ಮುಂದುವರಿದ ವಿದೇಶ ಪ್ರೇಮ: ಫಾರಿನ್ ಟೂರಿಗೆ ಮೋದಿ ಮತ್ತೆ ಸಜ್ಜು
ನವದೆಹಲಿ, ನ 19: ಪ್ರಧಾನಿಯಾದ ನಂತರ ತನ್ನ ಸತತ ವಿದೇಶ ಪ್ರವಾಸದ ಮೂಲಕ ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಮತ್ತೊಂದು ವಿದೇಶ ಪ್ರವಾಸಕ್ಕೆ ಅಣಿಯಾಗಿದ್ದಾರೆ.
ಬ್ರಿಟನ್, ಟರ್ಕಿ ಪ್ರವಾಸ ಮುಗಿಸಿ ಮಂಗಳವಾರ (ನ 17) ಬೆಳಗ್ಗೆಯಷ್ಟೇ ತಾಯ್ನಾಡಿಗೆ ವಾಪಸ್ ಆಗಿದ್ದ ಮೋದಿ, ಇದೇ ಶನಿವಾರ (ನ 21) ಮತ್ತೆ ಐದು ದಿನದ ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದಾರೆ.
ಅಧಿಕಾರಕ್ಕೆ ಬಂದ ಹದಿನೆಂಟು ತಿಂಗಳಲ್ಲಿ ಪ್ರಧಾನಿ ಮೋದಿ, ನವೆಂಬರ್ 2015ರ ವರೆಗೆ 30ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಸುಮಾರು 75ಕ್ಕೂ ಹೆಚ್ಚುದಿನವನ್ನು ತನ್ನ ವಿದೇಶ ಪ್ರವಾಸದಲ್ಲಿ ಕಳೆದಿದ್ದಾರೆ. ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ (2014) ಮೋದಿ ವಿದೇಶ ಪ್ರವಾಸಕ್ಕೆ ಸುಮಾರು 39 ಕೋಟಿ ತಗುಲಿತ್ತು.
ಶನಿವಾರದಂದು ಐದು ದಿನಗಳ ಪ್ರವಾಸಕ್ಕಾಗಿ ಮೋದಿ ಮಲೇಷ್ಯಾ ಮತ್ತು ಸಿಂಗಾಪುರಕ್ಕೆ ತೆರಳುತ್ತಿದ್ದಾರೆ. ನವೆಂಬರ್ 21 ರಿಂದ 22ರ ಮಲೇಷ್ಯಾ ಪ್ರವಾಸದ ವೇಳೆ ಕೌಲಾಲಂಪುರದಲ್ಲಿ ಆಸಿಯಾನ್ ಶೃಂಗಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. (ಮೋದಿ ಕೈಕುಲುಕಿದ ಲಂಡನ್ ರಾಣಿ ಎಲಿಜಬೆತ್)
ಇದಾದ ನಂತರ ನವೆಂಬರ್ 23 ರಿಂದ 25ರ ಅವಧಿಯಲ್ಲಿ ಸಿಂಗಾಪುರದಲ್ಲಿ ದ್ವಿಪಕ್ಷೀಯ ಮಾತುಕತೆಯಲ್ಲಿ ತೊಡಗಲಿದ್ದಾರೆ. ಇದಲ್ಲದೇ, ಎರಡೂ ದೇಶದಲ್ಲಿನ ಉದ್ಯಮಿಗಳನ್ನು, ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.
ಮೋದಿ, ಮಲೇಷ್ಯಾದ ಕೌಲಾಲಂಪುರದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಇದುವರೆಗಿನ ನಮ್ಮ ಪ್ರಧಾನಿಯ ವಿದೇಶ ಪ್ರವಾಸದ ಐಟಿನರಿ ಹೀಗಿತ್ತು, ಸ್ಲೈಡಿನಲ್ಲಿ..

ಅಧಿಕಾರಕ್ಕೆ ಬಂದ ಮೊದಲ ಮೂರು ತಿಂಗಳು (2014)
ಜೂನ್ 16,17 - ಭೂತಾನ್
ಜುಲೈ 13 ರಿಂದ 16 - ಬ್ರೆಜಿಲ್
ಆಗಸ್ಟ್ 3, 4 - ನೇಪಾಳ
ಆಗಸ್ಟ್ 30 ರಿಂದ ಸೆ 3 - ಜಪಾನ್

ಸೆಪ್ಟಂಬರ್ ನಿಂದ ಡಿಸೆಂಬರ್ 2014
ಸೆ 26 ರಿಂದ 30 - ಅಮೆರಿಕಾ
ನ 11 ರಿಂದ ನ 13 - ಮ್ಯಾನ್ಮಾರ್
ನ 14 ರಿಂದ ನ 18 - ಆಸ್ಟ್ರೇಲಿಯಾ
ನ 19 - ಫಿಜಿ
ನ 25 ರಿಂದ 27 - ನೇಪಾಳ

ಜನವರಿಯಿಂದ ಏಪ್ರಿಲ್ 2015
ಮಾರ್ಚ್ 10, 11 - ಸೆಶೆಲ್ಸ್ ಗಣರಾಜ್ಯ್
ಮಾರ್ಚ್ 11 ರಿಂದ 13 - ಮಾರಿಷಸ್
ಮಾರ್ಚ್ 13 ರಿಂದ 14 - ಶ್ರೀಲಂಕಾ
ಮಾರ್ಚ್ 29 - ಸಿಂಗಾಪುರ
ಏಪ್ರಿಲ್ 9 ರಿಂದ 12 - ಫ್ರಾನ್ಸ್
ಏಪ್ರಿಲ್ 12 ರಿಂದ 14 - ಜರ್ಮನಿ
ಏಪ್ರಿಲ್ 14 ರಿಂದ 16 - ಕೆನಡಾ

ಮೇ ತಿಂಗಳಿನಿಂದ ಜುಲೈ 2015
ಮೇ 14 ರಿಂದ 16 - ಚೀನಾ
ಮೇ 16 ರಿಂದ 17 - ಮಂಗೋಲಿಯಾ
ಮೇ 18 ರಿಂದ 19 - ದಕ್ಷಿಣ ಕೊರಿಯಾ
ಜೂನ್ 6 ರಿಂದ 7 - ಬಾಂಗ್ಲಾದೇಶ
ಜುಲೈ 6 - ಉಜ್ಬೇಕಿಸ್ಥಾನ
ಜುಲೈ 7 - ಕಜಕೀಸ್ಥಾನ
ಜುಲೈ 8 ರಿಂದ 10 - ರಷ್ಯಾ
ಜುಲೈ 10 ರಿಂದ 11 - ತುರ್ಕಮೆನಿಸ್ತಾನ್ ಗಣರಾಜ್ಯ
ಜುಲೈ 12 - ಕಿರ್ಗಿಸ್ಥಾನ್
ಜುಲೈ 12 ರಿಂದ 13 - ತಜಕೀಸ್ಥಾನ

ಆಗಸ್ಟ್ 2015 ರಿಂದ ಇದುವರೆಗೆ
ಆಗಸ್ಟ್ 16, 17 - ಯುನೈಟೆಡ್ ಅರಬ್ ಎಮಿರೇಟ್ಸ್
ಸೆ 23 - ಐರ್ಲ್ಯಾಂಡ್
ಸೆ 24 ರಿಂದ 30 - ಅಮೆರಿಕಾ
ನ 12 ರಿಂದ 14 - ಬ್ರಿಟನ್
ನ 15,16 - ಟರ್ಕಿ












Click it and Unblock the Notifications