ಅಕೈ ಪದ್ಮಾಶಾಲಿಗೆ ರಾಹುಲ್ ನೀಡಿದ ಆಸಕ್ತಿಕರ ಉತ್ತರದ ಹಳೇ ವಿಡಿಯೋ

ಬೆಂಗಳೂರು, ಸೆಪ್ಟೆಂಬರ್ 7: ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದರು. ಅವರ ಜತೆಗೆ ಎಲ್ ಜಿಬಿಟಿ ಸಮುದಾಯದ ಅಕೈ ಪದ್ಮಶಾಲಿ ನಡೆಸಿದ ಸಂಭಾಷಣೆ ಹಾಗೂ ಅದಕ್ಕೆ ರಾಹುಲ್ ಅವರು ನೀಡಿದ ಆಸಕ್ತಿಕರವಾದ ಉತ್ತರದ ವಿಡಿಯೋವನ್ನು ಕಾಂಗ್ರೆಸ್ ನಿಂದ ಟ್ವೀಟ್ ಮಾಡಲಾಗಿದೆ.

"ಸೋನಿಯಾ ಗಾಂಧಿ ಅವರು 2016ರಲ್ಲಿ ಎಲ್ ಜಿಬಿಟಿ ಸಮುದಾಯದ ಸಮಸ್ಯೆ ಬಗ್ಗೆ ವಿಚಾರಿಸಲು ಒಂದು ಗಂಟೆ ಸಮಯ ಮೀಸಲಿರಿಸಿದ್ದರು. ಮರು ದಿನ ಶಶಿ ತರೂರ್ ಅವರು ಐಪಿಸಿ ಸೆಕ್ಷನ್ 377ರಲ್ಲಿ ಇರುವ ಆಕ್ಷೇಪಾರ್ಹ ಅಂಶಗಳನ್ನು ತೆಗೆಯುವ ಬಗ್ಗೆ ಮಾತನಾಡಿದ್ದರು. ಆದರೆ ಮೋದಿ ನೇತೃತ್ವದ ಸರಕಾರ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ" ಎಂದಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು, ರಾಹುಲ್ ಗಾಂಧಿ ಪ್ರಧಾನಿ ಆಗಲಿ. ನಾನು ಭಿಕ್ಷೆ ಬೇಡುತ್ತಿದ್ದೆ. ಲೈಂಗಿಕ ಕಾರ್ಯಕರ್ತೆ ಆಗಿದ್ದೆ. ಬಹಳ ಹಿಂಸೆ ಅನುಭವಿಸುತ್ತಿದ್ದೆ. ನನಗೆ ಕರ್ನಾಟಕ ಸರಕಾರ ರಾಜ್ಯದ ಎರಡನೇ ಅತ್ಯುನ್ನತ ನಾಗರಿಕ ಗೌರವ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದ್ದಾರೆ ಅಕೈ ಪದ್ಮಶಾಲಿ.

Rahul Gandhi interesting answer about LGBT community rights, old video posted by Congress

ಸಂಸತ್ ಹಾಗೂ ಚುನಾವಣೆಯಲ್ಲಿ ನಮ್ಮ ಸಮುದಾಯಕ್ಕೆ ಹೇಗೆ ಪ್ರಾಶಸ್ತ್ಯ ಸಿಗುತ್ತದೆ, ನಮ್ಮ ಬಗ್ಗೆ ಮೋದಿ ಸರಕಾರಕ್ಕೆ ತಿರಸ್ಕಾರ ಏಕೆ ಎಂದು ಪ್ರಶ್ನಿಸಿದ್ದಾರೆ. ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ರಾಹುಲ್, ಈ ಬಗ್ಗೆ ಮೋದಿ ಅವರನ್ನು ಕೇಳಿ. ಅವರ ದೃಷ್ಟಿಕೋನದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.

ಈ ವಿಚಾರದಲ್ಲಿ ನಾನು ನೇರವಾಗಿದ್ದೇನೆ. ಎಲ್ಲರಿಗೂ ಧ್ವನಿ ಇರಬೇಕು. ಆ ಧ್ವನಿ ನನ್ನ ವಿರುದ್ಧವೇ ಇದ್ದರೂ, ಕಾಂಗ್ರೆಸ್ ವಿರುದ್ಧವೇ ಇದ್ದರೂ ಆ ಧ್ವನಿಗೆ ಅವಕಾಶ ಇರಬೇಕು. ನನ್ನ ಉದ್ದೇಶ ಜನರ ಬಳಿ ಹೋಗಬೇಕು. ನಮ್ಮ ಕುಟುಂಬದಲ್ಲಿ ಎಲ್ಲರೂ ಮುಕ್ತ ಮನಸ್ಸಿನವರು. ಯಾರನ್ನೇ ಆಗಲಿ ಅವರ ಲೈಂಗಿಕ ಅಭ್ಯಾಸಕ್ಕಾಗಿ ಹಿಂದೆ ತಳ್ಳುವುದನ್ನು ಇಷ್ಟಪಡುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+