ಕೊರೊನಾಗೆ ಲಾಕ್‌ಡೌನ್ ವಿರಾಮದ ಬಟನ್ ಅಷ್ಟೇ ಎಂದ ರಾಹುಲ್ ಗಾಂಧಿ

ನವದೆಹಲಿ, ಏಪ್ರಿಲ್ 16: ಕೊರೊನಾ ವೈರಸ್‌ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಲಾಕ್‌ಡೌನ್ ಕ್ರಮದಿಂದ ವೈರಸ್‌ನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕೊರೊನಾ ಸಮಸ್ಯೆಗೆ ಲಾಕ್‌ಡೌನ್ ಯಾವುದೇ ರೀತಿಯ ಪರಿಹಾರವಲ್ಲ, ಇದೊಂದು ವಿರಾಮದ ಬಟನ್ ಆಗಿದೆಯಷ್ಟೇ,ಲಾಕ್'ಡೌನ್ ನಿಂದ ಹೊರಬರುತ್ತಿದ್ದಂತೆಯೇ ಮತ್ತೆ ವೈರಸ್ ಹರಡಲು ಆರಂಭಿಸುತ್ತದೆ ಎಂದು ಹೇಳಿದ್ದಾರೆ.

ಪರೀಕ್ಷೆಗಳನ್ನು ಯೋಜಿತ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಸಬೇಕಿದೆ. ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸಹಾಯ ಮಾಡಬೇಕಿದೆ. ರೋಗಿಗಳನ್ನು ಪತ್ತೆಹಚ್ಚುವುದರ ಜೊತೆಗೆ, ಭಾರತದ ನಕ್ಷೆ ಸಿದ್ಧಪಡಿಸಿ ವೈರಸ್ ಎಲ್ಲೆಲ್ಲಿ ಹರಡುತ್ತಿದೆ ಎಂಬುದನ್ನು ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ.

Rahul Gandhi Says Lockdown Does Not Defeat Coronavirus

ಈಗಾಗಲೇ ನಾವು ಸಂಕಷ್ಟದ ಹಂತ ತಲುಪಿ ಬಿಟ್ಟಿದ್ದೇವೆ. ಇದೀಗ ನಾವು ತುರ್ತು ಪರಿಸ್ಥಿಯಲ್ಲಿದ್ದೇವೆ. ವೈರಸ್ ವಿರುದ್ಧ ಹೋರಾಡಲು ಭಾರತ ಒಗ್ಗೂಡಬೇಕಿದೆ. ಮೊಂಡು ಸಲಕರಣೆಗಳ ಬಳಸಬಾರದು. ಯೋಜಿತ ತಂತ್ರಗಳ ಮೂಲಕ ನಾವು ಕೆಲಸ ಮಾಡಬೇಕಿದೆ.

ಹೆಚ್ಚೆಚ್ಚು ಪರೀಕ್ಷೆ ನಡೆಸುವುದರಿಂದ ವೈರಸ್ ಮಟ್ಟ ಹಾಕಬಹುದು. ಪರೀಕ್ಷೆ ನಡೆಸುವ ಮೂಲಕ ವೈರಸ್ ಯಾವ ರೀತಿ ಪಸರುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+