ಪಂಜಾಬ್: ಬಟಿಂಡಾ ಸೇನಾ ಆವರಣದಲ್ಲಿ ಗುಂಡಿನ ದಾಳಿ, ನಾಲ್ವರು ಬಲಿ
ಅಮೃತಸರ, ಏಪ್ರಿಲ್ 12: ಬುಧವಾರ ಬೆಳಗ್ಗೆ ಪಂಜಾಬ್‌ನ ಬಟಿಂಡಾ ಮಿಲಿಟರಿ ಆವರಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
ಸೇನೆಯ ಸೌತ್ ವೆಸ್ಟರ್ನ್ ಕಮಾಂಡ್‌ನ ಹೇಳಿಕೆಯ ಪ್ರಕಾರ, ಬಟಿಂಡಾ ಮಿಲಿಟರಿ ಸ್ಟೇಷನ್‌ನಲ್ಲಿ ಬೆಳಿಗ್ಗೆ 4.35 ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿಸಲಾಗಿದೆ. ಘಟನೆಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಸ್ಟೇಷನ್ ಕ್ವಿಕ್ ರಿಯಾಕ್ಷನ್ ತಂಡಗಳನ್ನು ಸಕ್ರಿಯಗೊಳಿಸಲಾಗಿದೆ ಮತ್ತು ಪ್ರದೇಶವನ್ನು ಸುತ್ತುವರಿದ ಮತ್ತು ಸೀಲ್ ಮಾಡಲಾಗಿದೆ. ಹುಡುಕಾಟ ಕಾರ್ಯಾಚರಣೆ ಪ್ರಗತಿಯಲ್ಲಿದೆ" ಎಂದು ಹೆಚ್‌ಕ್ಯು ಎಸ್‌ಡಬ್ಲ್ಯೂ ಕಮಾಂಡ್ ಮಾಹಿತಿ ನೀಡಿದೆ.

ಬಟಿಂಡಾದ ಹಿರಿಯ ಪೊಲೀಸ್ ಅಧೀಕ್ಷಕ ಜಿಎಸ್ ಖುರಾನಾ ಅವರು ಎನ್‌ಡಿಟಿವಿಗೆ ಮಾಹಿತಿ ನೀಡಿ ಪೊಲೀಸ್ ತಂಡವು ಸೇನಾ ಠಾಣೆಯ ಹೊರಗೆ ಕಾಯುತ್ತಿದೆ ಮತ್ತು ಸೇನೆಯು ಅವರ ಪ್ರವೇಶವನ್ನು ಇನ್ನೂ ತೆರವುಗೊಳಿಸಿಲ್ಲ. ಕಂಟೋನ್ಮೆಂಟ್‌ನ ಎಲ್ಲಾ ನಾಲ್ಕು ಗೇಟ್‌ಗಳನ್ನು ಮುಚ್ಚಲಾಗಿದೆ ಎಂದು ಹೇಳಿದ್ದಾರೆ
ಬಟಿಂಡಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಗುಲ್ನೀತ್ ಸಿಂಗ್ ಖುರಾನಾ "ಏನೋ" ಸಂಭವಿಸಿದೆ. ಆದರೆ ಸೇನೆಯು ವಿವರಗಳನ್ನು ಹಂಚಿಕೊಂಡಿಲ್ಲ . ಸೇನೆಯಿಂದ ಆಂತರಿಕ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಇದು ಭಯೋತ್ಪಾದಕ ದಾಳಿಯಲ್ಲ ಮತ್ತು ಸೇನಾ ಠಾಣೆಯ ಆಂತರಿಕ ಬೆಳವಣಿಗೆಯಂತೆ ತೋರುತ್ತಿದೆ ಎಂದು ಎಸ್‌ಎಸ್‌ಪಿ ಖುರಾನಾ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಠಾಣಾದಲ್ಲಿರುವ ಫಿರಂಗಿ ಘಟಕದಿಂದ ಕೆಲವು ಶಸ್ತ್ರಾಸ್ತ್ರಗಳು ನಾಪತ್ತೆಯಾಗಿದ್ದವು ಎಂದು ಮೂಲಗಳು ತಿಳಿಸಿವೆ. ಈ ಕಾಣೆಯಾದ ಶಸ್ತ್ರಾಸ್ತ್ರಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications