ವ್ಯತಿರಿಕ್ತ ಸಮೀಕ್ಷೆ ಕಾಂಗ್ರೆಸ್ಸಿನಂತೆ ಜೆಡಿಯುಗೂ ಬೇಡ್ವಂತೆ

Pre poll survey mockery of democracy -Now JDU follows congress,
ನವದೆಹಲಿ, ನ.6: ಚುನಾವಣಾ ಪೂರ್ವ ಸಮೀಕ್ಷೆಗಳು ಜನರ ದಿಕ್ಕು ತಪ್ಪಿಸುತ್ತವೆಂದು ವ್ಯತಿರಿಕ್ತ ಚುನಾವಣಾ ಸಮೀಕ್ಷೆಗಳಿಂದ ಕಾಂಗ್ರೆಸ್ ಪಕ್ಷ ಪೀಕಲಾಟಕ್ಕಿಟ್ಟುಕೊಂಡಿರುವಂತೆ ಸಂಯುಕ್ತ ಜನತಾದಳವೂ ಅದನ್ನು ನಿಷೇಧಿಸಿದೆ ಎಂದು ಅಲವತ್ತುಕೊಂಡಿದೆ.

'ಟಿವಿ ಮಾಧ್ಯಮಗಳು ಚುನಾವಣಾ ಪೂರ್ವದಲ್ಲಿ ನಡೆಸುವ ಜನಾಭಿಪ್ರಾಯ ಸಮೀಕ್ಷೆಗಳು ಪ್ರಜಾಪ್ರಭುತ್ವವನ್ನು ಅಣಕಿಸುವಂತಿವೆ' ಎಂದು ಜೆಡಿಯು ಟೀಕಿಸಿದೆ. ಇಂತಹ ಸಮೀಕ್ಷೆಗಳಲ್ಲಿ ಹಣದ ಪಾತ್ರ ಮಹತ್ವವಾಗಿರುತ್ತವೆ' ಎಂದು ಪಕ್ಷವು ಆರೋಪಿಸಿದೆ. ಈ ರೀತಿಯ ಸಮೀಕ್ಷೆಗಳನ್ನು ತನ್ನ ಪಕ್ಷ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು JDU ಹೇಳಿದೆ.

ಎನ್‌ ಡಿಎ ಕೂಟದ ಹಿಂದಿನ ಮಿತ್ರ ಪಕ್ಷ ಜೆಡಿಯು, ಚುನಾವಣಾ ಪೂರ್ವದಲ್ಲಿ ನಡೆಸಲಾಗುವ ಜನಾಭಿಪ್ರಾಯ ಸಮೀಕ್ಷೆಯನ್ನು ನಿಷೇಧಿಸಬೇಕು ಅಥವಾ ಅದಕ್ಕೆ ನಿಯಂತ್ರಣ ಹೇರಬೇಕು ಎಂಬ ಕಾಂಗ್ರೆಸ್ ಕೋರಿಕೆಯನ್ನು ಬೆಂಬಲಿಸಿದಂತಾಗಿದೆ. ಆದರೆ ಆಡಳಿತ ಪಕ್ಷವು ಸೋಲಿನ ಭೀತಿಯಿಂದ ಈ ರೀತಿಯ ಕೋರಿಕೆಯನ್ನು ಚುನಾವಣಾ ಆಯೋಗದ ಮುಂದಿಟ್ಟಿದೆ ಎಂದು ಬಿಜೆಪಿ ಪಕ್ಷವು ಕಾಂಗ್ರೆಸ್ ವಿರುದ್ಧ ಈಗಾಗಲೇ ಹರಿಹಾಯ್ದಿದಿದೆ.

'ಚುನಾವಣಾ ಪೂರ್ವ ಸಮೀಕ್ಷೆಯನ್ನು ತಮ್ಮ ಪಕ್ಷ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದೆ. ಈ ರೀತಿಯ ಸಮೀಕ್ಷೆಗಳು ಪ್ರಜಾಪ್ರಭುತ್ವದ ಅಣಕವಾಗಿದ್ದು, ಇದರಲ್ಲಿ ಹಣವು ತನ್ನ ಪ್ರಾಬಲ್ಯವನ್ನು ಮೆರೆಯುತ್ತದೆ' ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಚುನಾವಣಾ ಆಯುಕ್ತ ವಿಎಸ್ ಸಂಪತ್‌ ಅವರಿಗೆ ಉತ್ತರಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಒಂದೊಂದು ಮತಕ್ಕೂ ಮಹತ್ವದ ಸ್ಥಾನವಿದೆ. ಹಣವಂತರು ಇದನ್ನು ನಿಧಾನವಾಗಿ ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಈ ರೀತಿಯಾಗಿಸಲು ಚುನಾವಣಾ ಪೂರ್ವ ಸಮೀಕ್ಷೆಯನ್ನು ಕೆಲವೊಬ್ಬರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+