ಚಳಿಗಾಲದ ಬೆಳಗು, ಗೋಲ್ಡನ್ ಗ್ಲೋಬ್ ಸುಂದರಿಯರು...

Posted By:
Subscribe to Oneindia Kannada

ಬೆಂಗಳೂರಿನಲ್ಲೇ ಬೆಳ್ ಬೆಳಗ್ಗೆ ಚಳಿ ತಡೆಯುವುದಕ್ಕೆ ಆಗ್ತಿಲ್ಲ. ಇನ್ನು ಊಟಿ, ಅಲ್ಲಲ್ಲ ಮುನ್ನಾರ್..ಅದು ಅಲ್ಲ ಕಣ್ರೀ, ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಹೇಗಿರಬೇಕು ಹೇಳಿ. ಆಸ್ಟ್ರಿಯಾ, ಬರ್ಲಿನ್, ಲಂಡನ್, ಶ್ರೀನಗರ ಹೀಗೆ ನಾನಾ ಕಡೆಯ ಚಳಿಯ ಚಿತ್ರಗಳು ನಿಮ್ಮೆದುರಿಗಿವೆ. ಚಳಿಗಾಲದ ಪ್ರವಾಸೋದ್ಯಮ ಅಂತಲೇ ತುಂಬ ಹೆಸರುವಾಸಿಯಾದ ಸ್ಥಳಗಳೂ ಇವೆ.

ಅಲ್ಲಿಗೆಲ್ಲ ಹೋಗಬೇಕು ಅಂದರೆ ಚಳಿಗಾಲದಲ್ಲಿ ಆಗುವ ಯಾವುದೇ ಸೋಂಕು ಇರಬಾರದು ಅಷ್ಟೇ. ಇನ್ನು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡ ಸುಂದರಿಯರ ಫೋಟೋ ನೋಡಿದಿರಾ, ಅಯ್ಯೋ ಇನ್ನೂ ನೋಡಿಲ್ವಾ? ಹಾಗಿದ್ದರೆ ಇಲ್ಲಿದೆ ಒಮ್ಮೆ ಕಣ್ತುಂಬಿಕೊಂಡು ಬಿಡಿ. ಇನ್ನು ಐಶ್ವರ್ಯಾ ರೈ ಬಚ್ಚನ್ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಿಂಚಿದ್ದಾರೆ.[2016ರಲ್ಲಿ ಗಮನ ಸೆಳೆದ 24 ಚಿತ್ರಗಳು]

ಗೂಗಲ್ ಸಿಇಒ ಸುಂದರ್ ಪಿಚೈ ಮಕ್ಕಳ ಜೊತೆಗೆ ಆರಾಮವಾಗಿ ಕ್ರಿಕೆಟ್ ಆಡಿದ್ದಾರೆ. ಎಲ್ಲೋ ಬೇರೆ ಕಡೆ ಅಲ್ಲ, ನಮ್ಮ ದೇಶದ ಮಿಡ್ನಾಪುರ್ ನಲ್ಲಿ. ಅವರಿಗೆ ಕ್ರಿಕೆಟ್, ಫುಟ್ ಬಾಲ್ ಅಂದರೆ ಬಲೇ ಇಷ್ಟ ಅಂತೆ. ತಮ್ಮ ಕೆಲಸದ ಜತೆಗೆ ಈ ರೀತಿಯ ಎಂಜಾಯ್ ಮೆಂಟ್ ಕೂಡ ನಡೆದಿದೆ. ಹೃತಿಕ್ ರೋಷನ್ ಅವರ ಹೊಸ ಸಿನಿಮಾ ಕಾಬಿಲ್ ನ ಆಡಿಯೋ ಲಾಂಚ್ ನಲ್ಲಿ ಸಕತ್ತಾಗಿ ಮಿಂಚಿದ್ದಾರೆ.

ಇವೆಲ್ಲವೂ ಚಿತ್ರಗಳಾಗಿ ಕಣ್ಣೆದುರಿಗಿದೆ. ಚಿತ್ರ ನೋಡುವಾಗಲೇ ಚಳಿಯಾಗಲಿ, ಮತ್ತೆ ಬೆಚ್ಚಗಾಗಿ...

ಶ್ರೀನಗರದ ಚಳಿಗಾಲದಲ್ಲೊಂದು ಕುರಿಗಾಲ

ಶ್ರೀನಗರದ ಚಳಿಗಾಲದಲ್ಲೊಂದು ಕುರಿಗಾಲ

ಶ್ರೀನಗರದಲ್ಲಿ ಈಗ ಸೊಗಸಾದ ಚಳಿಗಾಲ. ಅದೆಂಥ ಸೊಗಸು ಉಸಿರುಗಟ್ಟಿ ಪ್ರಾಣ ಹೋಗುತ್ತೆ ಅಂತ ನೀವಂದು ಕೊಂಡರೆ, ಅದೂ ಸರಿಯೇನೋ! ಶ್ರೀನಗರದ ಹೊರವಲಯದಲ್ಲಿ ಕುರಿಗಾಹಿಯೊಬ್ಬರು ಕುರಿ ಮರಿಯನ್ನು ಹೊತ್ತುಕೊಂಡು ಹೋಗ್ತಿದ್ದಾರೆ. ಸುತ್ತಲೂ ಮಂಜು ಮುಸುಕಿದ ವಾತಾವರಣ. ಹಾಗೆ ಬೆಚ್ಚಗೊಂದು ಕಾಫಿ...ಅಂತ ನೀವು ಉದ್ಗಾರ ತೆಗೆದರೆ, ಅದೆಲ್ಲಿಂದ ತರಬೇಕು ಹೇಳಿ ಬೆಚ್ಚಗೊಂದು ಕಾಫಿ.

ಹಿಮಪಾತದ ಮಧ್ಯೆ

ಹಿಮಪಾತದ ಮಧ್ಯೆ

ಶ್ರೀನಗರ ಹೊರವಲಯದಲ್ಲಿ ಬೀಳುತ್ತಿದ್ದ ಸಣ್ಣ ಪ್ರಮಾಣದ ಹಿಮಪಾತದಲ್ಲಿ ಮರದ ತುಂಡುಗಳಿಂದ ಮಾಡಿದ ಸೇತುವೆ ಮೇಲೆ ನಡೆದುಹೋಗುತ್ತಿರುವ ವ್ಯಕ್ತಿಯ ಕೈಲೊಂದು ಚೀಲ. ಸುತ್ತಲೂ ಹಿಮ ಹಿಮ ಹಿಮ.

ಬೆಳ್ಳಿ ಮೂಡಲಿ, ಬೆಚ್ಚಗಾಗಲಿ

ಬೆಳ್ಳಿ ಮೂಡಲಿ, ಬೆಚ್ಚಗಾಗಲಿ

ಶ್ರೀನಗರ ಹೊರವಲಯದಲ್ಲಿ ಮಂಜಿನಿಂದ ಪೂರ್ತಿಯಾಗಿ ಆವೃತವಾಗಿರುವ ಮನೆಗಳ ಮಧ್ಯೆ ಕುರಿಗಳನ್ನು ಮೇಯಿಸಿಕೊಂಡು ಹೊರಟಿರುವ ಕುರಿಗಾಹಿಗಳು.

ಐಶ್ವರ್ಯಾ ಲಹರಿ

ಐಶ್ವರ್ಯಾ ಲಹರಿ

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಡು ಬಂದಿದ್ದು ಹೀಗೆ.

ಆಸ್ಟ್ರಿಯಾ ಚಳಿಗಾಲದ ದಿನಗಳು

ಆಸ್ಟ್ರಿಯಾ ಚಳಿಗಾಲದ ದಿನಗಳು

ಆಸ್ಟ್ರಿಯಾ ದೇಶದಲ್ಲೂ ಈಗ ಸಕತ್ ಚಳಿಗಾಲ. ಅಲ್ಲಿ ಕಾರೊಂದು ರಸ್ತೆ ಮೇಲೆ ಹೋದ ನಂತರ ರಸ್ತೆ ಇತ್ತೇ ಎಂದು ಅನುಮಾನ ಪಡುವಂತೆ ಮಂಜು ಮುಸುಕಿದ ಪರಿ ಇದು.

ಮಂಜುಗಡ್ಡೆಯ ಮೇಲೆ ಹಕ್ಕಿಗಳ ನಡಿಗೆ

ಮಂಜುಗಡ್ಡೆಯ ಮೇಲೆ ಹಕ್ಕಿಗಳ ನಡಿಗೆ

ನೈರುತ್ಯ ಲಂಡನ್ ನಲ್ಲಿರುವ ಬುಷಿ ಪಾರ್ಕ್ ನಲ್ಲಿ ನೀರು ಹೆಪ್ಪುಗಟ್ಟಿದ ಜಾಗದ ಮೇಲೆ ಹಕ್ಕಿಗಳ ನಡೆದಾಟ. ದಕ್ಷಿಣ ಇಂಗ್ಲೆಂಡ್ ನ ಬಹು ಭಾಗದಲ್ಲಿ ತಾಪಮಾನ ವಿಪರೀತ ಇಳಿಕೆಯಾಗಿದೆ.

ಬರ್ಲಿನ್ ನಲ್ಲಿ ವಾಯುವಿಹಾರ

ಬರ್ಲಿನ್ ನಲ್ಲಿ ವಾಯುವಿಹಾರ

ಬರ್ಲಿನ್ ನಲ್ಲಿರುವ ರಿಪಬ್ಲಿಕ್ ಸ್ಕ್ವೆರ್ ನಲ್ಲಿ ಚಳಿಗಾಲದ ಬೆಳಗಿನಲ್ಲಿ ವಾಯುವಿಹಾರಕ್ಕೆ ಹೊರಟ ಮಂದಿ ಕ್ಯಾಮೆರಾಮನ್ ಗೆ ಕಂಡುಬಂದಿರುವುದು ಹೀಗೆ.

ಪಿಚೈ ಮತ್ತು ಕ್ರಿಕೆಟ್

ಪಿಚೈ ಮತ್ತು ಕ್ರಿಕೆಟ್

ಪಶ್ಚಿಮ ಮಿಡ್ನಾಪುರ್ ನ ಗೋಕುಲ್ ಪುರ್ ಎಂಬ ಹಳ್ಳಿಯಲ್ಲಿ ಗೂಗಲ್ ನ ಸಿಇಒ ಸುಂದರ್ ಪಿಚೈ ಇಂಟರ್ ನೆಟ್ ಸಾಥಿ ಎಂಬ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಆ ವೇಳೆ ಮಕ್ಕಳ ಜೊತೆಗೆ ಕ್ರಿಕೆಟ್ ಆಡಿದರು.

ಸುಂದರಿಯರು, ಗೋಲ್ಡನ್ ಗ್ಲೋಬ್

ಸುಂದರಿಯರು, ಗೋಲ್ಡನ್ ಗ್ಲೋಬ್

74ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಮ್ಮಿ ಫಾಲನ್ ಅವರು ಮಿಸ್ ಗೋಲ್ಡನ್ ಗ್ಲೋಬ್ಸ್ ಜತೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದು ಹೀಗೆ

ಸಂತೋಷಕ್ಕೆ ಹಾಡೇ ಸಂತೋಷಕ್ಕೆ

ಸಂತೋಷಕ್ಕೆ ಹಾಡೇ ಸಂತೋಷಕ್ಕೆ

ಮುಂಬೈನಲ್ಲಿ ನಡೆದ ಕಾಬಿಲ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ಸಂಭ್ರಮದಲ್ಲಿ ಹೃತಿಕ್ ರೋಶನ್, ಯಾಮಿ ಗೌತಮ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Various national and international photos with a major theme of winter season represnt through PTI photos.
Please Wait while comments are loading...