Raghav Chadha Love Story: ರಾಘವ್ ಚಡ್ಡಾ ಬಿಜೆಪಿ ಸೇರ್ಪಡೆ, ಆಸ್ತಿ - ಪ್ರೇಮಕಥೆ ವೈರಲ್: ಪರಿಣಿತಿ ಚೋಪ್ರಾ ಸಂಪತ್ತೇ ಜಾಸ್ತಿ
Raghav Chadha Love Story: ರಾಜಕಾರಣಿ - ಸದಾ ಸುದ್ದಿಯಲ್ಲಿರುವ ರಾಘವ್ ಚಡ್ಡಾ ಅವರು ಆಮ್ ಆದ್ಮಿ ಪಾರ್ಟಿ (ಎಎಪಿ) ಪಕ್ಷವನ್ನು ತೊರೆದು ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಗೆ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಅವರ ಪ್ರೇಮ ವಿವಾಹ ಹಾಗೂ ಸಂಪತ್ತಿನ ಬಗ್ಗೆಯೂ ಹೆಚ್ಚು ಚರ್ಚೆ ಆಗುತ್ತಿದೆ. ಈ ನಡುವೆ ರಾಘವ್ ಚಡ್ಡಾ ಅವರು ಎಎಪಿಯಿಂದ ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳ ಸಂಖ್ಯೆ ಭಾರೀ ಇಳಿಕೆಯಾಗಿದೆ. ಇದರ ಎಲ್ಲಾ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ರಾಜಕಾರಣಿ ರಾಘವ್ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರ ಪ್ರೇಮಕಥೆಯು ಲಂಡನ್‌ನಲ್ಲಿ ಶುರುವಾಗಿತ್ತು. ರಾಜಕಾರಣಿ ರಾಘವ್ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರ ಆಕಸ್ಮಿಕ ಭೇಟಿಯು ಪ್ರೇಮಾಂಕುರವಾಗಿ ಬದಲಾಗಿತ್ತು. ಇಬ್ಬರು ಸೆಲೆಬ್ರೆಟಿಗಳು 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಚಡ್ಡಾ - ಪರಿಣಿತಿ ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯ ಸುಮಾರು 74.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಸಂಪತ್ತಿನಲ್ಲಿ ಪರಿಣಿತಿ ಚೋಪ್ರಾ ಅವರ ಆಸ್ತಿ ಪಾಲು ಹೆಚ್ಚಾಗಿದೆ ಎನ್ನುವುದು ವಿಶೇಷವಾಗಿದೆ.

ರಾಘವ್ ಚಡ್ಡಾ - ಪರಿಣಿತಿ ಚೋಪ್ರಾ ಪ್ರೇಮಕಥೆ
ಪರಿಣಿತಿ ಚೋಪ್ರಾ ಮತ್ತು ಪರಿಣಿತಿ ಚೋಪ್ರಾ ಅವರು ಲಂಡನ್‌ನಲ್ಲಿ ಭೇಟಿಯಾಗಿದ್ದರು. ಮೊದಲ ಬಾರಿ ಲಂಡನ್‌ನಲ್ಲಿ ಬ್ರಿಟಿಷ್ ಕೌನ್ಸಿಲ್ ಕಾರ್ಯಕ್ರಮವೊಂದರಲ್ಲಿಇವರಿಬ್ಬರು ಭೇಟಿಯಾಗಿದ್ದರು. ಮನರಂಜನೆ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಪರಿಣಿತಿ ಮತ್ತು ಆಡಳಿತ - ರಾಜಕೀಯಕ್ಕಾಗಿ ರಾಘವ್ ಚಡ್ಡಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಈ ಸಂದರ್ಭದಲ್ಲಿ ಭೇಟಿಯಾಗಿದ್ದ ಇಬ್ಬರು ಮುಂದೆ ಈ ಭೇಟಿಯು ಪ್ರೇಮವಾಗಿ ಬದಲಾಗಿತ್ತು. ಬಹಳಷ್ಟು ದಿನಗಳ ಕಾಲದ ವರೆಗೆ ದಂಪತಿಯು ಈ ಪ್ರೇಮ ವಿಷಯವನ್ನು ಗೌಪ್ಯವಾಗಿ ಇರಿಸಿದ್ದರು. 2023ರ ಮೇ ತಿಂಗಳಿನಲ್ಲಿ ನವದೆಹಲಿಯ ಕಪುರ್ತಲಾ ಮನೆಯಲ್ಲಿ ನಿಶ್ಚಿತಾರ್ಥ ನಡೆದಿತ್ತು. 2023ರ ಸೆಪ್ಟೆಂಬರ್ 24 ರಂದು ರಾಜಸ್ಥಾನದ ಉದಯಪುರದ ದಿ ಲೀಲಾ ಪ್ಯಾಲೇಸ್‌ನಲ್ಲಿ ರಾಘವ್ ಚಡ್ಡಾ - ಪರಿಣಿತಿ ಚೋಪ್ರಾ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇನ್ನು ದಂಪತಿಗಳಿಗೆ ನೀರ್ ಎಂಬ ಗಂಡು ಮಗು ಇದೆ.
Raghav Chadha: ನಿವ್ವಳ ಮೌಲ್ಯ ಮತ್ತು ಆಸ್ತಿ ವಿವರ
ರಾಘವ್ ಚಡ್ಡಾ - ಪರಿಣಿತಿ ಚೋಪ್ರಾ ಅವರ ಒಟ್ಟು ಆಸ್ತಿ ಮೌಲ್ಯವು 2026ರ ಆರಂಭದ ವೇಳೆಗೆ 75 ಕೋಟಿ ರೂ. ಹೆಚ್ಚಿದೆ. ಪರಿಣೀತಿ ಚೋಪ್ರಾ ಅವರ ನಿವ್ವಳ ಮೌಲ್ಯ ಸುಮಾರು 74 ಕೋಟಿ ರೂ. ಇದೆ. ಮುಂಬೈನ ಬಾಂದ್ರಾದಲ್ಲಿರುವ ಐಷಾರಾಮಿ ಮನೆಯಿದ್ದು, ಇದು 22 ಕೋಟಿ ಮೌಲ್ಯದ್ದಾಗಿದೆ. ರೇಂಜ್ ರೋವರ್ ವೋಗ್, ಆಡಿ Q4 ಮತ್ತು ಆಡಿ Q7 ಸೇರಿದಂತೆ ಹಲವು ಐಷಾರಾಮಿ ಕಾರು ಸಂಗ್ರಹ ಇವರ ಬಳಿ ಇದೆ.
ಇನ್ನು ರಾಘವ್ ಚಡ್ಡಾ ಅವರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‌ಗಳ ಆಧಾರದ ಮೇಲೆ, ಅವರ ಘೋಷಿತ ನಿವ್ವಳ ಮೌಲ್ಯವು ತುಂಬಾ ಕಡಿಮೆಯಾಗಿದ್ದು, ಇದನ್ನು ಸುಮಾರು 50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸುಮಾರು 36 ಲಕ್ಷ ರೂಪಾಯಿ ಮೌಲ್ಯದ ವಸತಿ ಆಸ್ತಿ ಸೇರಿದೆ.
ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಇದ್ದು ಚಿನ್ನ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ.












Click it and Unblock the Notifications