ಸಮೀಕ್ಷೆ: ಬಿಜೆಪಿ ಅಧಿಕಾರದ ರಾಜ್ಯಗಳಲ್ಲಿ ಯಾರು ಮುಂದೆ?
ನವದೆಹಲಿ, ಜ 23: ಇತ್ತೀಚಿನ ಎಲ್ಲಾ ಸಮೀಕ್ಷೆಗಳಲ್ಲಿ ದೇಶಾದ್ಯಂತ ಹೆಚ್ಚಿನ ಮತದಾರ ನರೇಂದ್ರ ಮೋದಿಯೇ ಪ್ರಧಾನಿ ಪಟ್ಟಕ್ಕೆ ಸೂಕ್ತ ಆಯ್ಕೆ ಎಂದಿದ್ದಾನೆ.
ಬಹುಜನ ಮತದಾರರ ಅಪೇಕ್ಷೆ ನನಸಾಗ ಬೇಕಾದರೆ ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಮತ್ತು ಬಿಜೆಪಿ ಪ್ರಭಲವಾಗಿರುವ ರಾಜ್ಯಗಳಲ್ಲಿ ಪಕ್ಷ ಹೆಚ್ಚಿನ ಸೀಟು ಗೆಲ್ಲುವುದು ಅತ್ಯವಶ್ಯಕ. (ಚುನಾವಣಾಪೂರ್ವ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಯಾರು)
ಐಬಿಎನ್ ನ್ಯಾಷನಲ್ ಪೋಲ್ ಟ್ರ್ಯಾಕರ್ ಮತ್ತು ರಾಜನೀತಿ ಜಂಟಿಯಾಗಿ ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ ಪಾಲಿಗೆ ಪ್ರಮುಖವಾಗಿರುವ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯದಲ್ಲಿ (ಜನವರಿ 2014ರಲ್ಲಿ ಚುನಾವಣೆ ನಡೆದರೆ) ಯಾರು ಅಧಿಕ ಸೀಟನ್ನು ಗೆಲ್ಲಲಿದ್ದಾರೆ?
ಬಿಜೆಪಿ ಅಥವಾ ಎನ್ಡಿಎಗೆ ನೆಲೆಯಿಲ್ಲದ ಕ್ಷೇತ್ರದಲ್ಲೂ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಸೂಕ್ತ ಆಯ್ಕೆ ಎಂದು ಮತದಾರ ತನ್ನ ಒಲವು ವ್ಯಕ್ತ ಪಡಿಸಿದ್ದಾನೆ, ಹಾಗೆಯೇ ಬಿಜೆಪಿ ಪ್ರಭಲವಾಗಿರುವ/ಅಧಿಕಾರದಲ್ಲಿರುವ ರಾಜ್ಯದಲ್ಲೂ ಆ ಟ್ರೆಂಡ್ ಹಾಗೆಯೇ ಮುಂದುವರಿದಿದೆ. (ಚುನಾವಣಾಪೂರ್ವ ಸಮೀಕ್ಷೆ: ಕರ್ನಾಟಕದಲ್ಲಿ ಯಾರಿಗೆ ಹೆಚ್ಚು ಸ್ಥಾನ)
ನಾಲ್ಕು ರಾಜ್ಯಗಳಲ್ಲಿ ಸಮೀಕ್ಷೆಯ ಫಲಿತಾಂಶ ಏನನ್ನುತ್ತದೆ? ಸ್ಲೈಡಿನಲ್ಲಿ ನೋಡಿ..

ಮಹಾರಾಷ್ಟ್ರದಲ್ಲಿ ಏನು ಲೆಕ್ಕಾಚಾರ?
ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ - ಎನ್ಸಿಪಿಗೆ ಸಮೀಕ್ಷೆ ಪ್ರಕಾರ ಹಿನ್ನಡೆಯಾಗಲಿದೆ. 2009ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಯುಪಿಎ ಶೇ. 4ರಷ್ಟು ಮತವನ್ನು ಕಳೆದು ಕೊಂಡರೆ ಎನ್ಡಿಎ (ಬಿಜೆಪಿ, ಶಿವಸೇನೆ, ಆರ್ಪಿಐ ಎ) ಶೇ.9ರಷ್ಟು ಲಾಭವಾಗಲಿದೆ.

ಮಹಾರಾಷ್ಟ್ರದಲ್ಲಿ ಮೈತ್ರಿಕೂಟಕ್ಕೆ ಎಷ್ಟು ಸೀಟುಗಳು?
ಒಟ್ಟು ಸ್ಥಾನಗಳು : 48
NDA ಮೈತ್ರಿಕೂಟ : 25 ರಿಂದ 33
UPA ಮೈತ್ರಿಕೂಟ : 12 ರಿಂದ 20
ಇತರರು: 1 ರಿಂದ 5

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಧೂಳೀಪಟ
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ರಾಜ್ಯ ಬಿಜೆಪಿ ಘಟಕ, ಲೋಕಸಭಾ ಚುನಾವಣೆಗೂ ಭರ್ಜರಿ ಫಸಲನ್ನು ಬಿಜೆಪಿ ಕೇಂದ್ರ ಘಟಕಕ್ಕೆ ನೀಡಲಿದೆ ಎನ್ನುತ್ತದೆ ಸಮೀಕ್ಷೆ. 2009ರ ಚುನಾವಣೆಯಲ್ಲಿ ಶೇ. 43ರಷ್ಟು ಮತ ಪಡಿದಿದ್ದ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಶೇ. 51ರಷ್ಟು ಮತ ಬರಲಿದೆ. ಹಾಗೂ, ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಶೇ.40ರಷ್ಟು ಮತ ಪಡೆದಿದ್ದರೆ ಈ ಬಾರಿ ಅದು ಶೇ. 29ಕ್ಕೆ ಇಳಿಯಲಿದೆ ಎನ್ನುತ್ತದೆ ಸಮೀಕ್ಷೆ.

ಮಧ್ಯಪ್ರದೇಶದಲ್ಲಿ ಯಾರಿಗೆ ಎಷ್ಟು ಸಮೀಕ್ಷೆ ಪ್ರಕಾರ?
ಒಟ್ಟು ಸ್ಥಾನಗಳು - 40 (ಸಮೀಕ್ಷೆ ನಡೆಸಿದ್ದು 29 ಕ್ಷೇತ್ರಗಳಲ್ಲಿ)
ಬಿಜೆಪಿ - 23 ರಿಂದ 27
ಕಾಂಗ್ರೆಸ್ - 2 ರಿಂದ 5

ಗುಜರಾತ್ ನಲ್ಲಿ ಮೋದಿ ಅಲೆ
ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಲೆ ಗುಜರಾತಿನಲ್ಲಿ ಭರ್ಜರಿಯಾಗಿಯೇ ಇದೆ. ಬಿಜೆಪಿಯ ಭದ್ರ ಕೋಟೆಯಾಗಿರುವ ಗುಜರಾತಿನಲ್ಲಿ ಪಕ್ಷಕ್ಕೆ ಅನುಕೂಲಕರವಾದ ವಾತಾವರಣವಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ 15 ಮತ್ತು ಕಾಂಗ್ರೆಸ್ 11 ಸ್ಥಾನವನ್ನು ಗೆದ್ದಿತ್ತು. ಜನವರಿ 2014ರಲ್ಲಿ ಚುನಾವಣೆ ನಡೆದರೆ ಸಮೀಕ್ಷೆ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್ ಎಷ್ಟು ಸ್ಥಾನವನ್ನು ಗೆಲ್ಲಬಹುದೆಂದರೆ
ಒಟ್ಟು ಸ್ಥಾನಗಳು (26)
ಬಿಜೆಪಿ - 20 ರಿಂದ 25
ಕಾಂಗ್ರೆಸ್ - 1 ರಿಂದ 4
ಇತರರು - 0 ರಿಂದ 2

ಛತ್ತೀಸ್ ಗಢ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಛತ್ತೀಸ್ ಗಢ ಕೂಡಾ ಒಂದು. ಸಮೀಕ್ಷೆಯ ಪ್ರಕಾರ ಬಿಜೆಪಿ ಶೇ. 50, ಕಾಂಗ್ರೆಸ್ ಶೇ. 34, ಬಿಎಸ್ಪಿ ಶೇ. 4 ಮತ್ತು ಆಮ್ ಆದ್ಮಿ ಪಕ್ಷ ಶೇ.3ರಷ್ಟು ಮತವನ್ನು ಪಡೆಯಬಹುದೆಂದು ಅಂದಾಜಿಸಲಾಗಿದೆ. ಸಮೀಕ್ಷೆಯ ಪ್ರಕಾರ ಈ ತಕ್ಷಣ ಚುನಾವಣೆ ನಡೆದರೆ ಬಿಜೆಪಿಗೆ ಅನುಕೂಲವಾಗಲಿದೆ.
ಈ ರಾಜ್ಯದಲ್ಲಿ ಪಕ್ಷಗಳಿಗೆ ಎಷ್ಟು ಸ್ಥಾನ ಸಿಗಬಹುದೆಂದು ಸಮೀಕ್ಷೆಯಲ್ಲಿ ತಿಳಿಸಲಿಲ್ಲ. ಶೇಕಡಾವರು ಮತಗಳಿಗೆಯ ಆಧಾರದ ಮೇಲೆ ಲೆಕ್ಕಾಚಾರ ಮಾಡುವುದಾದರೆ ರಾಜ್ಯದ ಒಟ್ಟು 11 ಸ್ಥಾನಗಳಲ್ಲಿ ಬಿಜೆಪಿ 5-7, ಕಾಂಗ್ರೆಸ್ 3-4, ಇತರರು (ಬಿಎಸ್ಪಿ,ಆಮ್ ಆದ್ಮಿ ಸೇರಿ) 2-3 ಸ್ಥಾನ ಪಡೆಯಬಹುದು.












Click it and Unblock the Notifications