ಪ್ರಧಾನಿ ನರೇಂದ್ರ ಮೋದಿ ಜಪಾನ್‌ ಭೇಟಿಯ ಚಿತ್ರಗಳು

ನವದೆಹಲಿ, ಆ.30 : ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊಟ್ಟಮೊದಲ ಬಾರಿಗೆ ಜಪಾನ್‍ಗೆ ಭೇಟಿ ನೀಡುತ್ತಿದ್ದು, ಶನಿವಾರ ಬೆಳಗ್ಗೆ ನವದೆಹಲಿಯಿಂದ ಹೊರಟಿದ್ದು ಸಂಜೆ ಜಪಾನ್ ತಲುಪಿದ್ದಾರೆ.

ಶನಿವಾರ ಬೆಳಗ್ಗೆ 6 ಗಂಟೆಗೆ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮೋದಿ ಜಪಾನ್‌ಗೆ ತೆರಳಿದರು. ಜಪಾನ್‌ನ ಓಸಾಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

ಆರ್ಥಿಕ ಅಭಿವೃದ್ಧಿ, ಬುಲೆಟ್ ಟ್ರೈನ್ ಯೋಜನೆ ಮುಂತಾದ ವಿಚಾರಗಳ ಕುರಿತು ಪ್ರಧಾನಿ ಮೋದಿ ಜಪಾನ್ ಪ್ರಧಾನಿ ಜೊತೆ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಜಪಾನ್ ಭೇಟಿ ಭಾರತ ಹಾಗೂ ಜಪಾನ್ ಎರಡೂ ದೇಶಗಳಲ್ಲೂ ಮಹತ್ವದ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚಿತ್ರಗಳಲ್ಲಿ ನೋಡಿ ಮೋದಿ ಜಪಾನ್ ಪ್ರವಾಸ

ಜಪಾನ್‌ಗೆ ತೆರಳಿದ ಮೋದಿ

ಜಪಾನ್‌ಗೆ ತೆರಳಿದ ಮೋದಿ

ಶನಿವಾರ ಬೆಳಗ್ಗೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್‌ ಪ್ರವಾಸಕ್ಕೆ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ತೆರಳಿದರು.

ಮೋದಿಗೆ ಆತ್ಮೀಯ ಸ್ವಾಗತ

ಮೋದಿಗೆ ಆತ್ಮೀಯ ಸ್ವಾಗತ

ಶನಿವಾರ ಮಧ್ಯಾಹ್ನ ಜಪಾನ್‌ನ ಓಸಾಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

ಐದು ದಿನಗಳ ಪ್ರವಾಸ

ಐದು ದಿನಗಳ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಅವರು ಐದು ದಿನಗಳ ಜಪಾನ್ ಪ್ರವಾಸ ಕೈಗೊಂಡಿದ್ದಾರೆ. ಭಾರತ ಮತ್ತು ಜಪಾನ್ ಎರಡೂ ದೇಶಗಳಲ್ಲೂ ಈ ಭೇಟಿ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ದ್ವಿಪಕ್ಷೀಯ ಮಾತುಕತೆ

ದ್ವಿಪಕ್ಷೀಯ ಮಾತುಕತೆ

ಆರ್ಥಿಕ ಅಭಿವೃದ್ಧಿ, ಬುಲೆಟ್ ಟ್ರೈನ್ ಯೋಜನೆ ಮುಂತಾದ ವಿಚಾರಗಳ ಕುರಿತು ಪ್ರಧಾನಿ ಮೋದಿ ಜಪಾನ್ ಪ್ರಧಾನಿ ಜೊತೆ ಚರ್ಚೆ ನಡೆಸಲಿದ್ದಾರೆ.

ಅಣ್ವಸ್ತ್ರ ನೀತಿ ಬಗ್ಗೆ ಚರ್ಚೆ ಇಲ್ಲ

ಅಣ್ವಸ್ತ್ರ ನೀತಿ ಬಗ್ಗೆ ಚರ್ಚೆ ಇಲ್ಲ

ಜಪಾನ್ ಭೇಟಿಯ ಸಮಯದಲ್ಲಿ ಭಾರತ ಮಾಡಿಕೊಂಡಿದ್ದ ಅಣ್ವಸ್ತ್ರ ನೀತಿಯನ್ನು ಪುನರ್ ಪರೀಶೀಲನೆ ಮಾಡಬಹುದೆಂಬ ಮಾಧ್ಯಮಗಳ ವರದಿಯನ್ನು ನರೇಂದ್ರ ಮೋದಿ ತಳ್ಳಿಹಾಕಿದ್ದಾರೆ. ಈ ಬಗ್ಗೆ ಚರ್ಚಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿಯಿಂದ ಸ್ವಾಗತ

ಪ್ರಧಾನಿಯಿಂದ ಸ್ವಾಗತ

ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ಕಾರಿ ವಸತಿ ಗೃಹದಲ್ಲಿ ಭೇಟಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+