India & Ukraine: ರೈಲಲ್ಲಿ ಪ್ರಯಾಣ ಬೆಳೆಸಲಿರುವ ಪ್ರಧಾನಿ ನರೇಂದ್ರ ಮೋದಿ! ಯಾವ ಮಾರ್ಗದಲ್ಲಿ?
ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ರೈಲು ಪ್ರಯಾಣ ಮಾಡಲು ಸಜ್ಜಾಗಿದ್ದು, ಭರ್ತಿ 10 ಗಂಟೆ ಕಾಲ ನಿರಂತರವಾಗಿ ರೈಲಿನಲ್ಲಿ ಜರ್ನಿ ಮಾಡಲಿದ್ದಾರೆ. ಅದರಲ್ಲೂ ಹೀಗೆ ಪ್ರಧಾನಿ ಮೋದಿ ಅವರು ಕೈಗೊಳ್ಳಲಿರುವ ರೈಲು ಪ್ರಯಾಣದ ಫಲವಾಗಿ ಒಂದು ಘೋರ & ದೊಡ್ಡ ಯುದ್ಧವೇ ನಿಂತು ಹೋಗುವ ಸಾಧ್ಯತೆಯು ಕೂಡ ದಟ್ಟವಾಗಿದೆ. ಹಾಗಾದರೆ ಇದೀಗ ಪ್ರಧಾನಿ ಮೋದಿ ಅವರು ರೈಲು ಪ್ರಯಾಣ ಮಾಡಲಿರುವ ಮಾರ್ಗ ಯಾವ್ದು? ಬನ್ನಿ ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಕೇವಲ 2 ದಿನ ಬಾಕಿ ಇದೆ ಅಷ್ಟೇ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಮಹತ್ವದ ಭೇಟಿಗೆ ಇಡೀ ಜಗತ್ತೇ ಕಾದು ಕುಳಿತಿದೆ. ಇದೇ ಸಮಯದಲ್ಲಿ ಪ್ರಧಾನಿ ಮೋದಿ ಅವರು ಉಕ್ರೇನ್ ನೆಲದಲ್ಲಿ ಕೈಗೊಳ್ಳಲಿರುವ ಹಲವು ಕ್ರಮ & ಸಹಿ ಹಾಕಲಿರುವ ಒಪ್ಪಂದಗಳ ಬಗ್ಗೆ ಇಡೀ ಜಗತ್ತಿಗೆ ಕುತೂಹಲ ದುಪ್ಪಟ್ಟಾಗಿದೆ. ಇದೇ ಸಮಯದಲ್ಲಿ ಮತ್ತೊಂದು ವಿಚಾರ ಸಂಚಲನ ಸೃಷ್ಟಿ ಮಾಡಿದೆ. ಅದು ಏನೆಂದರೆ ಖುದ್ದು ಪ್ರಧಾನಿ ಮೋದಿ ಅವರು ಉಕ್ರೇನ್ ನೆಲದಲ್ಲಿ ರೈಲು ಏರಿ ಪ್ರಯಾಣ ಮಾಡಲಿದ್ದು, ನೂರಾರು ಕಿಲೋ ಮೀಟರ್ ಸಂಚಾರ ಮಾಡಲು ಸಜ್ಜಾಗಿದ್ದಾರೆ.

10 ಗಂಟೆ ಕಾಲ ರೈಲು ಪ್ರಯಾಣ
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ರಷ್ಯಾ ಪ್ರವಾಸ ಕೈಗೊಂಡಿದ್ದರು. ಆ ನಂತರ ಉಕ್ರೇನ್ ನೆಲಕ್ಕೂ ಭಾರತದ ಪ್ರಧಾನಿ ಎಂಟ್ರಿ ಕೊಡುತ್ತಿದ್ದಾರೆ. ಇಂತಹ ಸಮಯದಲ್ಲೇ ಈಗ ಭಾರಿ ಕುತೂಹಲ ಕೆರಳಿಸಿರುವ ವಿಚಾರ ಏನೆಂದರೆ, ಪ್ರಧಾನಿ ಮೋದಿ ಅವರು ಉಕ್ರೇನ್‌ನಲ್ಲಿ ಬರೋಬ್ಬರಿ 10 ಗಂಟೆ ಕಾಲ ರೈಲಿನಲ್ಲೇ ಪ್ರಯಾಣ ನಡೆಸಲಿದ್ದಾರಂತೆ. ಇದು ಕೂಡ ಭರ್ಜರಿ ಕುತೂಹಲ ಕೆರಳಿಸಿದೆ. ಅಲ್ಲದೆ ಪ್ರಧಾನಿ ಮೋದಿ ಅವರ ರೈಲು ಪ್ರಯಾಣದ ಹಿನ್ನೆಲೆ, ಬಿಗಿ ಭದ್ರತೆಯನ್ನ ಕೂಡ ಕೈಗೊಳ್ಳಲಾಗಿದೆ.
ಪ್ರಧಾನಿ ಮೋದಿ & ಉಕ್ರೇನ್ ಅಧ್ಯಕ್ಷರ ಚರ್ಚೆ
ಭಾರತ ಜಗತ್ತಿನ ಪ್ರತಿಯೊಂದು ದೇಶದ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದು, ಇದೇ ಕಾರಣಕ್ಕೆ ಭಾರತದ ಜೊತೆಗೆ ಬಹುತೇಕ ಎಲ್ಲಾ ದೇಶಗಳು ವ್ಯಾಪಾರ & ವಹಿವಾಟು ನಡೆಸುತ್ತಿವೆ. ಆದರೆ ಈ ವಿಚಾರದಲ್ಲಿ ಉಕ್ರೇನ್ ಮಾತ್ರ, ರಷ್ಯಾ ವಿಷಯ ಪ್ರಸ್ತಾಪಿಸಿ ಕಿರಿಕ್ ಮಾಡುತ್ತಿತ್ತು. ಇದೀಗ ಎಲ್ಲಾ ಸಮಸ್ಯೆಗಳಿಗೆ ಒಂದು ಅಂತ್ಯ ಹಾಡುವ ಸಮಯ ಕೂಡ ಬಂದಾಗಿದೆ. ಆಗಸ್ಟ್ 23 ರಂದು ಪ್ರಧಾನಿ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಹಲವು ವಿಚಾರ ಚರ್ಚೆ ಮಾಡಲಿದ್ದು, ಅದೇ ಸಮಯದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಜೊತೆಗೆ ಯುದ್ಧ ನಿಲ್ಲಿಸುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಭಾರಿ ಕುತೂಹಲ ಕೆರಳಿಸಿದ ಭೇಟಿ!
ಭಾರತ ಎಲ್ಲಾ ದೇಶಗಳ ಜೊತೆಗೆ ಸಂಬಂಧ ಉತ್ತಮವಾಗಿ ಇಟ್ಟುಕೊಂಡಿರುವ ಕಾರಣಕ್ಕಾಗಿ, ಅಭಿವೃದ್ಧಿ ಹೊಂದುತ್ತಿದೆ. ಹಾಗೇ ಇದು ಜಾಗತಿಕ ಮಟ್ಟದಲ್ಲೂ ಬೇರೆ ದೇಶಗಳಿಗೆ ಮಾದರಿ. ಇದೀಗ ಪ್ರಧಾನಿ ಭೇಟಿ ವೇಳೆ ಭಾರತ & ಉಕ್ರೇನ್ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಬಗ್ಗೆಯೂ ಪ್ರಸ್ತಾಪ ಆಗಬಹುದು ಎಂಬ ನಿರೀಕ್ಷೆ ಇದೆ. ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ರಷ್ಯಾ ಪ್ರವಾಸ ಕೈಗೊಂಡ ವೇಳೆ, ಉಕ್ರೇನ್ ಅಧ್ಯಕ್ಷರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಉಕ್ರೇನ್‌ಗೆ ಖುದ್ದು ಭಾರತದ ಪ್ರಧಾನಿ ಮೋದಿ ಅವರು ವಿಸಿಟ್ ಕೊಡುತ್ತಿರುವುದು ಭರ್ಜರಿ ಕುತೂಹಲ ಕೆರಳಿಸಿದೆ.












Click it and Unblock the Notifications