ವೃತ್ತಿಪರ ಕೋರ್ಸಿಗೆ ಮನೆಯಲ್ಲೇ ತರಬೇತಿ ಪಡೆಯಿರಿǃ

ನವದೆಹಲಿ, ಜುಲೈ 10: ವೃತ್ತಿಪರ ಕೋರ್ಸ್ ಗಳಾದ ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ ವಿಷಯಗಳ ಪ್ರವೇಶ ಪರೀಕ್ಷೆಗಳ ಸಿದ್ಧತೆಗೆ ಸಹಕಾರಿಯಾಗಬಲ್ಲ ನಾಲ್ಕು ಟಿವಿ ವಾಹಿನಿಗಳಿಗೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಭಾನುವಾರ ಚಾಲನೆ ನೀಡಿದರು.

ಗುರುಪೂರ್ಣಿಮಾ ಅಂಗವಾಗಿ ನಡೆದ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಉಪಯುಕ್ತವಾಗುವ 28 ಡೈರೆಕ್ಟ್‌-ಟು-ಹೋಮ್‌(ಡಿಟಿಎಚ್‌) ಸ್ಯಾಟೆಲೈಟ್‌ ವಾಹಿನಿಗಳಿಗೆ ಚಾಲನೆ ನೀಡಲಾಯಿತು.

Prez Mukherjee launches 'Swayam Prabha', a digital learning platform

ಸಾರ್ವಜನಿಕರಿಗೆ 'ಸ್ವಯಂ' ವೆಬ್‌ಸೈಟ್ ಮೂಲಕ ಉಚಿತ ಆನ್‌ಲೈನ್‌ ಕೋರ್ಸ್ (massive open online courses (MOOCs))ಗಳಿಗೆ ಚಾಲನೆ ನೀಡಿದರು.

ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಿಗೆ ಸಹಕಾರಿಯಾಗುವ ತರಬೇತಿಯನ್ನು ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ)ಗಳ ಸಹಯೋಗದಲ್ಲಿ ನೀಡಲಾಗುತ್ತದೆ. 32 ಶೈಕ್ಷಣಿಕ ವಾಹಿನಿಗಳು 'ಸ್ವಯಂ ಪ್ರಭಾ' ಹೆಸರಿನೊಂದಿಗೆ ದಿನದ 24 ಗಂಟೆಯೂ ಪ್ರಸಾರಗೊಳ್ಳಲಿವೆ.

ಪಿಯು ಮಟ್ಟದ 29 ವಿಷಯಗಳು, 210 ಪದವಿ ಕೋರ್ಸ್‌ಗಳು, ಇಂಜಿನಿಯರಿಂಗ್‌ ಹಾಗೂ ಮ್ಯಾನೇಜ್‌ ಮೆಂಟ್‌ ಸೇರಿದಂತೆ ಇತರೆ ವಿಭಾಗಗಳಲ್ಲಿನ 192 ಸ್ನಾತಕೋತ್ತರ ಪದವಿ ಕೋರ್ಸ್‌ಗಳು, 14 ಸರ್ಟಿಫಿಕೆಟ್‌ ಕೋರ್ಸ್‌ಗಳು ಹಾಗೂ ಮೂರು ಡಿಪ್ಲೊಮಾ ಕಾರ್ಯಕ್ರಮಗಳು ಆನ್‌ಲೈನ್‌ ಮೂಲಕ ಉಚಿತವಾಗಿ ಪಡೆಯಬಹುದಾಗಿದೆ. ಕೆಲವು ಸರ್ಟಿಫಿಕೆಟ್ ಕೋರ್ಸ್ ಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸ್ವಯಂಪ್ರಭಾ ವೆಬ್ ಸೈಟ್(www.swayamprabha.gov.in) ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+