ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ!

Recommended Video

      ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ..! | Oneindia Kannada

      ನವದೆಹಲಿ, ನವೆಂಬರ್ 02: ಸಬ್ಸಿಡಿಯುಳ್ಳ ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದೆ.

      ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆಯಲ್ಲಿ 4 ರೂ. ಏರಿಕೆಯಾಗಿದೆ. ಸಬ್ಸಿಡಿರಹಿತ ಸಿಲಿಂಡರ್ ಬೆಲೆಯಲ್ಲಿ 93.94 ರೂ. ಏರಿಕೆಯಾಗಿದೆ.

      ಸಬ್ಸಿಡಿಯುಳ್ಳ ಗೃಹ ಬಳಕೆ 14.2 ಕೆ.ಜಿ. ಸಿಲಿಂಡರ್ ಬೆಲೆ ದೆಹಲಿಯಲ್ಲಿ 495.69 ರೂ., ಕೋಲ್ಕತ್ತದಲ್ಲಿ 498.43 ರೂ., ಮುಂಬೈನಲ್ಲಿ 498.38 ರೂ., ಚೆನ್ನೈನಲ್ಲಿ 483.69 ರೂ. ಆಗಿದೆ. ಬೆಂಗಳೂರು ಬೆಲೆ 530 ರು ನಷ್ಟಿದೆ.

      Price of non-subsidised LPG hiked by Rs 93

      ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಮೆಟ್ರೋ ನಗರಗಳಲ್ಲಿ 93 ರೂ. ನಿಂದ 94 ರೂ. ಏರಿಕೆಯಾಗಲಿವೆ. ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್.ಪಿ.ಜಿ. ಸಿಲಿಂಡರ್ ಬೆಲೆ 742 ರೂ., ಕೋಲ್ಕತ್ತದಲ್ಲಿ 759.5 ರೂ. ಮುಂಬೈನಲ್ಲಿ 718.5 ರೂ., ಚೆನ್ನೈನಲ್ಲಿ 750 ರೂ. ಆಗಲಿದೆ.

      ಸಬ್ಸಿಡಿ ಕಡಿತ : ಉದಾಹರಣೆಗೆ ಅರ್ಹ ಗ್ರಾಹಕರಿಗೆ ಸದ್ಯದ ವ್ಯವಸ್ಥೆಯಲ್ಲಿ 119.85 ರೂ. ಸಬ್ಸಿಡಿ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿತ್ತು. ಹೊಸ ಅಧಿಸೂಚನೆಯ ಪ್ರಕಾರ ಬ್ಯಾಂಕ್ ಖಾತೆಗೆ 107 ರೂ. ಸಬ್ಸಿಡಿ ಮೊತ್ತ ಜಮೆಯಾಗಲಿದೆ. ಜಿಎಸ್ ಟಿ ಹಾಗು ಸಬ್ಸಿಡಿ ಕಡಿತದಿಂದ ಪ್ರತಿ ಸಿಲಿಂಡರ್ ಬೆಲೆ 32 ರೂ. ಹೆಚ್ಚಾಗಲಿದೆ.

      ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. (ಪಿಟಿಐ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+