ರಾಹುಲ್ ಕಡ್ಲೇಕಾಯಿ, ಅಖಿಲೇಶ್ಗೆ ಸೈಕಲ್, ಜಲ್ಲಿಕಟ್ಟಿನ ಗೂಳಿ

Posted By:
Subscribe to Oneindia Kannada

ಪ್ರತಿದಿನವೂ ಜಿಲ್ಲೆ, ರಾಜ್ಯ, ದೇಶ ಅಂತಾರಾಷ್ಟ್ರೀಯವಾಗಿ ಒಂದಿಲ್ಲೊಂದು ಘಟನೆಗಳು ಜರುಗುತ್ತಲೇ ಇರುತ್ತವೆ. ಅಂತಹ ಚಿತ್ರಗಳ ಸಮುಚ್ಚಯ ಇಲ್ಲವೆ. ವಾರದ ಪ್ರಾರಂಭದಲ್ಲಿಯೆ ಶಾರುಕ್ ಖಾನ್ ಮತ್ತು ಕರಣ್ ಜೋಹರ್ ಪುಸ್ತಕವೊಂದನ್ನು ಬಿಡುಗಡೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಉತ್ಸಾಹವನ್ನು ತುಂಬಿ ಮಾತನಾಡಿದ್ದಾರೆ.

ಹೃಷಿಕೇಶಕ್ಕೆ ಬಂದ ರಾಹುಲ್ ಗಾಂಧಿ ಕಡಲೇ ಕಾಯಿಯನ್ನು ತಿಂದ ಅಪರೂಪದ ಕ್ಷಣ ಇಲ್ಲದೆ. ಅಬ್ಬಾ ಅಪ್ಪ-ಮಗನ ಹಾವು ಏಣಿ ಆಟದಲ್ಲಿ ಅಖಿಲೇಶ್ ಯಾದವ್ ಗೆ ಒಲಿದ ಸೈಕಲನ್ನು ಬೆಂಬಲಿಗರು ಎತ್ತು ಕೊಂಡು ಕುಣಿದಾಡುತ್ತಿರುವುದನ್ನು ನೀವು ನೋಡಲೇಬೇಕು.[ಜಲ್ಲಿಕಟ್ಟು ಬೇಡ್ವ, ಮಾಂಸ ಸೇವನೆ ನಿಷೇಧಿಸಿ, ಟ್ವೀಟ್ಸ್]

ಪಿಲಿಪೈನಿನ ಪಿಯಾ ಉಟ್ಜ್ ಬಚ್ ಮಿಸ್ ಯೂನಿವರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ತುಮಿಳುನಾಡಿಲ್ಲಿ ಜಲ್ಲಿಕಟ್ಟಿಗೆ ತಯಾರಾದ ಗೂಳಿ ತನ್ನ ಕೊಂಬನ್ನು ತೋರಿಸಿತ್ತಾ ಹೈಕೋರ್ಟ್ ಆದೇಶ ನೀಡಿದರೂ ನೀವು ನನ್ನನ್ನು ಮಾತ್ರ ಏಕೆ ಬಿಡುತ್ತಿಲ್ಲ ಎಂಬ ಪ್ರಶ್ನೆ ಎತ್ತಿದೆ ಈ ರೀತಿಯ ದೇಶಿ-ವಿದೇಶಿ ಕೆಲವು ಚಿತ್ರಗಳು ಇಲ್ಲವೆ.

ಕರಣ್ ಜೋಹರ್ ಪುಸ್ತಕ ಬಿಡುಗಡೆ

ಕರಣ್ ಜೋಹರ್ ಪುಸ್ತಕ ಬಿಡುಗಡೆ

ಮುಂಬೈನಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಮತ್ತು ಚಿತ್ರ ನಿರ್ದೇಶಕ ಕರಣ್ ಜೋಹರ್ ಪುಸ್ತಕವನ್ನು ಬಿಡುಗಡೆ ಗೊಳಿಸಿದರು. ಅದು ಯಾರ ಪುಸ್ತಕವೆಂದರೆ ಕರಣ್ ಜೋಹರ್ ಜೊತೆಯಲ್ಲಿ ಪೂನಮ್ ಸಕ್ಸೇನಾ ಅವರು ಆಡಿರುವು ಮಾತಕತೆಯ ಪುಸ್ತಕ.

ಹಿರಿಯ ಪೊಲೀಸರಿಗೆ ಸಿದ್ದು ಗೌರವ

ಹಿರಿಯ ಪೊಲೀಸರಿಗೆ ಸಿದ್ದು ಗೌರವ

ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳನ್ನು ಗೌರವ ಸೂಚಿಸಿದರು. ಸಮಯೋಚಿತವಾಗಿ ಮಾತನಾಡಿದರು. ಜೊತೆಯಲ್ಲಿ ಗೃಹಸಚಿವರು ಇದ್ದರು.

ನನ್ನ ಬಳಿ ಏನಿದೆ ಎನ್ನುತ್ತಿರುವ ಯೂನಿಯನ್ ರೈಲ್ವೆ ಸಚಿವ

ನನ್ನ ಬಳಿ ಏನಿದೆ ಎನ್ನುತ್ತಿರುವ ಯೂನಿಯನ್ ರೈಲ್ವೆ ಸಚಿವ

ಬೆಂಗಳೂರಿನಲ್ಲಿ ಯೂನಿಯನ್ ರೈಲ್ವೆ ಮಿನಿಸ್ಟ್ರರ್ ಸುರೇಶ್ ಪ್ರಭಾಕರ್ ಪ್ರಭು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಕೋಚಸ್ ಗಳಿಗೆ ಶಂಕುಸ್ಥಾಪನೆ ಮಾಡಿದರು. ನಂತರ ಪರಸ್ಪರ ಸಂಭಾಷಣೆ ನಡೆಸುತ್ತಿರುವುದು. ಸಿದ್ದರಾಮಯ್ಯ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಿರುವ ಪ್ರಭು ಅವರ ಬಂಗಿ ನನ್ನ ಬಳಿ ಏನಿದೆ? ಎನ್ನುವಂತಿದೆ.

ಕಡ್ಲೇಕಾಯಿಗೆ ಮನಸೋತ ರಾಹುಲ್

ಕಡ್ಲೇಕಾಯಿಗೆ ಮನಸೋತ ರಾಹುಲ್

ಹೃಷಿಕೇಶದಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಏಕೋ ಕಡಲೇ ಕಾಯಿಗೆ ಮನಸೋತು ಅಲ್ಲಿ ವ್ಯಾಪಾರ ಮಾಡುತ್ತಿದ್ದ ಕಡಲೇ ಕಾಯಿ ಮಾರಾಟಗಾರನಿಂದ ಕಡ್ಲೇಕಾಯಿ ಖರಿದಿಸಿದರು. ಜೊತೆಗೆ ಉತ್ತರಾ ಖಂಡದ ಮುಖ್ಯಮಂತ್ರಿ ರಾವತ್ ಸಹ ಇದ್ದರು.

ಅಖಿಲೇಶ್ ಬಣದಿಂದ ಸೈಕಲ್ ಯಾತ್ರೆ

ಅಖಿಲೇಶ್ ಬಣದಿಂದ ಸೈಕಲ್ ಯಾತ್ರೆ

ಅಲಹಾಬಾದ್ ನಲ್ಲಿ ಅಖಿಲೇಶ್ ಯಾದವ್ ಗೆ ಸೈಕಲ್ ಚಿಹ್ನೆ ಸಮಾಜವಾದಿ ಪಕ್ಷದ ಗುರುತಾಗಿಯೇ ಉಳಿದ ಹಿನ್ನೆಲೆ ಅಖಿಲೇಶ್ ಯಾದವ್ ನ ಬೆಂಬಲಿಗರು ಉತ್ಸಾಹ ಯುತವಾಗಿ ಪಕ್ಷ ಚಿಹ್ನೆಯಾದ ಸೈಕಲನ್ನು ಎತ್ತಿಹಿಡಿದು ಸಂತಸ ವ್ಯಕ್ತಪಡಿಸಿದರು.

ಮಿಸ್ ಯೂನಿವರ್ಸ್ ಬಂದ್ರು ದಾರಿ ಬಿಡಿ

ಮಿಸ್ ಯೂನಿವರ್ಸ್ ಬಂದ್ರು ದಾರಿ ಬಿಡಿ

ಮಿಸ್ ಯೂನಿವರ್ಸ್ ಪಿಯಾ ವಟ್ಜ್ ಬಚ್ ಅವರು ಪಿಲಿಪೈನಿನ ದಕ್ಷಿಣ ಮನಿಲ ಪಾಸೇ ನಗರದಲ್ಲಿ ಸಾಮಾನ್ಯ ಔತಣ ಕೂಟದಲ್ಲಿ ಭಾಗವಹಿಸಿದ್ದರು. ಎಂಬತ್ತಾರು ಅಭ್ಯರ್ಥಿಗಳನ್ನೊಳಗೊಂಡ ಮತ್ತೊಂದು ಮಿಸ್ ಯೂನಿವರ್ಸ್ ಸ್ಪರ್ಧೆ ಆರಂಭಗೊಂಡಿದ್ದು ಆ ವೇಳೆಯಲ್ಲಿ ಪಿಯಾ ವಟ್ಜ್ ಬಚ್ ಉಪಸ್ಥಿತಿಯಿದ್ದರು.

ಜಲ್ಲಿಕಟ್ಟಿಗೆ ತಯಾರಾದ ಮದವೇರಿದ ಗೂಳಿ

ಜಲ್ಲಿಕಟ್ಟಿಗೆ ತಯಾರಾದ ಮದವೇರಿದ ಗೂಳಿ

ಮುಂಬೈನ ಅಲಂಗನಲ್ಲೂರಿನಲ್ಲಿ ಸುಪ್ರೀಂ ನಿಷೇಧದ ನಡುವೆಯೂ ಸಾರ್ವಜನಿಕರು ಜಲ್ಲಿಕಟ್ಟನ್ನು ಆಚಸಿದರು. ಜಲ್ಲಿಕಟ್ಟಿಗಾಗಿ ನನ್ನನ್ನು ಏಕೆ ಪೀಡಿಸುತ್ತೀರಾ ಎಂದು ಗೂಳಿ ತನ್ನ ಕೊಂಬನ್ನು ಎತ್ತಿ ತೋರಿಸಿದ್ದು ಹೀಗೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Various special events photos with city, national and international PTI photos.
Please Wait while comments are loading...