ಮೆಕ್ಯಾನಿಕ್ ಶಾಪ್‌ನಲ್ಲಿ ಸ್ಪ್ಯಾನರ್ ಹಿಡಿದು ಕೆಲಸ ಮಾಡಿದ ರಾಹುಲ್ ಗಾಂಧಿ
ನವದೆಹಲಿ, ಜೂನ್ 28: ಬಡವರ, ಕೂಲಿ ಕಾರ್ಮಿಕರ ಕಷ್ಟಗಳನ್ನು ನೇರ ವೀಕ್ಷಿಸಿ ಸಂವಾದ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ದೆಹಲಿಯ ಕರೋಲ್ ಬಾಗ್‌ನಲ್ಲಿರುವ ಮೋಟಾರ್‌ಸೈಕಲ್ ಮೆಕ್ಯಾನಿಕ್ ಶಾಪ್‌ಗೆ ಭೇಟಿ ನೀಡಿದರು.
ಮಾಜಿ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಮೆಕಾನಿಕ್ ಶಾಪ್‌ಗೆ ಭೇಟಿ ನೀಡಿರುವ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಭೇಟಿ ವೇಳೆ ರಾಹುಲ್ ಗಾಂಧಿ ಗಾಂಧಿಯವರು ಮೆಕ್ಯಾನಿಕ್‌ಗಳ ಜೊತೆಯಲ್ಲಿ ಕುಳಿತು ಅವರೊಂದಿಗೆ ಸಂವಾದ ಮಾಡಿದರು.

ಈ ಕೈಗಳು ಭಾರತವನ್ನು ರೂಪಿಸುತ್ತವೆ. ಈ ಬಟ್ಟೆಗಳ ಮೇಲೆ ಗ್ರೀಸ್ ನಮ್ಮ ಹೆಮ್ಮೆ ಮತ್ತು ಘನತೆ. ಜನರ ನಾಯಕ ಮಾತ್ರ ಅವರನ್ನು ಪ್ರೋತ್ಸಾಹಿಸಲು ಕೆಲಸ ಮಾಡುತ್ತಾನೆ. ರಾಹುಲ್ ಗಾಂಧಿ ದೆಹಲಿಯ ಕರೋಲ್ ಬಾಗ್‌ನಲ್ಲಿ ಬೈಕ್ ಮೆಕ್ಯಾನಿಕ್‌ಗಳೊಂದಿಗೆ. 'ಭಾರತ್ ಜೋಡೋ ಯಾತ್ರೆ' ಮುಂದುವರೆಯುತ್ತದೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಮೆಕಾನಿಕ್ ಶಾಪ್‌ಗೆ ರಾಹುಲ್ ಗಾಂಧಿ ಭೇಟಿ ಅವರು ಇತ್ತೀಚೆಗೆ ನೀಡುತ್ತಿರುವ ಅನಿರೀಕ್ಷಿತ ಭೇಟಿಗಳ ಭಾಗವಾಗಿದೆ, ಅವರು 4,000 ಕಿಮೀ ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ನಂತರ ಈ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಅಮೆರಿಕಕ್ಕೆ ಆರು ದಿನಗಳ ಪ್ರವಾಸದ ಸಂದರ್ಭದಲ್ಲಿ, ಗಾಂಧಿ ವಾಷಿಂಗ್ಟನ್ ಡಿಸಿಯಿಂದ ನ್ಯೂಯಾರ್ಕ್‌ಗೆ ಪಂಜಾಬಿ ಟ್ರಕ್ ಡ್ರೈವರ್‌ನೊಂದಿಗೆ ಟ್ರಕ್‌ನಲ್ಲಿ ಸವಾರಿ ಮಾಡಿದ್ದರು.

ಒಂದು ತಿಂಗಳ ಹಿಂದೆ ಅವರು ಪಂಜಾಬಿ ಡ್ರೈವರ್‌ನೊಂದಿಗೆ ತಡರಾತ್ರಿ ಟ್ರಕ್ ಸವಾರಿ ಮಾಡಿದರು. ಡ್ರೈವರ್‌ಗಳ ಜೀವನ, ಅನುಭವಗಳು ಮತ್ತು ದೈನಂದಿನ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ದೆಹಲಿಯಿಂದ ಚಂಡೀಗಢಕ್ಕೆ ಅವರು ಪ್ರಯಾಣಿಸಿದರು. ಇದಕ್ಕೂ ಮುನ್ನ ಮೇ 10ರಂದು ಮಧ್ಯಾಹ್ನದ ಊಟದ ವೇಳೆ ದೆಹಲಿ ವಿಶ್ವವಿದ್ಯಾಲಯದ ಪಿಜಿ ಪುರುಷರ ಹಾಸ್ಟೆಲ್‌ಗೆ ತೆರಳಿ ಅವರೊಂದಿಗೆ ಆಹಾರ ಸೇವಿಸಿದ್ದರು.












Click it and Unblock the Notifications