ರಾಜೀವ್ ಗಾಂಧಿ ನಿಧನರಾದ ದಿನ ಏನಾಯ್ತು. ಮೋದಿಗೆ ರಮ್ಯಾ ನೀತಿಪಾಠ : ಟ್ವಿಟ್ಟಿಗರ ವ್ಯಂಗ್ಯ

ರಾಜೀವ್ ಗಾಂಧಿ ನಿಧನರಾದ ದಿನ ಏನಾಯ್ತು? ಮೋದಿಗೆ ರಮ್ಯಾ ನೀತಿಪಾಠ

Recommended Video

      ನನಗೆ 8 ವರ್ಷ ವಯಸ್ಸಿನಲ್ಲೆ ಗೊತ್ತಿತ್ತು ಅವರೇನು ಅಂತ..!? | Oneindia Kannada

      ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಬಗ್ಗೆ ನರೇಂದ್ರ ಮೋದಿ ಆಡಿದ ಮಾತು, ವ್ಯಾಪಕ ಚರ್ಚೆ, ಆಕ್ರೋಶಕ್ಕೆ ಗುರಿಯಾಗಿದೆ. ಈ ಬಗ್ಗೆ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಸಾಲುಸಾಲು ಟ್ವೀಟ್ ಮಾಡಿದ್ದಾರೆ.

      ಉತ್ತರಪ್ರದೇಶದ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, 'ನಿಮ್ಮ ತಂದೆಯನ್ನು ಮಿಸ್ಟರ್ ಕ್ಲೀನ್ ಎಂದು ಕರೆಯಲಾಗುತ್ತದೆ, ಆದರೆ ಅವರು ಸತ್ತಿದ್ದು ನಂಬರ್ ಒನ್ ಭ್ರಷ್ಟಾಚಾರಿಯಾಗಿ' ಎಂದು ರಾಹುಲ್ ವಿರುದ್ದ ಕಿಡಿಕಾರಿದ್ದರು.

      ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 'ಮೋದಿಯವರೇ ಯುದ್ದ ಮುಗಿದಿದೆ, ನಿಮ್ಮ ಕರ್ಮ ನಿಮಗೆ ಕಾಯುತ್ತಿದೆ' ಎಂದು ರಾಹುಲ್ ಗಾಂಧಿ, ಮೋದಿಯವರಿಗೆ ತಿರುಗೇಟು ನೀಡಿದ್ದಾರೆ.

      ಪ್ರಧಾನಿಯ ಹೇಳಿಕೆಯ ಬಗ್ಗೆ ರಮ್ಯಾ ಟ್ವಿಟ್ಟರ್ ಮೂಲಕ ಟೀಕಿಸಿದ್ದು, ಕರುಣೆ ಎನ್ನುವುದನ್ನು ರಾಜೀವ್ ಗಾಂಧಿಯವರಿಂದ ಕಲಿಯಿರಿ ಎಂದು ಟ್ವೀಟ್ ಮಾಡಿದ್ದಾರೆ. ರಮ್ಯಾ ಮಾಡಿರುವ ಟ್ವೀಟ್, ಮುಂದೆ ಓದಿ..

      ರಾಜೀವ್ ಗಾಂಧಿ ಬಗ್ಗೆ ಮೋದಿಗೆ ರಮ್ಯಾ ಟಾಂಗ್

      ತಮ್ಮ ಮೊದಲ ಟ್ವೀಟ್ ನಲ್ಲಿ ರಮ್ಯಾ, ' ರಾಜೀವ್ ಗಾಂಧಿಯವರು ಎಲ್ಲರೂ ಗೌರವಿಸುವ ಮತ್ತು ಇಷ್ಟಪಡುವ ವ್ಯಕ್ತಿತ್ವದವರು, ನಿಮ್ಮನ್ನೂ ಎಲ್ಲರೂ ಅದೇ ರೀತಿಯಿಂದ ನೋಡಲಿ ಮೋದಿಜೀ.. ನೀವು ರಾಜೀವ್ ಗಾಂಧಿಯವರ ವ್ಯಕ್ತಿತ್ವದಿಂದ ಏನಾದರೂ ಕಲಿಯಬಹುದು.. ಬಹುಷಃ ಕರುಣೆ' ಎಂದು ರಮ್ಯಾ ಟ್ವೀಟ್ ಮಾಡಿದ್ದರು.

      ರಾಜೀವ್ ಗಾಂಧಿ ನಿಧನರಾದ ಸುದ್ದಿಬಂತು

      ರಾಜೀವ್ ಗಾಂಧಿ ನಿಧನರಾದ ಸುದ್ದಿಬಂತು

      'ನಾನು ಎಂಟು ವರ್ಷವಳಾಗಿದ್ದಾಗ ಬಸ್ ನಲ್ಲಿ ಪ್ರಯಾಣಿಸುತ್ತಿದ್ದೆ, ಆಗ ರಾಜೀವ್ ಗಾಂಧಿ ನಿಧನರಾದ ಸುದ್ದಿಬಂತು. ಆಗ ಜನರು ಬಹಳಷ್ಟು ಕಣ್ಣೀರಿಟ್ಟಿದ್ದರು. ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ರಾಜೀವ್ ಗಾಂಧಿ ಸಾವಿನ ಬಗ್ಗೆ ಕಣ್ಣೀರಾಗಿದ್ದರು. ಅವರೊಬ್ಬರು ಒಳ್ಳೆಯ ಮನುಷ್ಯ, ಅವರಿಗೆ ಹೀಗಾಗಬಾರದಿತ್ತು ಎಂದು ಜನರು ಹೇಳುತ್ತಿದ್ದರು' ಎನ್ನುವ ರಮ್ಯಾ ಟ್ವೀಟ್.

      ರಾಜೀವ್ ಗಾಂಧಿ ನಿಧನರಾದ ದಿನವಿಡೀ ಕಣ್ಣೀರು ಹಾಕಿದ್ದೆ, ಊಟನೂ ಮಾಡಿರಲಿಲ್ಲ

      ರಾಜೀವ್ ಗಾಂಧಿ ನಿಧನರಾದ ದಿನವಿಡೀ ಕಣ್ಣೀರು ಹಾಕಿದ್ದೆ, ಊಟನೂ ಮಾಡಿರಲಿಲ್ಲ

      'ರಾಜೀವ್ ಗಾಂಧಿ ನಿಧನರಾದ ದಿನವಿಡೀ ನಾನು ಕಣ್ಣೀರು ಹಾಕಿದ್ದೆ, ಊಟನೂ ಮಾಡಿರಲಿಲ್ಲ. ಎಲ್ಲರ ಬಳಿಯೂ ನನ್ನ ಈ ಅನುಭವವನ್ನು ಹಂಚಿಕೊಂಡಿದ್ದೆ. ಇಂತವರ ಬಗ್ಗೆ ಮೋದಿ ನೀಡಿರುವ ಹೇಳಿಕೆಯನ್ನು ಮೊದಲು ನನಗೆ ನಂಬಲು ಆಗಲಿಲ್ಲ. ಆದರೆ, ಈಗ ಚುನಾವಣೆ ನಡೆಯುತ್ತಿದೆ, ಮೋದಿ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ' ಎನ್ನುವ ರಮ್ಯಾ ಮತ್ತೊಂದು ಟ್ವೀಟ್.

      ರಾಜೀವ್ ಗಾಂಧಿ ಒಬ್ಬರು ಭ್ರಷ್ಟ ಪ್ರಧಾನಿ

      ರಾಜೀವ್ ಗಾಂಧಿ ಒಬ್ಬರು ಭ್ರಷ್ಟ ಪ್ರಧಾನಿ

      ರಾಜೀವ್ ಗಾಂಧಿ ಒಬ್ಬರು ಭ್ರಷ್ಟ ಪ್ರಧಾನಿ.. ಸಾವಿರಾರು ಸಿಖ್ಖರ, ಶ್ರೀಲಂಕಾದಲ್ಲಿ ಸಾವಿರಾರು ಸೈನಿಕರ ಸಾವಿಗೆ, ಭೋಪಾಲ್ ಗ್ಯಾಸ್ ಹಗರಣ,ಬೋಫೋರ್ಸ್ ಮುಂತಾದ ಹಗರಣದ ರೂವಾರಿ, ನಾಟಕ ನಿಲ್ಲಿಸು ಎನ್ನುವ ಟ್ವೀಟ್, ಮೋದಿ ಒಬ್ಬ ನೀಚ.. ಹೀಗೆ ರಮ್ಯಾ, ಟ್ವೀಟಿಗೆ ಬಂದ ರಿಪ್ಲೈ

      ಮತಹಾಕಲು ಆಗದ ನಿಮಗೆ ನೈತಿಕತೆ ಇದೆಯಾ

      ಮತಹಾಕಲು ಆಗದ ನಿಮಗೆ ನೈತಿಕತೆ ಇದೆಯಾ

      ರಮ್ಯಾ ಮೊದಲು ಭಾರತೀಯ ಪ್ರಜೆಯಾಗಿ, ಒಂದು ಮತಹಾಕಲು ಆಗದ ನಿಮಗೆ ನೈತಿಕತೆ ಇದೆಯಾ? ರಾಜೀವ್ ಗಾಂಧಿ ಚೋರ್ ಹೇ.. ಖಾಂದಾನಿ ಚೋರ್, ಭೋಪಾಲ್ ಗ್ಯಾಸ್ ದುರಂತವನ್ನು ಒಮ್ಮೆ ನೋಡಿ ಎನ್ನುವ ರಮ್ಯಾ ಟ್ವೀಟಿಗೆ ಬಂದ ರಿಪ್ಲೈ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+