ಸ್ಪಷ್ಟ ಬಹುಮತದತ್ತ ಕಾಂಗ್ರೆಸ್, ಚಂಡೀಗಢದಲ್ಲಿ ಸಂಭ್ರಮಾಚರಣೆ
ಪಂಜಾಬ್, ಮಾರ್ಚ್. 11 : ಪಂಜಾಬ್ ನಲ್ಲಿ 60 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಸ್ಪಷ್ಟ ಬಹುಮತದತ್ತ ಮುನ್ನುಗ್ಗುತ್ತಿರು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮದ ಮನೆ ಮಾಡಿದೆ.
ಒಟ್ಟು 117 ಸ್ಥಾನಗಳ ಪೈಕಿ ಸರ್ಕಾರ ರಚನೆಗೆ 59 ಸ್ಥಾನಗಳು ಅವಶ್ಯವಿದೆ. ಕಾಂಗ್ರೆಸ್ ಈಗಾಗಲೇ 60 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಯಾರ ಬೆಂಬಲವಿಲ್ಲದೆ ಏಕಾಂಗಿಯಾಗಿ ಸರ್ಕಾರ ರಚಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಇದರಿಂದ ಚಂಡೀಗಢದಲ್ಲಿ ಕಾರ್ಯಕರ್ತರು ಡೋಲು,ಡಮಾರು ಬಾರಿಸಿ ಸಂಭ್ರಮಾಚರಣೆ ಆಚರಿಸುತ್ತಿದ್ದಾರೆ.[ಪಂಜಾಬ್: ಹುಟ್ಟುಹಬ್ಬದಿನದಂದೇ ಅಮರಿಂದರ್ ಸಿಂಗ್ ಗೆ ಗೆಲುವಿನ ಗಿಫ್ಟ್]

ಅಕಾಲಿದಳ-ಬಿಜೆಪಿ 26, ಆಪ್ 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಇನ್ನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಾರೆ.
Congress leading in Punjab: Party workers celebrate in Chandigarh #ElectionResults pic.twitter.com/n7XFz6U5KM
— ANI (@ANI_news) March 11, 2017
ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ಸರ್ಕಾರ ರಚಿಸಲು ಎಷ್ಟರ ಮಟ್ಟಿಗೆ ಅವಕಾಶಗಳಿವೆಯೋ, ಅಷ್ಟೇ ಅವಕಾಶಗಳು ಆಮ್ ಆದ್ಮಿ ಪಾರ್ಟಿಗೂ ಇದೆ ಎಂದು ಸಮೀಕ್ಷೆಗಳು ಹೇಳಿವೆ. ಸಧ್ಯದ ಬೆಳವಣಿಗೆಗಳನ್ನು ನೋಡಿದರೆ ಹೇಳಿರುವ ಸಮೀಕ್ಷೆಗಳು ತೆಲೆಕೆಳಗಾಗುವ ಸಂಭವವಿದೆ.












Click it and Unblock the Notifications