Punjab News: ಕಾಣೆಯಾದ 3 ಸಹೋದರಿಯರ ಮೃತದೇಹ ಮನೆಯ ಟ್ರಂಕ್‌ನಲ್ಲಿ ಪತ್ತೆ!
ಚಂಡೀಗಢ ಅಕ್ಟೋಬರ್ 2: ಕಾಣೆಯಾದ 3 ಸಹೋದರಿಯರ ಮೃತದೇಹಗಳು ಭಯಾನಕ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪಂಜಾಬ್‌ನ ಜಲಂಧರ್ ಜಿಲ್ಲೆಯ ಕಾನ್ಪುರ ಗ್ರಾಮದಲ್ಲಿ ನಡೆದಿದೆ. ಮೂವರು ಸಹೋದರಿಯರು ತಮ್ಮ ಮನೆಯಲ್ಲಿ ಟ್ರಂಕ್‌ನೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮೂವರು ಹುಡುಗಿಯರು ಭಾನುವಾರ ರಾತ್ರಿ ಕೆಲಸದಿಂದ ಹಿಂದಿರುಗಿದ ನಂತರ ಮನೆಯಲ್ಲಿ ಕಾಣದಿದ್ದಾಗ ಅವರ ಪೋಷಕರು ಮಕ್ಸೂದನ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು.

ದೂರು ನೀಡಿದ ವಲಸೆ ಕಾರ್ಮಿಕರನಿಗೆ ಐದು ಮಕ್ಕಳಿದ್ದರು. ಇವರಲ್ಲಿ ಮೂವರು ಸಹೋದರಿಯರು ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಹೋದರಿಯರನ್ನು 4 ವರ್ಷದ ಕಾಂಚನ್, 7 ವರ್ಷದ ಶಕ್ತಿ ಮತ್ತು 9 ವರ್ಷದ ಅಮೃತಾ ಎಂದು ಗುರುತಿಸಲಾಗಿದೆ. ಸಾವಿನ ಕಾರಣವನ್ನು ತಿಳಿಯಲು ಎಲ್ಲಾ ಮೂರು ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಬಾಲಕಿಯರ ತಂದೆ ಸೋಮವಾರ ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದಾಗ ಟ್ರಂಕ್ ಮಾಮೂಲಿಗಿಂತ ಭಾರವಾಗಿರುವುದನ್ನು ಕಂಡು ಈ ವಿಷಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಂಕ್ ತೆರೆದಾಗ ಒಳಗೆ ತನ್ನ ಮೂವರು ಹೆಣ್ಣು ಮಕ್ಕಳ ಶವವನ್ನು ಅವರು ಕಂಡಿದ್ದಾರೆ.












Click it and Unblock the Notifications