ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್‌ಗಳು ಎಷ್ಟು ಗೊತ್ತಾ?
ನವದೆಹಲಿ, ಮಾರ್ಚ್ 29 : ಭಾರತೀಯ ರೈಲ್ವೆ ಸುಮಾರು 20 ಸಾವಿರ ಕೋಚ್‌ಗಳನ್ನು ವಾರ್ಡ್‌ಗಳಾಗಿ ಪರಿವರ್ತನೆ ಮಾಡಬೇಕು ಎಂದು ಎಲ್ಲಾ ವಲಯಗಳ ಮ್ಯಾನೇಜರ್‌ಗಳಿಗೆ ಪತ್ರ ಬರೆದಿದೆ. ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.
ಸೋಮವಾರ ಭಾರತೀಯ ರೈಲ್ವೆ ಎಲ್ಲಾ ವಲಯಗಳಿಗೆ ಈ ಕುರಿತು ಪತ್ರವನ್ನು ಬರೆದಿದೆ. ಮೊದಲು 5 ಸಾವಿರ ಕೋಚ್‌ಗಳನ್ನು ಪರಿವರ್ತನೆ ಮಾಡುವ ಉದ್ದೇಶ ಹೊಂದಲಾಗಿತ್ತು. ಈಗ 20 ಸಾವಿರ ಕೋಚ್‌ಗಳನ್ನು ತಾತ್ಕಾಲಿಕ ಆಸ್ಪತ್ರೆಗಳಾಗಿ ಪರಿವರ್ತನೆ ಮಾಡಲಾಗುತ್ತದೆ.
ರೈಲ್ವೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಈ ಕುರಿತು ತೀರ್ಮಾನ ಕೈಗೊಂಡಿದೆ. ದೇಶದ ಎಲ್ಲಾ 5 ರೈಲ್ವೆ ವಲಯದಲ್ಲಿ ಒಂದೇ ಮಾದರಿಯ ವಾರ್ಡ್‌ಗಳು ನಿರ್ಮಾಣವಾಗಲಿವೆ. ಕೆಲವು ಕೋಚ್‌ಗಳನ್ನು Quarantineಗಾಗಿ ಮಾತ್ರ ಮೀಸಲಾಗಿಡಲಾಗುತ್ತದೆ.

ಹವಾನಿಯಂತ್ರಣ ರಹಿತ ಕೋಚ್‌ಗಳನ್ನು ಮಾತ್ರ ವಾರ್ಡ್‌ಗಳಾಗಿ ಪರಿವರ್ತನೆ ಮಾಡಲು ಬಳಕೆ ಮಾಡಲಾಗುತ್ತದೆ. ಐಸೋಲೇಷನ್ ವಾರ್ಡ್‌ಗಳನ್ನು ನಿರ್ಮಿಸಬೇಕು ಎಂದು ಪತ್ರದಲ್ಲಿ ಭಾರತೀಯ ರೈಲ್ವೆ ಹೇಳಿದೆ.
ವಾರ್ಡ್‌ಗಳನ್ನು ನಿರ್ಮಿಸುವ ಜೊತೆಗೆ ಔಷಧಿಗಳನ್ನು ಸಂಗ್ರಹಿಸಲು ವ್ಯವಸ್ಥೆಗಳನ್ನು ಮಾಡುವಂತೆಯೂ ಪತ್ರದಲ್ಲಿ ಸೂಚನೆ ನೀಡಲಾಗಿದೆ. ವಾರ್ಡ್‌ಗಳಿಗೆ ಬೇಕಾದ ಆಕ್ಸಿಜನ್ ಸಿಲಿಂಡರ್‌ಗಳನ್ನು ಆರೋಗ್ಯ ಇಲಾಖೆಯು ಸರಬರಾಜು ಮಾಡಲಿದೆ.
ಕೋಚ್‌ಗಳಲ್ಲಿ ಮಧ್ಯದಲ್ಲಿರುವ ಬರ್ತ್‌ಗಳನ್ನು ತೆಗೆದುಹಾಕಲಾಗುತ್ತದೆ. ಪ್ರತಿ ಕ್ಯಾಬಿನ್‌ನಲ್ಲಿ ರೋಗಿಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಕೋಚ್‌ಗಳ ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸಲಾಗುತ್ತದೆ.












Click it and Unblock the Notifications