ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ
ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಯುವರಾಜ ರಾಹುಲ್ ಮನೆಯಲ್ಲಿ ಖುಷಿಯೋ ಖುಷಿ. ಯಾಕಂದ್ರೆ ರಾಹುಲ್ ಗಾಂಧಿ ಮನೆಗೆ ಹೊಸ ಸದಸ್ಯನ ಎಂಟ್ರಿ ಆಗಿದೆ. ಇದು ಆ ಕುಟುಂಬದ ಖುಷಿಯನ್ನ ಡಬಲ್ ಮಾಡಿದೆ. ಹಾಗಾದರೆ ರಾಹುಲ್ ಗಾಂಧಿ ಈಗ ಮದುವೆ ಆದ್ರಾ? ಅಷ್ಟಕ್ಕೂ ರಾಹುಲ್ ಮನೆಗೆ ಬಂದ ಹೊಸ ಅತಿಥಿ ಯಾರು?
ಭಾರತದ ರಾಜಕಾರಣಿಗಳಲ್ಲಿ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಅಂದರೆ ಅದು ರಾಹುಲ್ ಗಾಂಧಿ. ಇಂತಿಪ್ಪ ರಾಹುಲ್ ಅವರಿಗೆ ಮದುವೆ ಆಗುತ್ತೆ ಅಂತ ಹಲವರು ಕಾಯುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಮಾತ್ರ ಮದುವೆ ಆಗೋ ಮನಸ್ಸು ಮಾಡುತ್ತಿಲ್ಲ. ಇದರ ಕುರಿತು ಇತ್ತೀಚೆಗೆ ಲಾಲು ಪ್ರಸಾದ್ ಯಾದವ್ ಕೂಡ ಮಾತನಾಡಿದ್ದರು. ರಾಹುಲ್ ಗಾಂಧಿ ಅವರ ಮದುವೆ ಬಗ್ಗೆ ಮಾತನಾಡಿ, ರಾಹುಲ್ ಮದುವೆ ಆಗಿ ಅಂತಾ ಸಲಹೆ ನೀಡಿದ್ದರು. ಆದರೆ ಈಗ ರಾಹುಲ್ ಮನೆಗೆ ಹೊಸ ಸದಸ್ಯ ಎಂಟ್ರಿ ಆದ ಸುದ್ದಿ ಸದ್ದು ಮಾಡ್ತಿದೆ. ಹಾಗಾದರೆ ರಾಹುಲ್ ಗಾಂಧಿ ಕುಟುಂಬಕ್ಕೆ ಸೇರ್ಪಡೆಯಾದ ಹೊಸ ಅತಿಥಿ ಯಾರು?

ರಾಹುಲ್ ಮನೆಗೆ ಬಂದ ಅತಿಥಿ ಯಾರು?
ಅಂದಹಾಗೆ ರಾಹುಲ್ ಗಾಂಧಿ ಅವರ ಮನೆಗೆ ಹೊಸ ಅತಿಥಿ ಬಂದಿರುವುದು ನಿಜ. ಆದರೆ ಅದು ಮನುಷ್ಯರು ಅಲ್ಲ, ಮುದ್ದಿನ ನಾಯಿ. ಅಷ್ಟಕ್ಕೂ ತಮ್ಮ ಮನೆಗೆ ಬಂದ ಅತಿಥಿಯ ಬಗ್ಗೆ ರಾಹುಲ್ ಗಾಂಧಿ ಖುಷಿ ಖುಷಿಯಾಗಿ ಸುದ್ದಿ ಹಂಚಿಕೊಂಡಿದ್ದಾರೆ. ಆಗಿದ್ದು ಏನಪ್ಪಾ ಅಂದ್ರೆ, ವಿಶ್ವ ಪ್ರಾಣಿಗಳ ದಿನದಂದು ರಾಹುಲ್ ಗಾಂಧಿ ತಮ್ಮ ಕುಟುಂಬದ ಹೊಸ ಸದಸ್ಯನನ್ನ ಪರಿಚಯಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾಹುಲ್ ಗಾಂಧಿ ಗೋವಾ ಪ್ರವಾಸ ತೆರಳಿದ್ದರು. ಈ ವೇಳೆ ಗೋವಾದಿಂದ ವಿಶೇಷ ತಳಿಯ ನಾಯಿ ಮರಿ ದೆಹಲಿಗೆ ತಂದಿದ್ದಾರೆ. ಅದನ್ನು ರಾಹುಲ್ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಅವರಿಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ.
ಅಷ್ಟಕ್ಕೂ ಗೋವಾ ಮೂಲದ ಶಾರ್ವಣಿ ಪಿತ್ರೆ & ಸ್ಟಾನ್ಲಿ ಬ್ರಾಗಾಂಕಾ ದಂಪತಿ, ಜ್ಯಾಕ್ ರಸೆಲ್ ಟೆರಿಯರ್ ನಾಯಿ ತಳಿ ಬೆಳೆಸುತ್ತಿದ್ದಾರೆ. ಈ ಮಾಹಿತಿ ಪಡೆದು, ಗೋವಾಗೆ ತೆರಳಿದ್ದ ರಾಹುಲ್ ಗಾಂಧಿ ಅವರ ಮನೆಗೆ ವಿಸಿಟ್ ಮಾಡಿದ್ದಾರೆ. ಆಗ ತಮ್ಮ ತಾಯಿಗಾಗಿ ನಾಯಿ ಮರಿ ಕೊಂಡು ಅದನ್ನ ದೆಹಲಿಗೆ ತಂದು ಉಡುಗೊರೆಯಾಗಿ ಕೊಟ್ಟಿದ್ದಾರೆ. ಇನ್ನು ಈ ಕುರಿತು ವಿಡಿಯೋ ರೆಕಾರ್ಡ್ ಮಾಡಿಸಿದ ರಾಹುಲ್ ಗಾಂಧಿ ತಮ್ಮ ಕುಟುಂಬದ ಹೊಸ ಸದಸ್ಯೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗೇ ಸೋನಿಯಾ ಗಾಂಧಿ ಕೂಡ, ನೂರಿ ಹೆಸರಿನ ನಾಯಿ ಮರಿ ನೋಡಿ ಖುಷಿಯಿಂದ ಮುದ್ದಾಡಿದ್ದಾರೆ.












Click it and Unblock the Notifications