ಪುಲ್ವಾಮಾ ದಾಳಿ ಸಣ್ಣದಂತೆ! ದೊಡ್ಡ ದಾಳಿಗೆ ಸಜ್ಜಾಗಿದೆ ರಕ್ಕಸರ ಗುಂಪು

ನವದೆಹಲಿ, ಮಾರ್ಚ್‌ 12: ಪುಲ್ವಾಮಾದಲ್ಲಿ ಬಾಂಬ್ ದಾಳಿ ನಡೆಸಿ 49 ಯೋಧರನ್ನು ಕೊಂದ ರಕ್ಕಸರ ಗುಂಪು ಜೈಶೆ-ಎ-ಮೊಹಮ್ಮದ್ ಈಗ ಇನ್ನೂ ದೊಡ್ಡ ಮಟ್ಟದ ದಾಳಿಗೆ ನೀಲಿನಕ್ಷೆ ತಯಾರಿಸುತ್ತಿದೆ.

ಗುಪ್ತಚರ ಇಲಾಖೆಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಗುಪ್ತ ಭಾಷೆಯಲ್ಲಿ ಪುಲ್ವಾಮಾ ದಾಳಿ ಹಾಗೂ ಮುಂದೆ ಮಾಡಬೇಕಾದ ದಾಳಿಯ ಬಗ್ಗೆ ಸಂದೇಶಗಳನ್ನು ಜೈಶೆಗೆ ಸಂಬಂಧಿಸಿದ ಕೆಲವರು ಹಂಚಿಕೊಂಡಿರುವುದನ್ನು ಗುಪ್ತಚರ ಇಲಾಖೆ ಪತ್ತೆ ಮಾಡಿದೆ.

ಪುಲ್ವಾಮಾ ದಾಳಿಯು ಕೇವಲ ಆಟಿಕೆಗಳಿಂದ ಮಾಡಿದ್ದು, ಈ ಬಾರಿ ಅದಕ್ಕಿಂತಲೂ ದೊಡ್ಡದಾದ ಕನಿಷ್ಟ 500 ಕೆ.ಜಿ. ಸ್ಪೋಟಕಗಳನ್ನು ಸ್ಫೋಟಿಸಬೇಕು ಎಂದು ಜೈಶೆ-ಇ-ಮೊಹಮ್ಮದ್ ಉಗ್ರರು ಮಾತನಾಡಿಕೊಂಡಿರುವುದು ಗುಪ್ತ ಸಂದೇಶಗಳನ್ನು ಒಡೆದಾಗ ಗೊತ್ತಾಗಿದೆ.

Pulwama attack done with a toy, now brace for more warns Jaish-e-Mohammad

ಪುಲ್ವಾಮಾದಲ್ಲಿ ಬಳಸಿದ ಸ್ಪೋಟಕಕ್ಕಿಂತ ಹೆಚ್ಚು ಮತ್ತು ಸುಧಾರಿತ ಸ್ಫೋಟಕಗಳನ್ನು ಬಳಸಿ ಭಾರಿ ಭಯೋತ್ಪಾದಕ ದಾಳಿಯನ್ನು ನಡೆಸಲು ಜೈಶೆ-ಎ-ಮೊಹಮ್ಮದ್ ಸಜ್ಜಾಗಿದೆ.

ಪುಲ್ವಾಮಾ ಮಾದರಿಯಲ್ಲಿಯೇ ವಾಹನಗಳನ್ನು ಬಳಸಿ ಗುರಿಗೆ ಗುದ್ದಿಸಿ ಸ್ಪೋಟ ಉಂಟಾಗುವಂತೆ ಮಾಡಿ ಕೊಲ್ಲುವುದು ರಕ್ಕಸ ಗುಂಪಿನ ಉದ್ದೇಶ. ಗುಪ್ತ ಚರ ಇಲಾಖೆಯು ಎಲ್ಲ ಇಲಾಖೆಗೂ ಎಚ್ಚರಿಕೆ ನೀಡಿದ್ದು, ಭದ್ರತೆ ಹೆಚ್ಚು ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+