ಕನಿಷ್ಠ ಪ್ರಯಾಣ ದರ ಏರಿಕೆ ಮಾಡಿದ ರೈಲ್ವೆ ಇಲಾಖೆ

ನವದೆಹಲಿ, ನ.18: ಸೀಸನ್ ಟಿಕೆಟ್, ಪ್ಲಾಟ್ ಫಾರಮ್ ಟಿಕೆಟ್ ಹೆಚ್ಚಳದ ನಂತರ ಈಗ ಕನಿಷ್ಠ ಪ್ರಯಾಣ ದರವನ್ನು ಏರಿಕೆ ಮಾಡಿ ಭಾರತೀಯ ರೈಲ್ವೆ ಪ್ರಕಟಣೆ ಹೊರಡಿಸಿದೆ.

ರೈಲಿನಲ್ಲಿ ಕನಿಷ್ಠ ಪ್ರಯಾಣ ದರವನ್ನು 5 ರು. ನಿಂದ 10 ರು.ಗೆ ಹೆಚ್ಚಿಸಲು ನಿರ್ಧರಿಸಿದ್ದು, ನವೆಂಬರ್ 20ರಿಂದ ನೂತನ ದರ ಜಾರಿಗೆ ಬರಲಿದೆ. ಉಪನಗರ ಪ್ರದೇಶದ ಹೊರತಾದ ಮಾರ್ಗಗಳಿಗೆ ಮಾತ್ರ ಈ ದರ ಅನ್ವಯವಾಗಲಿದೆ. [ರೈಲ್ವೆ ಇ-ಟಿಕೆಟ್ ಬುಕಿಂಗ್ ಗೆ 15 ನಿಮಿಷ ಹೆಚ್ಚುವರಿ ಅವಕಾಶ]

Railways hikes minimum train passenger fare from Rs5 to Rs10

ಕಳೆದ ಏಪ್ರಿಲ್​ ತಿಂಗಳಿನಲ್ಲಿ ಪ್ಲಾಟ್ ಫಾರಮ್ ಟಿಕೆಟ್ ದರವನ್ನು 5 ರಿಂದ 10 ರೂ.ಗೆ ಏರಿಸಲಾಗಿತ್ತು. ಪ್ಪಾಟ್ ಫಾರಂ ಟಿಕೆಟ್ ದರ ದುಬಾರಿಯಾಗಿದ್ದರಿಂದ ಸಾರ್ವಜನಿಕರು ಪ್ಲಾಟ್ ಫಾರಮ್ ಟಿಕೆಟ್ ಬದಲಿಗೆ 5 ರು.ನ ಕನಿಷ್ಠ ಪ್ರಯಾಣದ ಟಿಕೆಟ್ ಪಡೆದು ರೈಲು ನಿಲ್ದಾಣ ಪ್ರವೇಶಿಸುತ್ತಿದ್ದರು. ಈ ಬಗ್ಗೆ ಗಮನ ಹರಿಸಿದ ರೈಲ್ವೇ ಇಲಾಖೆ ಈಗ ಕನಿಷ್ಠ ಪ್ರಯಾಣ ದರವನ್ನು 10 ರು.ಗೆ ಹೆಚ್ಚಿಸಿದೆ.[ರೈಲ್ವೆ ಟಿಕೆಟ್ ಮೊದಲೇ ಪಡೆಯಲು ಹೊಸ ಆಪ್!]

ರೈಲ್ವೆ ಬಜೆಟ್ ನಲ್ಲಿ ಘೋಷಿಸಿದಂತೆ ಪ್ಲಾಟ್ ಫಾರಮ್ ದರವನ್ನು ಏರಿಕೆ ಮಾಡಲಾಗಿತ್ತು. ಅದರೆ, ಸೆಕೆಂಡ್ ಕ್ಲಾಸ್ ಜರ್ನಿ ಕನಿಷ್ಠ ಪ್ರಮಾಣ ದರದ ಟಿಕೆಟ್ ಖರೀದಿಸಿ ಜನರು ಪ್ರಯಾಣಿಸುತ್ತಿದ್ದರು. ಹೀಗಾಗಿ ಟಿಕೆಟ್ ದರ ಏರಿಕೆ ಮಾಡಬೇಕಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯಕ್ಕೆ ನೂತನ ದರ ಸೆಕೆಂಡ್ ಕ್ಲಾಸ್ ಎರಡನೇ ಸ್ತರದ ಸಬ್ ಅರ್ಬನ್ ಅಲ್ಲದ ಪ್ರದೇದ ರೈಲುಗಳಿಗೆ ಮಾತ್ರ ಸೀಮಿತವಾಗಿದೆ ಎಂದಿದ್ದಾರೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+