಪರ್ ಕೋಚ್‌ಗಳು ಇದರಲ್ಲಿ ಸೇರಿವೆ. ಇದರ ದರ ಕಡಿಮೆ ಇರಲಿದ್ದು, ಸಾಮಾನ್ಯ ಜನರಿಗೆ ಸಹಾಯಕವಾಗಲಿದೆ ಎಂಬ ನಿರೀಕ್ಷೆ ಇದೆ.

Railways May Run Low Fare Vande Sadharan New Train

ವಂದೇ ಭಾರತ್ ರೈಲುಗಳ ಮಾದರಿಯ ವ್ಯವಸ್ಥೆ ಇರುವ, ಉತ್ತಮ ಪ್ರಯಾಣದ ಅನುಭವ ನೀಡುವ ರೈಲುಗಳನ್ನು ಪರಿಚಯಿಸಲು ಇಲಾಖೆ ಮುಂದಾಗಿದೆ. ಇದಕ್ಕೆ ಇನ್ನೂ ಹೆಸರು ಅಂತಿಮಗೊಳಿಸಿಲ್ಲ. ಈ ಮಾದರಿಯ ಬೋಗಿ ತಯಾರು ಮಾಡುವ ಚಿಂತನೆ ನಡೆದಿದೆ. ಇದು ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಅಂತಿಮ ಒಪ್ಪಿಗೆ ಸಿಗಬೇಕಿದೆ.

ಹೇಗಿರಲಿದೆ ರೈಲು?; ದಿವ್ಯಾಂಗರಿಗೆ ನೆರವಾಗುವ ಬೋಗಿ, 8 ಸೆಕೆಂಡ್ ಕ್ಲಾಸ್ ಕಾಯ್ದಿರಿಸದ ಸೀಟುಗಳನ್ನು ಹೊಂದಿರುವ ಬೋಗಿ, ಸೆಕೆಂಡ್ ಕ್ಲಾಸ್ 3 ಟೈರ್ ಹವಾನಿಯಂತ್ರಣ ರಹಿತ ಬೋಗಿಯನ್ನು ಈ ರೈಲು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ (CLW)ನಲ್ಲಿ ಈ ರೈಲನ್ನು ವಿನ್ಯಾಸಗೊಳಿಸಲು ತೀರ್ಮಾನಿಸಲಾಗಿದೆ.

ಈ ವರ್ಷದ ಅಂತ್ಯಕ್ಕೆ ದೇಶದ ಆಯ್ದ ಮಾರ್ಗದಲ್ಲಿ ಈ ಮಾದರಿಯ ರೈಲು ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲು ನಿರ್ಧರಿಸಲಾಗಿದೆ. 2017ರಲ್ಲಿ ರೈಲ್ವೆಯು ಪರಿಚಯಿಸಿದ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲಿಗಿಂತ ತಾಂತ್ರಿಕವಾಗಿ ಹೆಚ್ಚು ಸೌಲಭ್ಯಗಳನ್ನು ಹೊಸ ಮಾದರಿ ರೈಲುಗಳು ಹೊಂದಿರಲಿವೆ.

ಸದ್ಯ ಭಾರತೀಯ ರೈಲ್ವೆಯ ವಂದೇ ಭಾರತ್ ರೈಲು ಬೋಗಿಯನ್ನು ಇಂಟಿಗ್ರಲ್ ಕೋಚ್‌ ಫ್ಯಾಕ್ಟರಿ ಚೆನ್ನೈನಲ್ಲಿ ಮಾತ್ರ ತಯಾರು ಮಾಡಲಾಗುತ್ತಿದೆ. ಇದೇ ತಾಂತ್ರಿಕ ಅಂಶಗಳನ್ನು ಬಳಕೆ ಮಾಡಿಕೊಂಡು ಹೊಸ ಮಾದರಿಯ ಹವಾನಿಯಂತ್ರಣ ರಹಿತ ರೈಲು ಬೋಗಿಯನ್ನು ವಂದೇ ಸಾಧಾರಣ್‌ಗಾಗಿ ತಯಾರು ಮಾಡಲಾಗುತ್ತದೆ.

ವಂದೇ ಭಾರತ್‌ಗೆ ಭಾರೀ ಬೇಡಿಕೆ ಇದೆ. ಆದರೆ ಇದರ ದರ ಹೆಚ್ಚು ಎಂಬ ದೂರು ಸಹ ಇದೆ. ಆದ್ದರಿಂದ ಭಾರತೀಯ ರೈಲ್ವೆ ಕೆಲವು ದಿನಗಳ ಹಿಂದೆ ರೈಲಿನ ದರವನ್ನು ಪರಿಷ್ಕರಣೆ ಮಾಡಿತ್ತು. ಈ ಮೂಲಕ ಹೆಚ್ಚು ಜನರನ್ನು ಈ ರೈಲು ಸೇವೆಯತ್ತ ಸೆಳೆಯಲು ಮುಂದಾಗಿತ್ತು.

ದೂರ ಪ್ರಯಾಣ ಮಾಡುವ ಜನರಿಗಾಗಿಯೇ ವಂದೇ ಭಾರತ್‌ಗೆ ಆವೃತ್ತಿಯಲ್ಲಿ ಸ್ಲೀಪರ್‌ ಕೋಚ್‌ಗಳನ್ನು ತಯಾರು ಮಾಡಲಾಗುತ್ತಿದೆ. ಅಕ್ಟೋಬರ್ ಅಥವ ನವೆಂಬರ್ ವೇಳೆಗೆ ಈ ರೈಲು ಓಡುವ ನಿರೀಕ್ಷೆ ಇದೆ. ಇದರ ನಡುವೆಯೇ ಕಡಿಮೆ ದರದ, ಹವಾನಿಯಂತ್ರಣ ರಹಿತ ವಂದೇ ಭಾರತ್ ಮಾದರಿ ರೈಲು ಸೇವೆ ಆರಂಭಿಸಲು ಇಲಾಖೆ ಚಿಂತನೆ ನಡೆಸಿದೆ.

2023ರ ಆಗಸ್ಟ್‌ಗೆ 75 ವಂದೇ ಭಾರತ್ ರೈಲುಗಳನ್ನು ಓಡಿಸಬೇಕು ಎಂಬುದು ಕೇಂದ್ರ ಸರ್ಕಾರದ ಗುರಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿಯೇ ಈ ಕುರಿತು ಘೋಷಣೆ ಮಾಡಿದ್ದರು. ಆದರೆ ಸದ್ಯ ದೇಶದಲ್ಲಿ 26 ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಇದರಲ್ಲಿ 7ಕ್ಕೂ ಹೆಚ್ಚು ಮಾರ್ಗದ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ದರ, ವೇಳಾಪಟ್ಟಿ ಬದಲಾವಣೆ ಮಾಡಿ ಜನಸ್ನೇಹಿಯಾಗಿಸಲು ಸಹ ಇಲಾಖೆ ಪ್ರಯತ್ನ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+