Canva layoffs: ಹೆರಿಗೆ ರಜೆಯಲ್ಲಿದ್ದಾಗಲೇ ಕೆಲಸ ಕಳೆದುಕೊಂಡ ಮಹಿಳೆ, ಎಕ್ಸಿಟ್ ಪ್ಯಾಕೇಜ್ ಬಗ್ಗೆ ಹೇಳಿದ್ದೇನು?

ಉದ್ಯೋಗ ಕಡಿತ ಅಥವಾ ಲೇಆಫ್‌ಗೆ ಆದಾಗ ಯಾವುದೇ ಉದ್ಯೋಗಿಗೇ ಆದ್ರೂ ಕೂಡ ಸಹಜವಾಗಿ ಆಘಾತ ಆಗುತ್ತದೆ. ಅದರಲ್ಲೂ ಹೆರಿಗೆ ರಜೆಯಲ್ಲಿದ್ದಾಗ ಕೆಲಸ ಹೋದರೆ ಆ ಆಘಾತ ತಡೆದುಕೊಳ್ಳುವುದು ತುಂಬ ಕಷ್ಟ. ಇತ್ತೀಚೆಗೆ ಆಸ್ಟ್ರೇಲಿಯಾ ಮೂಲದ ಜನಪ್ರಿಯ ಗ್ರಾಫಿಕ್ ಡಿಸೈನ್ ಪ್ಲಾಟ್‌ಫಾರ್ಮ್ ಕ್ಯಾನ್ವಾ ತನ್ನ ಶೇ. 22ರಷ್ಟು ಉದ್ಯೋಗಿಗಳನ್ನ ಅಂದರೆ ಅಂದಾಜು 1,271 ನೌಕರರನ್ನಾ ಕೆಲಸದಿಂದ ವಜಾಗೊಳಿಸಿದೆ.

ಈ ಲೇಆಫ್‌ ಪಟ್ಟಿಯಲ್ಲಿ ಪುಣೆ ಮೂಲದ ಶ್ರದ್ಧಾ ಖುಲೆ ಕೂಡ ಸೇರಿದ್ದರು. ವಿಪರ್ಯಾಸವೆಂದರೆ ಹೆರಿಗೆ ರಜೆಯಲ್ಲಿದ್ದಾಗಲೇ ಅವರು ತಮ್ಮ ಕೆಲಸ ಕಳೆದುಕೊಂಡಿದ್ದರು. ಆದರೆ, ಲೇಆಫ್ ಮಾಡಿದ್ದರೂ ಕ್ಯಾನ್ವಾ ಒದಗಿಸಿರುವ ಬಂಪರ್ ಎಕ್ಸಿಟ್ ಪ್ಯಾಕೇಜ್‌ ಬಗ್ಗೆ ಅವರು ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Pune Woman Laid Off By Canva During Maternity Leave Shares How Dream Severance Package Helps Her

ಕ್ಯಾನ್ವಾ ನೀಡಿದ ಎಕ್ಸಿಟ್ ಪ್ಯಾಕೇಜ್‌ನಲ್ಲಿ ಏನೇನಿದೆ?

ತಾನು 2023ರಲ್ಲಿ ಕ್ಯಾನ್ವಾ ಸೇರಿದ್ದಾಗಿ ಹೇಳಿಕೊಂಡಿರುವ ಶ್ರದ್ಧಾ ಖುಲೆ, "ಇದು ಕ್ಯಾನ್ವಾ ನಮಗೆ ಸೇವೆರೆನ್ಸ್‌ ಪ್ಯಾಕೇಜ್ ಆಗಿ ನೀಡುತ್ತಿರುವುದು" ಎಂಬ ಶೀರ್ಷಿಕೆಯಡಿ ವಿಡಿಯೋ ಹಂಚಿಕೊಂಡಿದ್ದಾರೆ.

ಕ್ಯಾನ್ವಾ ಹೇಳಿದಂತೆ ಎಲ್ಲವನ್ನೂ ನೀಡುತ್ತಿದೆಯೇ? ಎಂಬ ಪ್ರಶ್ನೆಗೆ, ಹೌದು ನೀಡುತ್ತಿದೆ ಎಂದು ಅವರು ಉತ್ತರಿಸಿದ್ದಾರೆ. ಈ ಎಕ್ಸಿಟ್ ಪ್ಯಾಕೇಜ್‌ನಡಿ ವಜಾಗೊಂಡ ನೌಕರರು ತಾವು ಬಳಸುತ್ತಿದ್ದ ಕಂಪನಿಯ ಮ್ಯಾಕ್‌ಬುಕ್ ಅನ್ನಾ ತಮ್ಮಲ್ಲೇ ಉಳಿಸಿಕೊಳ್ಳಬಹುದು. ವೈಯಕ್ತಿಕ ಲ್ಯಾಪ್‌ಟಾಪ್ ಇಲ್ಲದವರಿಗೆ ಹೊಸ ಕೆಲಸ ಹುಡುಕಲು ಇದು ಬಹಳ ಸಹಕಾರಿಯಾಗಿದೆ. ಜೊತೆಗೆ, ಒಂದು ವರ್ಷದ ಲಿಂಕ್ಡ್‌ಇನ್ ಪ್ರೀಮಿಯಂ ಚಂದಾದಾರಿಕೆ, ವೈಯಕ್ತಿಕ ತರಬೇತಿ ಮತ್ತು ಸಂದರ್ಶನ ಸಿದ್ಧತೆಗಾಗಿ ವಿಶೇಷ ಕೆರಿಯರ್ ಸಪೋರ್ಟ್ ನೀಡಲಾಗಿದೆ.

ಹೆರಿಗೆ ರಜೆಯಲ್ಲಿದ್ದರೂ ಸಿಕ್ತು 6 ತಿಂಗಳ ಸಂಬಳ

ಶ್ರದ್ಧಾ ಅವರನ್ನ ಅಚ್ಚರಿಗೊಳಿಸಿದ್ದು 6 ತಿಂಗಳ ಮುಂಗಡ ಸಂಬಳದ ಆಫರ್. "ನಾನು ಈಗ ಹೆರಿಗೆ ರಜೆಯಲ್ಲಿದ್ದೇನೆ ಎಂದು ಹೇಳಿದ್ದೆನಲ್ಲವೇ? ಆರಂಭದಲ್ಲಿ ನಾನು ಈ 6 ತಿಂಗಳ ಮುಂಗಡ ವೇತನಕ್ಕೆ ಅರ್ಹಳಲ್ಲ ಎಂದುಕೊಂಡಿದ್ದೆ. ಆದರೆ ಕ್ಯಾನ್ವಾ ನನ್ನನ್ನ ಸಂಪರ್ಕಿಸಿ, ನನಗೂ ಆರು ತಿಂಗಳ ಮುಂಗಡ ಸಂಬಳ ಸಿಗಲಿದೆ ಎಂದು ಖಚಿತಪಡಿಸಿತು" ಎಂದು ಶ್ರದ್ಧಾ ಸಂತಸ ಹಂಚಿಕೊಂಡಿದ್ದಾರೆ.

ಇದಲ್ಲದೆ 12 ತಿಂಗಳ ಆರೋಗ್ಯ ವಿಮೆ ಹಾಗೂ ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ $10,000 ಅನುದಾನವನ್ನೂ ಸಹ ನೀಡಲಾಗಿದೆ. "ಯಾರು ಈ ರೀತಿ ಮಾಡುತ್ತಾರೆ? ನನಗೆ ಗೊತ್ತು ಕೇವಲ ಕ್ಯಾನ್ವಾ ಮಾತ್ರ" ಎಂದು ಅವರು ಕಂಪನಿಯನ್ನ ಕೊಂಡಾಡಿದ್ದಾರೆ.

ಆಘಾತದ ನಡುವೆಯೂ ಕಂಪನಿಯ ಗುಣಗಾನ

ಡ್ರೀಮ್ ಕಂಪನಿಯಾಗಿದ್ದ ಕ್ಯಾನ್ವಾದಲ್ಲಿ ಕೆಲಸ ಕಳೆದುಕೊಂಡಿದ್ದು ತಮಗೆ ದೊಡ್ಡ ಆಘಾತವನ್ನ ತಂದಿದೆ, ಆದರೂ ಕಂಪನಿ ಈ ಇಡೀ ಪ್ರಕ್ರಿಯೆಯನ್ನ ಅತ್ಯಂತ ಮಾನವೀಯತೆಯಿಂದ ನಿರ್ವಹಿಸಿದ ರೀತಿ ಶ್ಲಾಘನೀಯ ಎಂದಿದ್ದಾರೆ.

"ನಾನು ಆಸ್ಟ್ರೇಲಿಯಾದಿಂದ ದೂರವಿದ್ದರೂ ಮತ್ತು ಹೆರಿಗೆ ರಜೆಯಲ್ಲಿದ್ದರೂ ಕ್ಯಾನ್ವಾ ನನಗೆ ಭಾರಿ ಬೆಂಬಲ ನೀಡಿತು. ನನ್ನ ಮ್ಯಾನೇಜರ್ ಅನ್ನಾ ಸಂಪರ್ಕಿಸಿದಾಗ ರಜೆಯನ್ನ ವಿಸ್ತರಿಸಲು ಒಪ್ಪಿಗೆ ನೀಡಿದ್ದರು. ನಿಮಗೆ ಎಂದಾದರೂ ಕ್ಯಾನ್ವಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕರೆ, ದಯವಿಟ್ಟು ಮಾಡಿ. ಇಂತಹ ಅದ್ಭುತ ಕಂಪನಿ ಮತ್ತೆ ಸಿಗುವುದಿಲ್ಲ" ಎಂದು ಶ್ರದ್ಧಾ ಖುಲೆ ಭಾವುಕರಾಗಿದ್ದಾರೆ.

ಇತ್ತೀಚೆಗೆ 2026ರ ಆದಾಯದ ಬೆಳವಣಿಗೆಯ ಅಂದಾಜು ಶೇ. 30 ರಿಂದ 20ಕ್ಕೆ ಕುಸಿದ ಹಿನ್ನೆಲೆಯಲ್ಲಿ ಕ್ಯಾನ್ವಾ ಈ ಲೇಆಫ್ ಮಾಡುವ ನಿರ್ಧಾರ ಮಾಡಿತ್ತು. ಸಂಸ್ಥೆಯ ಸಿಇಒ ಮೆಲಾನಿ ಪರ್ಕಿನ್ಸ್ ಇದು ಕಂಪನಿಯ 13 ವರ್ಷಗಳ ಇತಿಹಾಸದಲ್ಲೇ ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರ ಎಂದು ಭಾವುಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+