By-Election Result: ಬಿಜೆಪಿಯ 3 ದಶಕದ ಭದ್ರಕೋಟೆಯಲ್ಲಿ ಅರಳಿದ ಜನ್ ಸುರಾಜ್ ಪಕ್ಷ, ಪ್ರಶಾಂತ್ ಕಿಶೋರ್‍‌ಗೆ ಜಯ

ಬಿಹಾರ ರಾಜ್ಯದ ಪ್ರಮುಖ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಬಂಕಿಪುರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಸೋಮವಾರ (ಆಗಸ್ಟ್ 3) ಪ್ರಕಟವಾಗಿದೆ. ಬಿಜೆಪಿ ವಿರುದ್ಧ ಸ್ಪರ್ಧಿಸಿದ್ದ ಜನ ಸುರಾಜ್ ಪಕ್ಷದ ವತಿಯಿಂದ ಕಣಕ್ಕಿಳಿದಿದ್ದ ಪ್ರಶಾಂತ್ ಕಿಶೋರ್ ಅವರು ಗೆದ್ದು ಬೀಗಿದ್ದಾರೆ. ಅವರ ಬೆಂಬಲಿಗರ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಕ್ಷೇತ್ರದ ಅಭಿವೃದ್ಧಿ ಪಣತೊಟ್ಟು ಕೆಲಸ ಮಾಡುವೆ ಎಂದು ಶಾಸಕ ಕಿಶೋರ್ ಹೇಳಿದ್ದಾರೆ.

30 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಬಂಕಿಪುರದಲ್ಲಿ ಜನ್ ಸುರಾಜ್ ಪಕ್ಷ ಅರಳಿದೆ. ಪ್ರಶಾಂತ್ ಕಿಶೋರ್ ಜಯಭೇರಿ ಭಾರಿಸಿದ್ದಕ್ಕೆ ಸಾಕಷ್ಟು ನಾಯಕರು ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ. ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ತಮ್ಮ ಮೊದಲ ಚುನಾವನೆಯಲ್ಲಿ ಸುಮಾರು 14,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಮೂರು ದಶಕಗಳ ಕೇಸರಿ ಪಡೆಯ ಪ್ರಾಬಲ್ಯ ಅಂತ್ಯಗೊಂಡಂತಾಗಿದೆ.

Prashant Kishor

24 ಸುತ್ತು ಬಳಿಕ ಕಿಶೋರ್ ಮುನ್ನಡೆ, ಗೆಲುವು

ಮತದಾನ ಎಣಿಕೆಯ 24 ಸುತ್ತುಗಳ ನಂತರ ಕಿಶೋರ್ 13,868 ಮತಗಳಿಂದ ಮುನ್ನಡೆ ಸಾಧಿಸಿದರು. ಇದು 1995 ರಿಂದ ಬಿಜೆಪಿ ಹೊರತು ಬೇರಾವುದೇ ಪಕ್ಷ ಇಲ್ಲಿ ಗೆದ್ದಿರಲಿಲ್ಲ. ಇದೀಗ ಜನ ಸುರಾಜ್ ಪಕ್ಷ ಹೊಸ ದಾಖಲೆ ಬರೆದಿದೆ. ಗೆಲುವು ಖಚಿತವಾಗುತ್ತಿದ್ದಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕಿಶೋರ್, ಬಿಜೆಪಿ ಆಡಳಿತ ವಿರುದ್ಧ ಕಿಡಿ ಕಾರಿದರು. ಕ್ಷೇತ್ರದ ಜನರ ಅಭಿವೃದ್ಧಿಯೇ ನನ್ನ ಧ್ಯೇಯವಾಗಿದೆ ಎಂದರು. ಜೊತೆಗೆ ಬಿಹಾರದ ಅಭಿವೃದ್ಧಿಯತ್ತ ಹೆಚ್ಚು ಗಮನಹರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕಿಶೋರ್ ಒತ್ತಾಯಿಸಿದರು.

ನಡುಗಿದ ಬಿಜೆಪಿ ಭದ್ರಕೋಟೆ

ಬಿಜೆಪಿಯ 30 ವರ್ಷಗಳ ಭದ್ರಕೋಟೆ ಕೇವಲ 30 ದಿನಗಳಲ್ಲಿ ನಡುಗಿ ಹೋಗಿದೆ. ಪ್ರಧಾನಿ ಮೋದಿ ಅವರು ರಾಜ್ಯದ ಕುರಿತು ಚಿಂತಿಸಬೇಕು. ಬಿಹಾರದ ಜನರು ಉದ್ಯೋಗಕ್ಕಾಗಿ ಇತರ ರಾಜ್ಯಗಳಿಗೆ ವಲಸೆ ಹೋಗಬೇಕಿಲ್ಲ. ಗುಜರಾತ್ 25 ಬಿಜೆಪಿ ಸಂಸದರನ್ನು ಸಂಸತ್ತಿಗೆ ಕಳುಹಿಸುವಂತೆಯೇ, ಬಿಹಾರ ಕೂಡ ನಿರಂತರವಾಗಿ ಎನ್‌ಡಿಎಗೆ ಬೆಂಬಲ ನೀಡಿದೆ ಎಂದು ಬಿಜೆಪಿಗೆ ಟಾಂಗ್ ನೀಡಿದರು.

ಇನ್ನು ಫಲಿತಾಂಶಕ್ಕು ಮುನ್ನವೇ ಕಿಶೋರ್ ಅವರ ಪತ್ನಿ ಡಾ. ಜಾಹ್ನವಿ ದಾಸ್ ಅವರು ಪತೆ ಗೆಲ್ಲುವ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದರು. ಬೆಂಬಲಿಸಿ ಆಶೀರ್ವಾದ ಮಾಡಿದ ಜನತೆಗೆ ಅವರು ಕೃತಜ್ಞತೆ ಅರ್ಪಿಸಿದರು. ಗೆಲುವಿನ ಬಳಿಕ ಕಿಶೋರ್ ಅವರು ಸಹ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಅರ್ಪಿಸಿದರು.

ಬಿಜೆಪಿ ಟೀಕಿಸಿದ ಟಿಎಂಸಿ ನಾಯಕ

ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ'ಬ್ರೇನ್ ಬಿಹಾರದಲ್ಲಿ ಒಂದು ಕ್ಷೇತ್ರದಲ್ಲಿ ದೀರ್ಘ ಕಾಲದವರೆಗೆ ಬೇರೂರಿದ್ದ ಬಿಜೆಪಿಯ ತನ್ನ ಕೋಟೆಯನ್ನು ಕಳೆದುಕೊಂಡಿದೆ. ಬಿಜೆಪಿ 52000 ಮತಗಳಿಂದ ಗೆದ್ದ ಸ್ಥಾನ ಇದಾಗಿತ್ತು. ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿ ನಂತರ ಬದಲಾವಣೆ ಮಾಡಿತು ಎಂದು ಬಂಕಿಪುರ ಸೋಲಿನ ಕುರಿತು ಪ್ರತಿಕ್ರಿಯಿಸಿದ ಅವರು ಬಿಜೆಪಿ ಆಡಳಿತವನ್ನು ಟೀಕಿಸಿದರು.

ಮಧ್ಯಪ್ರದೇಶ ದತಿಯಾ ಉಪಚುನಾವಣೆ

ರಾಜ್ಯದ ದತಿಯಾ ಕ್ಷೇತ್ರದಲ್ಲಿ ಫಲಿತಾಂಶದಲ್ಲಿ 15 ಮತ ಎಣಿಕೆ ಸುತ್ತುಗಳಲ್ಲಿ 11 ಸುತ್ತುಗಳ ನಂತರ ಕಾಂಗ್ರೆಸ್ ಅಭ್ಯರ್ಥಿ ಘನಶ್ಯಾಮ್ ಸಿಂಗ್ ಮುನ್ನಡೆ ಕಾಯ್ದುಕೊಂಡು ಗೆದ್ದು ಬೀಗಿದರು. ಇಲ್ಲಿ ಸಹ ಬಿಜೆಪಿಗೆ ಹಿನ್ನಡೆ ಆಗಿದ್ದು, ಕಮಲ ಪಡೆಯ ಅಭ್ಯರ್ಥಿ ಅಶುತೋಷ್ ತಿವಾರಿ ವಿರುದ್ಧ ಸಿಂಗ್ 12,000 ಕ್ಕೂ ಹೆಚ್ಚು ಮತಗಳ ಮೂಲಕ ಗೆದ್ದಿದ್ದಾರೆ. ಇಂದಿನ ಬಂಕಿಪುರ ಮತ್ತು ದಾತಿಯಾ ದಲ್ಲಿನ ಪ್ರಬಲ ಪೈಪೋಟಿ ಹಾಗೂ ಸೋಲು-ಗೆಲುವಿನ ಕುರಿತು ರಾಜಕೀಯ ವೀಕ್ಷಕರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಆಡಳಿತದಲ್ಲಿದ್ದ ಬಿಜೆಪಿಯು ನೇಮಕಾತಿ ಮತ್ತು ಪರೀಕ್ಷಾ ವಿಷಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವಿರೋಧ ಎದುರಿಸಿತ್ತು. ಹೀಗಾಗಿ ಯುವ ಜನತೆ ಬಿಜೆಪಿ ಕಿತ್ತೊಗೆಯಲು ತೀರ್ಮಾನಿಸಿದರು ಎಂದು ಹೇಳಿದ್ದಾರೆ.

ಗುಜರಾತ್ ಮಂಜಲ್ಪುರ ಉಪಚುನಾವಣೆ

ಪ್ರಧಾನಿ ತವರು ರಾಜ್ಯ ಗುಜರಾತ್‌ನ ಪ್ರಮುಖ ಕ್ಷೇತ್ರವಾದ ಮಂಜಲ್ಪುರ್ ಕ್ಷೇತ್ರದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸಿದೆ. ವಿರೋಧ ಪಕ್ಷದ ಅಭ್ಯಥಿಯೇ ಬಹುಮತ ಪಡೆದು ಗೆದಿದ್ದಾರೆ. ಇಂದಿನ ಈ ಮೂರು ರಾಜ್ಯಗಳ ಉಪ ಚುನಾವಣೆಗಳ ಫಲಿತಾಂಶವು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+