ಚುನಾವಣಾಪೂರ್ವ ಸಮೀಕ್ಷೆ: ಹ್ಯಾಟ್ರಿಕ್ ಸಾಧನೆಯತ್ತ ಬಿಜೆಪಿ

ನವದೆಹಲಿ, ಅ 30: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚರಿಸ್ಮಾ ಒಂದು ಕಡೆಯಾದರೆ, ಬಿಜೆಪಿ ಅಧಿಕಾರವಿರುವ ಈ ಎರಡೂ ರಾಜ್ಯಗಳಲ್ಲಿನ ಮುಖ್ಯಮಂತ್ರಿಗಳ ಆಡಳಿತ ವೈಖರಿಯೂ ಇನ್ನೊಂದೆಡೆ. ಒಟ್ಟಿನಲ್ಲಿ ಬಿಜೆಪಿಗಿದು ಖುಷಿ ಕೊಡುವ ಸುದ್ದಿ.

ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಅದರ ಪ್ರಕಾರ ಅಸೆಂಬ್ಲಿ ಚುನಾವಣೆ ನಡೆಯುಲಿರುವ ಮಧ್ಯಪ್ರದೇಶ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯಭೇರಿ ಬಾರಿಸಲಿದೆ.

ಸಿಎನ್ಎನ್ - ಐಬಿಎನ್- ದಿ ವೀಕ್ ನಡೆಸಿದ ಸಮೀಕ್ಷೆಯ ಅನ್ವಯ ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ 2/3 ಮೆಜಾರಿಟಿ ಸಾಧಿಸಿ ಗದ್ದುಗೇರಲಿದೆ.

ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಭದ್ರಕೋಟೆಯಾಗುತ್ತಿರುವ ಈ ಎರಡೂ ರಾಜ್ಯಗಳಲ್ಲಿನ ಜನತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಛತ್ತೀಸಗಡ ಸಿಎಂ ರಮಣ್ ಸಿಂಗ್ ನೇತೃತ್ವದ ಸರಕಾರಕ್ಕೆ ಮತ್ತೆ 'ಫಿದಾ' ಆಗಿದ್ದಾರೆ.

ಮಧ್ಯಪ್ರದೇಶದಲ್ಲಿ ನವೆಂಬರ್ 25ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಛತ್ತೀಸಗಡದಲ್ಲಿ ನವೆಂಬರ್ 11 ಮತ್ತು 19ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತಎಣಿಕೆ ಡಿಸೆಂಬರ್ ಎಂಟರಂದು ನಡೆಯಲಿದೆ.

ಎರಡು ರಾಜ್ಯಗಳ ಚುನಾವಣಾ ಪೂರ್ವ ಸಮೀಕ್ಷೆ..

ಸಮೀಕ್ಷೆ ನಡೆಸಿದ್ದು ಹೇಗೆ

ಸಮೀಕ್ಷೆ ನಡೆಸಿದ್ದು ಹೇಗೆ

ಕಳೆದ ಅಕ್ಟೋಬರ್ 13ರಿಂದ 20ರವರೆಗೆ 35 ವಿಧಾನಸಭಾ ಕ್ಷೇತ್ರದ 140 ಸ್ಥಳದಲ್ಲಿ 2870 ಮತದಾರರನ್ನು ಸಂಪರ್ಕಿಸಿ ಈ ಸಮೀಕ್ಷೆ ನಡೆಸಲಾಗಿದೆ.

ಚೌಹಾಣ್ ಕಿಂಗ್ ಮೇಕರ್

ಚೌಹಾಣ್ ಕಿಂಗ್ ಮೇಕರ್

ಶಿವರಾಜ್ ಸಿಂಗ್ ಚೌಹಾಣ್ ಸರಕಾರಕ್ಕೆ ಮತದಾರ ಫುಲ್ ಮಾರ್ಕ್ ಕೊಡುವ ಮೂಡ್ ನಲ್ಲಿದ್ದಾನೆ. ಸರ್ವೇ ಪ್ರಕಾರ ಸಮೀಕ್ಷೆಗೊಳಗಾದ ಮತದಾರರಲ್ಲಿ ಶೇ.78 ಜನ ಚೌಹಾಣ್ ಮುಖ್ಯಮಂತ್ರಿಯಾಗ ಬೇಕೆಂದು ಬಯಸಿದ್ದಾರೆ.

ಮಧ್ಯಪ್ರದೇಶ ಚುನಾವಣಾಪೂರ್ವ ಸಮೀಕ್ಷೆ

ಮಧ್ಯಪ್ರದೇಶ ಚುನಾವಣಾಪೂರ್ವ ಸಮೀಕ್ಷೆ

ಮಧ್ಯಪ್ರದೇಶ ಚುನಾವಣಾಪೂರ್ವ ಸಮೀಕ್ಷೆ(ಆವರಣದಲ್ಲಿ ಅಸೆಂಬ್ಲಿಯಲ್ಲಿ ಈಗಿನ ಪಕ್ಷಗಳ ಬಲಾಬಲ)

ಒಟ್ಟು ಕ್ಷೇತ್ರಗಳು - 230
ಬಿಜೆಪಿ - 140 ರಿಂದ 160 (143)
ಕಾಂಗ್ರೆಸ್ - 52 ರಿಂದ 62 (71)
ಬಿಎಸ್ಪಿ - 3 ರಿಂದ 7 (7)
ಇತರರು - 10 ರಿಂದ 18 (9)
ಬಿಜೆಪಿ ಅಧಿಕಾರ

ಬಿಜೆಪಿ ಅಧಿಕಾರ

ಛತ್ತೀಸಗಡ ರಾಜ್ಯದಲ್ಲಿ ಡಾ.ರಮಣಸಿಂಗ್ ಸರಕಾರದ ಮೇಲೆ ಜನತೆ ತೃಪ್ತಿ ಪಟ್ಟಿದ್ದಾರೆ. ಶೇ. 51ರಷ್ಟು ಮತದಾರ ರಮಣಸಿಂಗ್ ಅವರೇ ಸಿಎಂ ಪದವಿಗೆ ಸೂಕ್ತ ಎಂದಿದ್ದಾರೆ. ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ಸಿಗೆ ಈ ರಾಜ್ಯದಲ್ಲಿ ಭಾರೀ ಹಿನ್ನಡೆಯಾಗಲಿದೆ.

ಛತ್ತೀಸಗಡ ಚುನಾವಣಾಪೂರ್ವ ಸಮೀಕ್ಷೆ

ಛತ್ತೀಸಗಡ ಚುನಾವಣಾಪೂರ್ವ ಸಮೀಕ್ಷೆ

ಛತ್ತೀಸಗಡ ಚುನಾವಣಾಪೂರ್ವ ಸಮೀಕ್ಷೆ(ಆವರಣದಲ್ಲಿ ಅಸೆಂಬ್ಲಿಯಲ್ಲಿ ಈಗಿನ ಪಕ್ಷಗಳ ಬಲಾಬಲ)

ಒಟ್ಟು ಕ್ಷೇತ್ರಗಳು - 90
ಬಿಜೆಪಿ - 61 ರಿಂದ 71 (50)
ಕಾಂಗ್ರೆಸ್ - 16 ರಿಂದ 24 (38)
ಬಿಎಸ್ಪಿ - 0 ರಿಂದ 2 (2)
ಇತರರು - 1 ರಿಂದ 5 (0)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+