ಲೋಕಪಾಲ ಪಿ.ಕೆ. ಘೋಷ್ ನೇಮಕಕ್ಕೆ ರಾಷ್ಟ್ರಪತಿ ಅಂಕಿತ

ನವದೆಹಲಿ, ಮಾರ್ಚ್ 20: ದೇಶದ ಮೊದಲ ಲೋಕಪಾಲರನ್ನಾಗಿ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕ ಮಾಡಿದ್ದಾರೆ.

ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರನ್ನು ಲೋಕಪಾಲರನ್ನಾಗಿ ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನ ಮಂಗಳವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ ತಿಳಿಸಿದೆ.

President Ramnath Kovind appoints Justice Pinaki Chandra Ghose as Lokpal

ನ್ಯಾಯಮೂರ್ತಿಗಳಾದ ದಿಲೀಪ್ ಬಿ ಭೋಸಲೆ, ಪ್ರದೀಪ್ ಕುಮಾರ್ ಮೊಹಾಂತಿ, ಅಭಿಲಾಷಾ ಕುಮಾರಿ ಮತ್ತು ಅಜಯ್ ಕುಮಾರ್ ತ್ರಿಪಾಠಿ ಲೋಕಪಾಲ್‌ನ ಇತರೆ ನಾಲ್ವರು ನ್ಯಾಯಾಂಗ ಸದಸ್ಯರಾಗಿದ್ದಾರೆ.

ನ್ಯಾಯಾಂಗ ಸದಸ್ಯರಲ್ಲದೆ ಇನ್ನೂ ನಾಲ್ವರು ಲೋಕಪಾಲ್‌ನ ಸದಸ್ಯರು ಇರಲಿದ್ದು, ದಿನೇಶ್ ಕುಮಾರ್ ಜೈನ್, ಅರ್ಚನಾ ರಾಮಸುಂದರಮ್, ಮಹೇಂದರ್ ಸಿಂಗ್ ಮತ್ತು ಡಾ. ಇಂದ್ರಜೀತ್ ಪ್ರಸಾದ್ ಗೌತಮ್ ಸದಸ್ಯರಾಗಿರಲಿದ್ದಾರೆ.

ಈ ನೇಮಕಾತಿಗಳು ಸದಸ್ಯರು ತಾವು ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ದಿನಗಳಿಂದ ಜಾರಿಗೆ ಬರಲಿವೆ ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ.

ಅಣ್ಣಾ ಹಜಾರೆ ಮತ್ತು ಇತರೆ ಸಾಮಾಜಿಕ ಕಾರ್ಯಕರ್ತರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ದಿನಗಳ ಹಿಂದೆ ಪಿ.ಕೆ. ಘೋಷ್ ಅವರ ಹೆಸರನ್ನು ಅಂತಿಮಗೊಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+