ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿ

ವದೆಹಲಿ, ಸೆಪ್ಟೆಂಬರ್ 21: ರಫೇಲ್ ಯುದ್ಧ ವಿಮಾನದ ತಯಾರಿಕೆಗೆ ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್‌ಅನ್ನು ನಾಮನಿರ್ದೇಶನ ಮಾಡುವಂತೆ ಭಾರತ ಸರ್ಕಾರವೇ ಫ್ರೆಂಚ್ ಸರ್ಕಾರವನ್ನು ಕೋರಿತ್ತು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೋ ಒಲಾಂಡ್ ಹೇಳಿದ್ದಾರೆ ಎನ್ನಲಾಗಿದೆ.

ಫ್ರಾನ್ಸ್‌ನ ವೆಬ್‌ಸೈಟ್ ಮೀಡಿಯಾಪಾರ್ಟ್‌ನಲ್ಲಿ ಬರೆದ ಲೇಖನವೊಂದರಲ್ಲಿ ಒಲಾಂಡ್ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ಭಾರತದಲ್ಲಿ ರಕ್ಷಣಾ ಯುದ್ಧ ವಿಮಾನಗಳ ತಯಾರಿಕೆಯಲ್ಲಿ ಪಳಗಿರುವ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಇದ್ದರೂ, ಅನಿಲ್ ಅಂಬಾನಿ ಮಾಲೀಕತ್ವದ ಅನನುಭವಿ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಜತೆ, ಫ್ರಾನ್ಸ್‌ನ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ದಸಾಲ್ಟ್ ಡಿಫೆನ್ಸ್ ಪಾಲುದಾರಿಕೆ ಹೊಂದಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಈಗ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಒಲಾಂಡ್ ಅವರ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.

ಬೇರೆ ಆಯ್ಕೆ ಇರಲಿಲ್ಲ

ಬೇರೆ ಆಯ್ಕೆ ಇರಲಿಲ್ಲ

ಫ್ರಾನ್ಸ್‌ನ ನಿಯತಕಾಲಿಕೆ ಮೀಡಿಯಾ ಪಾರ್ಟ್‌ಗೆ ನೀಡಿದ ಸಂದರ್ಶನದಲ್ಲಿ ಒಲಾಂಡ್, ರಿಲಯನ್ಸ್‌ ಅನ್ನು ಏಕೆ ಪಾಲುದಾರ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಭಾರತ ಸರ್ಕಾರವೇ ರಿಲಯನ್ಸ್ ಸಂಸ್ಥೆ ಹೆಸರು ಸೂಚಿಸಿತ್ತು. ದಸಾಲ್ಟ್‌ಗೆ ಬೇರೆ ಯಾವುದೇ ಆಯ್ಕೆ ಇಲ್ಲದ ಕಾರಣ ತನಗೆ ನೀಡಿದ ಕಂಪೆನಿಯನ್ನು ಒಪ್ಪಿಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.

ನಾವೇನೂ ಹೇಳುವುದು ಇರಲಿಲ್ಲ

ರಫೇಲ್ ಒಪ್ಪಂದದಲ್ಲಿ ದಸಾಲ್ಟ್ ಡಿಫೆನ್ಸ್ ಕಂಪೆನಿ ಜತೆ ಪಾಲುದಾರಿಕೆ ಹೊಂದುವ ಭಾರತದ ಕಂಪೆನಿಯ ಹೆಸರನ್ನು ಭಾರತ ಸರ್ಕಾರವೇ ಪ್ರಸ್ತಾಪಿಸಿತು. ಬಳಿಕ ದಸಾಲ್ಟ್ ಅಂಬಾನಿ ಅವರೊಂದಿಗೆ ವ್ಯವಹಾರ ನಡೆಸಿಕೊಂಡಿತು. ಇದರಲ್ಲಿ ನಾವು ಹೇಳುವುದು ಏನೂ ಇಲ್ಲ ಎಂದು ಹೇಳಿದ್ದಾರೆ.

ನಿರಾಕರಿಸಿದ ರಕ್ಷಣಾ ಸಚಿವಾಲಯ

ಈ ಆರೋಪವನ್ನು ರಕ್ಷಣಾ ಇಲಾಖೆ ನಿರಾಕರಿಸಿದೆ. ರಫೇಲ್ ಯುದ್ಧ ವಿಮಾನ ತಯಾರಿಯಲ್ಲಿ ಫ್ರಾನ್ಸ್‌ನ ದಸಾಲ್ಟ್ ಏವಿಯೇಷನ್ ಜತೆ ಸಹಭಾಗಿತ್ವ ಹೊಂದಲು ಅನಿಲ್ ಅಂಬಾನಿ ಕಂಪೆನಿಗೆ ಅನುಮೋದನೆ ನೀಡುವಂತೆ ಭಾರತ ಸರ್ಕಾರ ಒತ್ತಾಯಿಸಿತ್ತು ಎಂಬ ಫ್ರಾನ್ಸ್ ಮಾಜಿ ಅಧ್ಯಕ್ಷ ಒಲಾಂಡ್ ಅವರ ಹೇಳಿಕೆಯನ್ನು ಒಳಗೊಂಡ ವರದಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ.

ವಾಣಿಜ್ಯಾತ್ಮಕ ನಿರ್ಧಾರ ತೆಗೆದುಕೊಂಡಿಲ್ಲ

ವಾಣಿಜ್ಯಾತ್ಮಕ ನಿರ್ಧಾರ ತೆಗೆದುಕೊಂಡಿಲ್ಲ

ಸಂದರ್ಶನಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿರುವ ರಕ್ಷಣಾ ಸಚಿವಾಲಯದ ವಕ್ತಾರರು, ಭಾರತ ಸರ್ಕಾರವಾಗಲೀ, ಪ್ರಾನ್ಸ್ ಸರ್ಕಾರವಾಗಲೀ ಈ ಬಗ್ಗೆ ಯಾವುದೇ ವಾಣಿಜ್ಯಾತ್ಮಕ ನಿರ್ಧಾರ ತೆಗೆದುಕೊಂಡಿರಲಿಲ್ಲ ಎಂಬುದನ್ನು ಪುನರುಚ್ಚರಿಸಿದ್ದಾರೆ.

ರಫೇಲ್ ತಯಾರಕ ಸಂಸ್ಥೆ ದಸಾಲ್ಟ್ ತಾನೇ ಅನಿಲ್ ಅಂಬಾನಿ ಸಮೂಹವನ್ನು ಆಯ್ದುಕೊಂಡಿತ್ತು. ಈ ಪ್ರಕ್ರಿಯೆಯಲ್ಲಿ ಸರ್ಕಾರದ ಯಾವ ಪಾತ್ರವೂ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.

ವಿಮಾನಯಾನ ತಯಾರಿಕೆಯಲ್ಲಿ ಯಾವುದೇ ಅನುಭವ ಇಲ್ಲದಿದ್ದರೂ, ರಿಲಯನ್ಸ್ ಡಿಫೆನ್ಸ್ ಸಮೂಹಕ್ಕೆ ಭಾರಿ ಲಾಭ ಮಾಡಿಕೊಡುವ ಹುನ್ನಾರ ನಡೆದಿತ್ತು ಎಂದು ವಿರೋಧಪಕ್ಷಗಳು ಆರೋಪಿಸಿದ ಬೆನ್ನಲ್ಲೇ ಈ ವರದಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+