ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ರೈಲ್ವೇ ಇಲಾಖೆಗೆ ಹೊಸ ಕಾಯಕಲ್ಪ: ಸಚಿವ ಸುರೇಶ್ ಪ್ರಭು

ಈಗಾಗಲೇ ಐಟಿ ವಲಯದ ದೈತ್ಯ ಕಂಪನಿಗಳ ಪ್ರತಿನಿಧಿಗಳ ಜತೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ಸ್ಪಷ್ಟವಾದ ರೂಪುರೇಷೆಗಳು ಸಿದ್ಧಗೊಳ್ಳಲಿವೆ ಎಂದು ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.

|
Google Oneindia Kannada News

ನವದೆಹಲಿ, ಮಾರ್ಚ್ 27: ಶೀಘ್ರದಲ್ಲೇ ಇಡೀ ರೈಲ್ವೇ ಇಲಾಖೆಯನ್ನು ಡಿಜಿಟಲೀಕರಣಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೇ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.

ಈಗಾಗಲೇ ಐಟಿ ವಲಯದ ದೈತ್ಯ ಕಂಪನಿಗಳ ಪ್ರತಿನಿಧಿಗಳ ಜತೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ಸ್ಪಷ್ಟವಾದ ರೂಪುರೇಷೆಗಳು ಸಿದ್ಧಗೊಳ್ಳಲಿವೆ ಎಂದು ಅವರು ತಿಳಿಸಿದರು.

Prabhu advocates complete digitization of railways

ಡಿಜಿಟಲೀಕರಣದ ಜತೆ ಜತೆಗೇ ರೈಲ್ವೇ ಇಲಾಖೆಯ ಯಾವುದೇ ಮಾಹಿತಿಯು ಸೋರಿಕೆಯಾಗದಂತೆ ತಡೆಯಲು ಸೈಬರ್ ಸುರಕ್ಷೆಯನ್ನು ಅಳವಡಿಸುವ ಬಗ್ಗೆಯೂ ರೂಪುರೇಷೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಇದಲ್ಲದೆ, ರೈಲ್ವೇ ಇಲಾಖೆಯ ಸಂಪೂರ್ಣ ಡಿಜಿಟಲೀಕರಣದಿಂದಾಗಿ, ಭಾರತದ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯೇ ಉಂಟಾಗಲಿದೆ. ಸಂಪೂರ್ಣ ಡಿಜಿಟಲೀಕರಣದಿಂದ ರೈಲ್ವೇ ಇಲಾಖೆಗೆ ಮುಂದಿನ ವರ್ಷಗಳಲ್ಲಿ ಬಿಲಿಯನ್ ಗಟ್ಟಲೇ ಹಣ ಉಳಿತಾಯವಾಗುತ್ತದೆ ಎಂದು ಅವರು ಆಶಿಸಿದರು.

English summary
Advocating major push for complete digitalisation of the Indian Railways, Union Railway Minister Suresh Prabhu on Monday said the move could prove to be a game changer as it would result in saving billions of dollars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X