RailOne App: ಪ್ರಯಾಣಿಕರಿಗೆ ರೈಲ್ವೆ ಎಲ್ಲ ಸೇವೆಗಳು ಈ ಒಂದೇ 'ರೈಲ್ ಒನ್ ಆಪ್'ನಲ್ಲಿ ಲಭ್ಯ! ಲಾಗಿನ್ ಆಗಿ
RailOne App: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗುವ ಉಪಕ್ರಮ ಜಾರಿಗೆ ತರುತ್ತಿರುವ ರೈಲ್ವೆ ಇಲಾಖೆಯು ಇದೀಗ ರೈಲ್ವೆಯ ವಿವಿಧ ಸೇವೆಗಳು ಒಂದೇ ವೇದಿಕೆಯಡಿ ಸಿಗುವಂತೆ ಮಾಡುವ ಸದುದ್ದೇಶದಿಂದ 'ರೈಲ್ ಒನ್ ಆಪ್' (RailOne App) ಬಿಡುಗಡೆ ಮಾಡಿದೆ. ಈ ಹೊಸ ಡಿಜಿಟಲ್ ಸೌಲಭ್ಯಕ್ಕೆ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಚಾಲನೆ ನೀಡಿದರು. ಈ ಮೊಬೈಲ್ ಅಪ್ಲಿಕೇಷನ್ ನಲ್ಲಿ ಏನೆಲ್ಲ ಸಿಗಲಿದೆ? ಸೇವೆಗಳ ವಿವರ, ಟಿಕೆಟ್ ಬುಕ್ಕಿಂಗ್, ವಿಶೇಷತೆಗಳು ಮಾಹಿತಿ ಇಲ್ಲಿದೆ.
ಕೇಂದ್ರ ರೈಲ್ವೆ ಸಚಿವಾಲಯದ ಎಲ್ಲ ಸಾರ್ವಜನಿಕ ಸೇವೆಗಳನ್ನು ಒಂದೇ ವೇದಿಕೆಗೆ ಬಂದಿವೆ. ಇದರಿಂದ ಪ್ರಯಾಣಿಕರಿಗೆ ಅನೇಕ ರೀತಿಯ ಪ್ರಯೋಜನಗಳು ಇವೆ. ರೈಲ್ವೆ ಟಿಕೆಟ್ ಬುಕಿಂಗ್, PNR ಸಂಖ್ಯೆ ವಿಚಾರಣೆಗಳು, ಟಿಕೆಟ್ ಮರುಪಾವತಿ ಕೋರಿಕೆ, ರೈಲುಗಳಲ್ಲಿ ಆಹಾರ ಆರ್ಡರ್ ಮಾಡುವುದು ಸೇರಿದಂತೆ ಅಗತ್ಯ ಸೇವೆಗಳು 'ರೈಲ್ ಒನ್ ಆಪ್' (RailOne App) ನಿಂದ ಪಡೆಯಬಹುದು.

'ರೈಲ್ ಒನ್ ಆಪ್' ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಸಾಧನಗಳಲ್ಲಿ ಲಭ್ಯವಿದೆ. ಇನ್ನೂ ಮೊಬೈಲ್ ಅಪ್ಲಿಕೇಷನ್ ವಿಶೇಷತೆಗಳನ್ನು ನೋಡುವುದಾದರೆ, ಈ ಆಪ್ ಅನ್ನು ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (CRIS) ಅಭಿವೃದ್ಧಿಪಡಿಸಿದೆ. ನೀವು ಆಂಡ್ರಾಯ್ಡ್ ಫೋನ್ ಬಳಕೆದಾರರಾದರೆ ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್ ಬಳಕೆದಾರರು ಆಗಿದ್ದರೆ ಆಪ್ ಸ್ಟೋರ್‌ನಲ್ಲಿ ಈ RailOne App ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು.
ರೈಲ್‌ಒನ್ ಆಪ್ ಪ್ರಯೋಜನೆ & ವಿಶೇಷತೆಗಳು
ಭಾರತೀಯ ರೈಲ್ವೆ ಇಲಾಖೆಯ ಸೇವೆಗಾಗಿ ಇತರ ಮೊಬೈಲ್ ಅಪ್ಲಿಕೇಷನ್‌ಗಳನ್ನು ಹೊಂದಿದ್ದರು ಸಹಿತ ಅವರೆಲ್ಲವು ಈ RailOne App ನಡಿ ಸಂಯೋಜನೆಗೊಂಡಿವೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ. ರೈಲ್‌ಒನ್ ಆಪ್ ನಿಂದ ನೀವು ಕಾಯ್ದಿರಿಸಿದ, ಕಾಯ್ದಿರಿಸದ ರೈಲು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಕೂತದಲ್ಲಿಯೇ ಬುಕ್ ಮಾಡಬಹುದು. ರೈಲಿನಲ್ಲಿ ಸರಕು ಮತ್ತು ಪಾರ್ಸೆಲ್ ಬರುವುದಿದ್ದರೆ ಆ ಬಗ್ಗೆಯು ವಿಚಾರಣೆ ಮಡಬಹದು. PNR ಸಂಖ್ಯೆ ನಮೂದಿಸಿ ಟ್ರ್ಯಾಕ್ ಮಾಡುವ ವೈಶಿಷ್ಟ್ಯ ಸಹ ಇದರಲ್ಲಿದೆ. ಇನ್ನೂ ರೈಲು ನಿಲ್ದಾಣದಲ್ಲಿ ನಿಮ್ಮ ಕೋಚ್ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಆಪ್‌ನಲ್ಲಿ ನೀವು ತಡಕಾಡಬಹುದಾಗಿದೆ.
ಸಂಚರಿಸುತ್ತಿರುವ ರೈಲಿನ ನೈಜ ನಿಲ್ದಾಣ, ಸಮಯದ ಟ್ರ್ಯಾಕಿಂಗ್ ಮಾಡಬಹುದಾಗಿದೆ. ಮುಂದಿನ ನಿಲ್ದಾಣಕ್ಕೆ ತೆರಳುವ, ರೈಲು ಬರುವ ಮತ್ತು ನಿಲ್ದಾಣದಿಂದ ಬಿಡುವ ಇಲ್ಲವೇ ನೀವು ಸಂಚರಿಸುವ ರೈಲಿನ ವಿಳಂಬದ, ರೈಲಿನ ಲೈವ್ ಮಾಹಿತಿಯನ್ನು ಸಹ ಈ ಆಪ್ ಮೂಲಕ ಪಡೆಯಬಹುದಾಗಿದೆ.

ದೂರು ನೀಡಿ ಪರಿಹಾರ ಪಡೆಯಿರಿ
ಮುಖ್ಯವಾಗಿ ಪ್ರಯಾಣದ ವೇಳೆ ಆಗುವ ತೊಂದರೆ, ಅನಾನುಕೂಲತೆಗಳ ಬಗ್ಗೆ ಈ ಸೂಪರ್ ಅಪ್ಲಿಕೇಶನ್ ನಲ್ಲಿ ತ್ವರಿತ ದೂರು ನೀಡಿ ಪರಿಹಾರ ಪಡೆಯಲು, ದೂರಿನ ಟ್ರ್ಯಾಕ್, ಅಧಿಕಾರಿಗಳ ಜೊತೆ ಕ್ರಿಯೆ ಮತ್ತು ಪ್ರತಿಕ್ರಿಯೆ ಮಾಡಲು ಅನುಕೂಲವಾಗಲಿದೆ. ಪ್ರಯಾಣದ ಸಮಯದಲ್ಲಿ ಇಲಾಖೆ ಜತೆ ಪಾಲುದಾರಿಕೆ ಹೊಂದಿದ ಹೋಟೆಲ್ ಜೊತೆಗೆ ಊಟದ ಆರ್ಡರ್ ಮಾಡಬಹುದು.
ರೈಲು ಟಿಕೆಟ್ ಪಡೆದ ಬಳಿಕ ರೈಲು ರದ್ದಾದರೆ ಹಾಗೂ ಪ್ರಯಾಣ ತಪ್ಪಿದರೆ, ತೀವ್ರ ವಿಳಂಬಗಳಿಂದ ನೀವು ಟಿಕೆಟ್ ಹಣದ ಮರುಪಾವತಿ ಪಡೆಯಲು ಆಪ್ ಮೂಲಕವೇ ವಿನಂತಿಸಿಕೊಳ್ಳಬಹುದು. ಈ ಆಪ್ ಅನ್ನು ಡಿಜಿಟಲ್ ವ್ಯಾಲೆಟ್ ರೀತಿಯಲ್ಲಿ ಬಳಸಬಹುದೆಂದು ಅಧಿಕಾರಿಗಳು ಹೇಳಿದ್ದಾರೆ.
RailOne App: ಲಾಗಿನ್ ಹೇಗೆ?
ಈ ಒಂದೇ ಆಪ್ ಎಲ್ಲ ಭಾಷೆ ಪ್ರಯಾಣಿಕರಿಗೆ ಅಗತ್ಯ ಸಹಾಯಕ್ಕೆ ಬರುತ್ತದೆ. ಅಂದರೆ ಎಲ್ಲ ಭಾಷೆಯಲ್ಲೂ ಈ ಆಪ್ ಬಳಕೆ ಮಾಡಬಹುದಾಗಿದೆ. ಒಂದೇ ಸೈನ್-ಆನ್ (SSO) ವ್ಯವಸ್ಥೆಯ ಮೂಲಕ ಲಾಗಿನ್ ಆಗಬೇಕು. ಅಲ್ಲಿ ಕೇಳುವ ವಿವರ, ರುಜುವಾತುಗಳನ್ನು IRCTC ರೈಲ್‌ಕನೆಕ್ಟ್ ಮತ್ತು UTS ಮೊಬೈಲ್ ಅಪ್ಲಿಕೇಶನ್‌ನಂತಹ ಇತರ ಅಪ್ಲಿಕೇಶನ್‌ಗಳಿಗೆ ಲಾಗಿನ್ ಮಾಡಲು ಬಳಸಬಹುದು. ಫಿಂಗರ್ ಪ್ರಿಂಟ್ ದೃಢೀಕರಣ ಇಲ್ಲವೇ ಎಂಪಿನ್ (m-PIN) ಆಯ್ಕೆ ಮೂಲಕ ನೀವು ಲಾಗಿನ್ ಆಗಿ ಸಕ್ರಿಯಗೊಳ್ಳಬಹುದು ಎಂದು ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications