ವಿಭಿನ್ನವಾಗಿ 2020ನೇ ವರ್ಷವನ್ನು ಸ್ವಾಗತಿಸಿದ ಪ್ರಧಾನಿ ಮೋದಿ

ನವದೆಹಲಿ, ಜನವರಿ 1: ಹೊಸ ವರ್ಷ 2020ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಭಿನ್ನವಾಗಿ ಶುಭಾಶಯ ಹೇಳಿದ್ದಾರೆ.

ವರ್ಷದ ಕೊನೆಯ ದಿನದಂದು 2019ರ ಸಾಧನೆಯ ವಿಡಿಯೋ ಟ್ವೀಟ್ ಮಾಡಿದ್ದರೆ, ಜನವರಿ 1ರ ಬೆಳಗ್ಗೆ ದೇಶದ ಜನರಿಗೆ 2020ಕ್ಕೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

2019ರ ಕೇಂದ್ರ ಸರ್ಕಾರದ ಸಾಧನೆ ಕುರಿತಂತೆ 3 ನಿಮಿಷ್ 16 ಸೆಕೆಂಡುಗಳ ವಿಡಿಯೋದಲ್ಲಿ ಸಾಕಷ್ಟು ವಿವರಣೆ ನೀಡಲಾಗಿದೆ. ಈ ವಿಡಿಯೋವನ್ನು ನಮೋ 2.0 ಎನ್ನುವ ಟ್ವಿಟ್ಟರ್ ಖಾತೆಯಿಂದ ಅಪ್‌ಲೋಡ್ ಮಾಡಲಾಗಿತ್ತು.

modi

ಅದನ್ನು ರೀ ಟ್ವೀಟ್ ಮಾಡಿರುವ ಮೋದಿ 2019ರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಈ ವಿಡಿಯೋ ಒಳಗೊಂಡಿದೆ. ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕೆಂಬ ಭಾರತದ 130 ಜನತೆಯ ಆಶೋತ್ತರಗಳನ್ನು 2020ರಲ್ಲೂ ಮುನ್ನಡೆಸುವ ನಂಬಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.

ಡಿಸೆಂಬರ್ 31ರ ಸಂಜೆ 6.15ಕ್ಕೆ ಈ ರೀತಿಯ ಟ್ವೀಟ್ ಮಾಡಿದ್ದರು. ಜನವರಿ 1ರ ಬೆಳಗ್ಗೆ 7.4ಕ್ಕೆ ಟ್ವೀಟ್ ಮಾಡಿ 2020 ಹೊಸ ವರ್ಷಕ್ಕೆ ಶುಭಾಶಯ ಕೋರಿರುವ ಮೋದಿ 'ನಿಮಗೆಲ್ಲರಿಗೂ 2020ರ ಹಾರ್ದಿಕ ಶುಭಾಶಯಗಳು, ಈ ವರ್ಷವು ನಿಮ್ಮ ಜೀವನದ ಸಮೃದ್ಧಿಯಿಂದ ತುಂಬಿರಲಿ, ನೀವೆಲ್ಲರೂ ಆರೋಗ್ಯವಾಗಿದ್ದು, ನಿಮ್ಮೆಲ್ಲಾ ಆಶೋತ್ತರಗಳು ಈಡೇರಲಿ ಎಂದು ಹಾರೈಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+