ಪುದುಚೇರಿ: ರಾಜ್ಯದ ಸ್ಥಾನಮಾನ vs ಉದ್ಯೋಗ ಸೃಷ್ಟಿಯ ಭರವಸೆ, ಬಿಜೆಪಿಗೆ ಬಹುಮತ-ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನ
ವಿಧಾನಸಭಾ ಚುನಾವಣೆ ನಡೆದ ಪಂಚ ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಸೀಟುಗಳನ್ನು ಹೊಂದಿರುವ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ ಬಿಡುಗಡೆ ಆಗಿದೆ. 'ಪೀಪಲ್ಸ್ ಪಲ್ಸ್' ಸೇರಿದಂತೆ ವಿವಿಧ ಸುದ್ದಿ ಸಂಸ್ಥೆ, ಏಜೆನ್ಸಿಗಳು ಮತಗಟ್ಟೆ ಫಲಿತಾಂಶ ನೀಡಿವೆ. ಇದರಲ್ಲಿ ಬಿಜೆಪಿಗೆ ಸರಳ ಬಹುಮತ ಸಿಗುವ ವಿಶ್ವಾಸವಿದೆ. ಕಾಂಗ್ರೆಸ್ ನಂತರದ ಸ್ಥಾನದಲ್ಲಿದೆ ಎಂದು ಭವಿಷ್ಯ ನುಡಿದಿವೆ.
ಪುದುಚೇರಿಯಲ್ಲಿ ಒಟ್ಟು 30 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಇಲ್ಲಿ ಗೆಲ್ಲಲು ಒಟ್ಟು 16 ಸ್ಥಾನಗಳನ್ನು ಗೆಲ್ಲಬೇಕು. 2026ರ 'ಪೀಪಲ್ಸ್ ಪಲ್ಸ್' ಪುದುಚೇರಿ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯು 16-19 ಸ್ಥಾನಗಳಲ್ಲಿ ಗೆಲಲ್ಲಿದೆ. ಜನರ ಬಿಜೆಪಿಗೆ ಆಶೀರ್ವದಿಸಲಿದ್ದಾರೆ. ನಂತರ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷವು 10-12 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ. ಇತರ ಪಕ್ಷಗಳು ಒಂದರಿಂದ ಎರಡು ಸ್ಥಾನಗಳಲ್ಲಿ ಗೆಲ್ಲಲಿವೆ ಎಂಬ ಮುನ್ಸೂಚನೆ ಸಿಕ್ಕಿದೆ.

ಪುದುಚೇರಿಯಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ಕಾಂಗ್ರೆಸ್ ಪ್ರಬಲ ಪ್ರತಿಪಕ್ಷವಾಗಬಹುದು. ಕಾಂಗ್ರೆಸ್ ಪ್ರತಿ ಬಾರಿಗಿಂತ ಈ ಸಲ ಸೀಟುಗಳ ಗೆಲುವಿನಲ್ಲಿ ಕೊಂಚ ಸುಧಾರಿಸಿದೆ. ಆದರೆ ಅಧಿಕಾರ ಹಿಡಿಯುವಷ್ಟು ಬಲವನ್ನು ಮತದಾರರು ನೀಡಿಲ್ಲ ಎಂಬುದನ್ನು ಗಮನಿಸಬೇಕಾದ ವಿಷಯ. ಪುದುಚೇರಿಯಲ್ಲಿಯೂ ತೊಡೆ ತಟ್ಟಿದ್ದ ನಟ ವಿಜಯ್ ಅವರ ಟಿವಿಕೆ ಪಕ್ಷ ಖಾತೆ ತೆರೆಯುವ ಬಗ್ಗೆ ನಿಖರ ಮಾಹಿತಿ ನೀಡಿಲ್ಲ.
ಬಿಜೆಪಿಗೆ ಪುದುಚೇರಿ ಅಧಿಕಾರ: ಆಕ್ಸಿಸ್ ಮೈ ಇಂಡಿಯಾ
ಪುದುಚೇರಿ ಮತಗಟ್ಟೆ ಸಮೀಕ್ಷೆ ಪ್ರಕಟಿಸಿರುವ 'ಆಕ್ಸಿಸ್ ಮೈ ಇಂಡಿಯಾ' ಪ್ರಕಾರ, ಎನ್‌ಡಿಗೆ (ಬಿಜೆಪಿ) 16-20 ಸ್ಥಾನ ಪಡೆದು ಮುನ್ನಡೆ ಸಾಧಿಸಲಿದೆ. ಕೇವಲ 6-8 ಸ್ಥಾನಗಳಲ್ಲಿ ಕಾಂಗ್ರೆಸ್, ಟಿವಿಕೆ 2-4 ಸ್ಥಾನಗಳಲ್ಲಿ ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದೆ.
ಇನ್ನೂ 'ಪ್ರಜಾ ಪೋಲ್' ಪುದುಚೇರಿ ಮತಗಟ್ಟೆ ಸಮೀಕ್ಷೆ ಪ್ರಕಾರ, ಎನ್‌ಡಿಗೆ 19-25 ಸೀಟುಗಳಲ್ಲಿ ಅಧಿಕಾರ ಹಿಡಿದು ಸ್ವತಂತ್ರವಾಗಿ ರಾಜ್ಯದಲ್ಲಿ ಅಧಿಕಾರ ಗದ್ದುಗೆ ಏರಲಿದೆ. ಕಾಂಗ್ರೆಸ್‌ಗೆ ಕೇವಲ 6-8 ಸೀಟು ಸಿಗಬಹುದು ಎಂದು ತಿಳಿಸಿದೆ.
ಬಿಜೆಪಿಗೆ ಮುನ್ನಡೆ, ಖಾತೆ ತೆರೆಯಲಿದೆ ಟಿವಿಕೆ
'ಪೋಲ್ ಆಫ್ ಪೋಲ್ಸ್' ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಎನ್‌ಡಿಎ 17-21 ಕ್ಷೇತ್ರ, ಕಾಂಗ್ರೆಸ್ 7-9 ಕ್ಷೇತ್ರಗಳಲ್ಲಿ ಗೆಲ್ಲಬಹುದು. ಮತ್ತೆ ಬಿಜೆಪಿ ಪರ ಅಲೆ ಕಂಡು ಬಂದಿದ್ದು, ಪುದುಚೇರಿ ಅಧಿಕಾರವನ್ನು ಜನರು ಬಿಜೆಪಿಗೆ ನೀಡಲು ಮನಸ್ಸು ಮಾಡಿದ್ದಾರೆ. ಕಾಂಗ್ರೆಸ್ ವಿಪಕ್ಷ ಸ್ಥಾನಕ್ಕೆ ಸಿಮೀತವಾಗಿದೆ. ಟಿವಿಕೆ ಪಕ್ಷ 2-4 ಸ್ಥಾನ ಗಳಿಸಬಹುದು. ಈ ಮೂಲಕ ನಟ ವಿಜಯ್ ಅವರು ತಮ್ಮ ಖಾತೆ ತೆರೆಯಲಿದ್ದಾರೆ ಎಂದು ಫಲಿತಾಂಶ ತಿಳಿಸಿದೆ.













Click it and Unblock the Notifications