• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬುಧವಾರ ಬ್ಯಾಂಕ್ ಮುಷ್ಕರ, ವಹಿವಾಟು ಸ್ಥಗಿತ

|

ನವದೆಹಲಿ, ನ.11 : ಬ್ಯಾಂಕ್‌ನಲ್ಲಿ ಕೆಲಸಗಳಿದ್ದರೆ ಮಂಗಳವಾರವೇ ಮುಗಿಸಿಕೊಂಡು ಬಿಡಿ. ನ.12ರ ಬುಧವಾರ ವೇತನ ಪರಿಷ್ಕರಣೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರ್ವಜನಿಕ ವಲಯದ ಬ್ಯಾಂಕ್‌ ಉದ್ಯೋಗಿಗಳು ಒಂದು ದಿನದ ಮುಷ್ಕರ ನಡೆಸಲಿದ್ದಾರೆ.

ಬುಧವಾರ ಸಾರ್ವಜನಿಕ ವಲಯದ ಬ್ಯಾಂಕ್‌ ಉದ್ಯೋಗಿಗಳು ಒಂದು ದಿನದ ಮುಷ್ಕರ ನಡೆಸಲಿದ್ದಾರೆ. ಆದ್ದರಿಂದ ನ.12ರ ಬುಧವಾರ ದೇಶಾದ್ಯಂತ ಬ್ಯಾಂಕ್ ಸೇವೆ ಸ್ಥಗಿತಗೊಳ್ಳಲಿದೆ. ಮಷ್ಕರ ನಿರತರೊಂದಿಗೆ ಸೋಮವಾರ ನಡೆದ ಸಂಧಾನ ಸಭೆಯೂ ವಿಫಲಗೊಂಡಿದೆ.

ವೇತನ ಪರಿಷ್ಕರಣೆಕ್ಕೆ ಸಂಬಂಧಿಸಿದಂತೆ ಸೋಮವಾರ ಬ್ಯಾಂಕ್ ನೌಕರರ ಒಕ್ಕೂಟಗಳೊಂದಿಗೆ ನಡೆಸಿದ ಸಭೆ ವಿಫಲವಾಗಿದೆ. ಶೇ.25ರಷ್ಟು ವೇತನ ಪರಿಷ್ಕರಣೆ ಬದಲು ಶೇ.23ರಷ್ಟು ಪರಿಷ್ಕರಿಸಿ ಎಂದು ನೌಕರರ ಒಕ್ಕೂಟ ಬೇಡಿಕೆ ಇಟ್ಟಿದೆ. [ನ.12ರಂದು ಬ್ಯಾಂಕ್ ಮುಷ್ಕರ]

ಆದರೆ, ಸರ್ಕಾರಿ ಅಧೀನದ ಭಾರತೀಯ ಬ್ಯಾಂಕ್‌ ಸಂಘ ಕೇವಲ ಶೇ.11 ವೇತನ ಪರಿಷ್ಕರಣೆ ಮಾಡುವುದಾಗಿ ಹಿಂದಿನ ನಿರ್ಧಾರಕ್ಕೆ ಅಂಟಿಕೊಂಡಿದ್ದು, ಸೋಮವಾರದ ನಡೆದ ಸಂಧಾನ ಸಭೆ ವಿಫಲವಾಗಲು ಕಾರಣವಾಗಿದೆ. ಆದ್ದರಿಂದ ನಿಗದಿಯಂತೆ ಬುಧವಾರ ಮುಷ್ಕರ ನಡೆಯಲಿದೆ.

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಸಂಚಾಲಕ ವಸಂತ ರೈ ಅವರು, ವೇತನ ಪರಿಷ್ಕರಣೆಗೊಳಿಸುವಂತೆ ನಾವು ಹಲವು ಬಾರಿ ಮುಷ್ಕರ ನಡೆಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅನಿವಾರ್ಯವಾಗಿ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಬುಧವಾರ ಮೊದಲ ಹಂತದ ಮುಷ್ಕರ ನಡೆಯಲಿದ್ದು ನಂತರ ಡಿ.2 ರಿಂದ 5ರವರೆಗೆ ವಲಯವಾರು ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Normal banking operations in public sector banks across the country are likely to be hit on Wednesday, November 12 as employees have decided to go on one-day nation-wide strike to press for wage revision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more