ಮಹಿಳೆಗೆ ನೆಲದ ಮೇಲೆಯೇ ಹೆರಿಗೆ: ಆಘಾತಕಾರಿ ವಿಡಿಯೋ ಭಾರೀ ವೈರಲ್
Video Viral: ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲಿರುತ್ತವೆ. ಈ ನಡುವೆಯೇ ಇದೀಗ ಗರ್ಭಿಣಿ ಮಹಿಳೆಯೊಬ್ಬರಿಗೆ ಆಸ್ಪತ್ರೆಯ ನೆಲದ ಮೇಲೆಯೇ ಹೆರಿಗೆ ಮಾಡಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.
ಗರ್ಭಿಣಿ ಮಹಿಳೆಗೆ ಆಸ್ಪತ್ರೆಯ ನೆಲದ ಮೇಲೆ ಹೆರಿಗೆ ಮಾಡಿಸಲು ಒತ್ತಾಯಿಸಲಾದ ಘಟನೆ ಹರಿದ್ವಾರದಲ್ಲಿ ನಡೆದಿದೆ. ಈ ಆಘಾತಕಾರಿ ವಿಡಿಯೋ ವೈರಲ್ ಆದ ನಂತರ ವೈದ್ಯರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಇನ್ನೂ ಈ ವಿಡಿಯೋದಲ್ಲಿ ಗರ್ಭಿಣಿ ಮಹಿಳೆ ನೋವು ತಾಳಲಾರದೇ ಕಿರುಚಾಡಿರುವುದು ಕಂಡುಬಂದಿದೆ. ಇದಕ್ಕೆ ಕಾರಣರಾದವರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಈ ವೀಡಿಯೊದಲ್ಲಿ, ಮಹಿಳೆ ನೆಲದ ಮೇಲೆ ನೋವಿನಿಂದ ಕಿರುಚುತ್ತಿರುವುದನ್ನು ನೋಡಬಹುದಾಗಿದೆ. ಇದರಲ್ಲಿ ಆಸ್ಪತ್ರೆಯ ಸಿಬ್ಬಂದಿ ಯಾರೂ ಕಾಣಿಸುತ್ತಿಲ್ಲ. ಈ ಗೊಂದಲದ ದೃಶ್ಯಗಳು ಆಸ್ಪತ್ರೆಯ ಪ್ರಕರಣವನ್ನು ನಿರ್ವಹಿಸುವ ಬಗ್ಗೆ ವ್ಯಾಪಕ ಟೀಕೆಗೆ ಕಾರಣ ಆಗಿವೆ. ಕರ್ತವ್ಯದಲ್ಲಿದ್ದ ವೈದ್ಯರು ಆಸ್ಪತ್ರೆಯಲ್ಲಿ ಹೆರಿಗೆಗಳನ್ನು ನಡೆಸಲಾಗಿಲ್ಲ ಎಂದು ಹೇಳಿಕೊಂಡು ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಯಾವುದೇ ಬೆಂಬಲ ಇಲ್ಲದೆ ಗರ್ಭಿಣಿ ಮಹಿಳೆಯು ಆಸ್ಪತ್ರೆಯ ನೆಲದ ಮೇಲೆ ನೋವಿನಿಂದ ನರಳಾಡಿದ್ದಾರೆ.
ಬಳಿಕ ಬೆಳಗಿನ ಬೆಳಗಿ ಜಾವ 1:30ರ ಸುಮಾರಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಹೆರಿಗೆ ಆದರು. ಹೆರಿಗೆಯ ಸಮಯದಲ್ಲಿ ಯಾವುದೇ ವೈದ್ಯಕೀಯ ಸಿಬ್ಬಂದಿ ಅವರಿಗೆ ಸಹಾಯ ಮಾಡಲಿಲ್ಲ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.
ಮರುದಿನ ಬೆಳಗ್ಗೆ ಬಂದಂತಹ ಗರ್ಭಿಣಿ ಕುಟುಂಬದ ಸಂಬಂಧಿ ಸೋನಿ ಈ ಘಟನೆಯ ಬಗ್ಗೆ ವಿವರಿಸಿದ್ದಾರೆ. 'ಅವರನ್ನು ಹಾಸಿಗೆಯ ಮೇಲೆ ಮಲಗಲು ಸಹ ಬಿಡಲಿಲ್ಲ. ಹೆರಿಗೆಯ ನಂತರ, ನರ್ಸ್‌ಗಳಲ್ಲಿ ಒಬ್ಬರು ವ್ಯಂಗ್ಯವಾಗಿ, 'ಮಜಾ ಆಯಾ? ಔರ್ ಬಚ್ಚಾ ಪೈದಾ ಕರೇಗಿ?' ಎಂದು ಕೇಳಿದರು. ಅಂತಹ ಮಾತುಗಳನ್ನು ಯಾರು ಹೇಳುತ್ತಾರೆ? ಮಗುವಿಗೆ ಏನಾದರೂ ಆಗಿದ್ದರೆ, ಯಾರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದರು?," ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು. ಅಲ್ಲದೆ, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ये वीडियो उत्तराखंड के हरिद्वार में जिला महिला अस्पताल का बताया जा रहा है जहां एक गर्भवती महिला को भर्ती करने से इनकार कर दिया गया, जिसके चलते उसने अस्पताल के फर्श पर तड़पते हुए बच्चे को जन्म दिया।
— Sujata Paul - India First (Sujata Paul Maliah) (@SujataIndia1st) October 1, 2025
परिजनों का आरोप है कि ड्यूटी पर तैनात महिला डॉक्टर ने गर्भवती को यह कहते हुए… pic.twitter.com/4XOcEFXEtG
ಇನ್ನು ಹರಿದ್ವಾರದ ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಕೆ. ಸಿಂಗ್ ತನಿಖೆ ಆರಂಭಿಸಲಾಗಿದೆ ಎಂದು ದೃಢಪಡಿಸಿದರು. "ನಾನು ಮಹಿಳಾ ಆಸ್ಪತ್ರೆಯಿಂದ ಪ್ರಾಥಮಿಕ ವರದಿಯನ್ನು ಪಡೆದುಕೊಂಡಿದ್ದೇನೆ ಮತ್ತು ವಿವರವಾದ ಲಿಖಿತ ಮಾಹಿತಿ ಪಡೆಯಲು ಕಾಯುತ್ತಿದ್ದೇನೆ. ಮಹಿಳೆಯನ್ನು ರಾತ್ರಿ 9:30ರ ಸುಮಾರಿಗೆ ಕರೆತರಲಾಯಿತು. ಬೆಳಗ್ಗೆ 1:30ಕ್ಕೆ ತುರ್ತು ಘಟಕದಲ್ಲಿ ಹೆರಿಗೆ ಮಾಡಲಾಯಿತು. ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಇದು ನಿರ್ಲಕ್ಷ್ಯ ಎಂದು ದೃಢಪಟ್ಟರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು," ಎಂದು ತಿಳಿಸಲಾಗಿದೆ.
ಸಾಮಾನ್ಯವಾಗಿ ಯಾವುದೇ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ಬಂದರೆ ಆಕೆಯ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುವುದು ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯ ಆಗಿರುತ್ತದೆ. ಆದರೆ, ಹರಿದ್ವಾರದಲ್ಲಿ ಗರ್ಭಿಣಿ ಮಹಿಳೆಗೆ ಚಿತ್ರಹಿಂಸೆ ಕೊಟ್ಟು ನೆಲದ ಮೇಲೆಯೇ ಹೆರಿಗೆ ಮಾಡಿಸಿ ಅಮಾನವೀಯತೆ ತೋರಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಗರ್ಭಿಣಿ ಮಹಿಳೆ ಈ ಚಿತ್ರಹಿಂಸೆಗೆ ಕಾರಣರಾದವರು ನಿಜವಾಗಲೂ ಮನುಷ್ಯರೇ ಅಲ್ಲ. ಅಂತಹ ಮೃಗಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications